ಮಡಿಕೇರಿ, ಮೇ ೨೭: ಕೊಡಗಿನ ಸುಳ್ಯ-ಸಂಪಾಜೆ ಗೇಟ್ನ ಮೂಲಕ ಅಧಿಕೃತವಾಗಿ ಮರ ಸಾಗಾಟ ಮಾಡಲು ವಾಹನ ಅನುಮತಿಸಲು ಮಾಲೀಕರಿಂದ ಅಲ್ಲಿನ ತಪಾಸಣಾ ಗೇಟ್ನಲ್ಲಿ ಅರಣ್ಯ ಸಿಬ್ಬಂದಿಯೋರ್ವರು ಲಂಚದ ಹಣಕ್ಕೆ ಬೇಡಿಕೆ ಮುಂದಿಡುತ್ತಿದ್ದಾರೆ ಎಂಬ ಆರೋಪವೊಂದು ಬಯಲಾಗಿದೆ. ಈ ಕುರಿತಾದ ವೀಡಿಯೋ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‘ಶಕ್ತಿ’ಗೆ ತಿಳಿದು ಬಂದAತೆ ಇದು ಮಂಗಳೂರು ಬಂದರಿನ ಮೂಲಕ ವಿದೇಶದಿಂದ ಆಮದಾಗುವ ಅಧಿಕೃತ ರೀತಿಯ ಮರ ಎನ್ನಲಾಗಿದೆ. ಇದಕ್ಕೆ ಆಮದು ಶುಲ್ಕದ ಪಾವತಿ ಮೊದಲೇ ಆಗಿರುತ್ತದೆ. ಆದರೆ ಈ ಮರವನ್ನು ಕೊಡಗು-ಮೈಸೂರು ಕಡೆಗೆ ಸಾಗಿಸುವ ವಾಹನಗಳ ಮಾಲೀಕರಿಗೆ ಇಲ್ಲಿನ ಅರಣ್ಯ ಸಿಬ್ಬಂದಿಯೋರ್ವರು ಅವಕಾಶ ನಿರಾಕರಿಸಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
(ಮೊದಲ ಪುಟದಿಂದ) ಮರಕ್ಕೆ ಸಂಬAಧಿಸಿದAತೆ ಮೂಲ ದಾಖಲೆಗಳನ್ನೇ ತರಬೇಕು ಹಾಗೂ ಮತ್ತಿತರ ಆಕ್ಷೇಪವನ್ನು ಅನಗತ್ಯವಾಗಿ ಹೇಳುವ ಮೂಲಕ ಈ ಸಿಬ್ಬಂದಿ ಹಣ ಪೀಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಇದಾಗಿದೆ. ಇದೀಗ ಈ ದೃಶ್ಯವನ್ನೊಳಗೊಂಡ ವೀಡಿಯೋವನ್ನು ಯಾರೋ ಚಿತ್ರೀಕರಿಸಿದ್ದು, ಇದು ಭಾರೀ ಸುದ್ದಿಯಾಗಿದೆ.
ವರದಿಗೆ ಸೂಚನೆ
ಈ ಪ್ರಕರಣಕ್ಕೆ ಸಂಬAಧಿಸಿದAತೆ ಈ ವ್ಯಾಪ್ತಿಯ ಡಿಎಫ್ಓ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ತನಿಖಾ ವರದಿಯ ಬಳಿಕ ಈ ಬಗ್ಗೆ ಕ್ರಮಜರುಗಿಸುವುದಾಗಿ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.