
ಪೊನ್ನಂಪೇಟೆ, ಮೇ ೨೭: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ನೂತನ ಕಾರ್ಯಾಧ್ಯಕ್ಷರಾಗಿ, ತೀತಿರ ಧರ್ಮಜ ಉತ್ತಪ್ಪ ಅವರು ಅವಿರೋಧವಾಗಿ ನೇಮಕಗೊಂಡಿದ್ದಾರೆ. ಕೆ.ಕೆ. ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೊಡಗಿನ ಹಲವು ಕಾಂಗ್ರೆಸ್ ಪ್ರಮುಖರು ಆಕಾಂಕ್ಷಿಗಳಾಗಿದ್ದರೂ ಅಂತಿಮವಾಗಿ ಕೆಪಿಸಿಸಿ ಧರ್ಮಜ ಉತ್ತಪ್ಪ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕಗೊಳಿಸುವ ಮೂಲಕ ಮಣೆ ಹಾಕಿದೆ. ಈ ಕುರಿತು ಆದೇಶ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕೊಡಗು ಜಿಲ್ಲಾ ಡಿಸಿಸಿಯ ನೂತನ ಕಾರ್ಯಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಅವರನ್ನು ನೇಮಿಸಿದ್ದು, ಅದರಂತೆ ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷವನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಸಂಘಟಿಸುವAತೆ ಸೂಚಿಸಿದ್ದಾರೆ. ಅಲ್ಲದೆ, ಇದುವರೆಗೂ ಜಾರಿಯಲ್ಲಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಕೆಪಿಸಿಸಿ ವಿಸರ್ಜಿಸಿರುವುದಾಗಿ ಅವರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಧರ್ಮಜ ಉತ್ತಪ್ಪ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
(ಮೊದಲ ಪುಟದಿಂದ) ಅವರು, ಕೆಪಿಸಿಸಿಯ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮತ್ತು ಸಲೀಂ ಅಹಮದ್ ಅವರ ಸಮ್ಮುಖದಲ್ಲಿ ಧರ್ಮಜ ಉತ್ತಪ್ಪ ಅವರಿಗೆ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಇದೀಗ ಸದ್ಯಕ್ಕೆ ಧರ್ಮಜ ಉತ್ತಪ್ಪ ಅವರು ಡಿಸಿಸಿ ಕಾರ್ಯಾಧ್ಯಕ್ಷರಾಗಿ ಕೊಡಗಿನ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ಮುಂದೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸುವ ಸಂದರ್ಭದಲ್ಲಿ ಎಐಸಿಸಿಯ ಅನುಮೋದನೆ ಪಡೆದು ಧರ್ಮಜ ಉತ್ತಪ್ಪ ಅವರನ್ನು ಕೊಡಗು ಡಿಸಿಸಿಯ ಪೂರ್ಣಾವಧಿ ಅಧ್ಯಕ್ಷರಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಿAದಿನಿAದಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಧರ್ಮಜ ಉತ್ತಪ್ಪ ಅವರು, ಕಳೆದ ೩೦ ವರ್ಷಗಳಿಂದ ವಿವಿಧ ಹುದ್ದೆಗಳು ಪಕ್ಷದ ಏಳಿಗೆಗಾಗಿ ದುಡಿದವರಾಗಿ ದ್ದಾರೆ. ಯುವ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ಧರ್ಮದ ಉತ್ತಪ್ಪ ಅವರು ಇದೀಗ ಡಿಸಿಸಿಯ ನೂತನ ಕಾರ್ಯಾಧ್ಯಕ್ಷರಾಗಿದ್ದು, ಕಿರಿಯ ವಯಸ್ಸಿನಲ್ಲೇ ಕೊಡಗು ಜಿಲ್ಲಾ ಕಾಂಗ್ರೆಸ್ ಸಾರಥಿಯಾದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ
ಪರಿಚಯ: ಟಿ. ಶೆಟ್ಟಿಗೇರಿ ಸಮೀಪದ ಹರಿಹರ ಗ್ರಾಮದ ತೀತಿರ ಮುತ್ತಣ್ಣ ಮತ್ತು ಕಾವೇರಮ್ಮ ದಂಪತಿಗಳ ಹಿರಿಯ ಪುತ್ರರಾಗಿ ಕೃಷಿಕ ಕುಟುಂಬದಲ್ಲಿ ಜನಿಸಿದ ಧರ್ಮಜ ಉತ್ತಪ್ಪ, ೧೯೯೧ರಲ್ಲಿ ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಮಡಿಕೇರಿ, ಮೇ ೨೭: ಕೊಡಗಿನ ಸುಳ್ಯ-ಸಂಪಾಜೆ ಗೇಟ್ನ ಮೂಲಕ ಅಧಿಕೃತವಾಗಿ ಮರ ಸಾಗಾಟ ಮಾಡಲು ವಾಹನ ಅನುಮತಿಸಲು ಮಾಲೀಕರಿಂದ ಅಲ್ಲಿನ ತಪಾಸಣಾ ಗೇಟ್ನಲ್ಲಿ ಅರಣ್ಯ ಸಿಬ್ಬಂದಿಯೋರ್ವರು ಲಂಚದ ಹಣಕ್ಕೆ ಬೇಡಿಕೆ ಮುಂದಿಡುತ್ತಿದ್ದಾರೆ ಎಂಬ ಆರೋಪವೊಂದು ಬಯಲಾಗಿದೆ. ಈ ಕುರಿತಾದ ವೀಡಿಯೋ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಶಕ್ತಿ’ಗೆ ತಿಳಿದು ಬಂದAತೆ ಇದು ಮಂಗಳೂರು ಬಂದರಿನ ಮೂಲಕ ವಿದೇಶದಿಂದ ಆಮದಾಗುವ ಅಧಿಕೃತ ರೀತಿಯ ಮರ ಎನ್ನಲಾಗಿದೆ. ಇದಕ್ಕೆ ಆಮದು ಶುಲ್ಕದ ಪಾವತಿ ಮೊದಲೇ ಆಗಿರುತ್ತದೆ. ಆದರೆ ಈ ಮರವನ್ನು ಕೊಡಗು-ಮೈಸೂರು ಕಡೆಗೆ ಸಾಗಿಸುವ ವಾಹನಗಳ ಮಾಲೀಕರಿಗೆ ಇಲ್ಲಿನ ಅರಣ್ಯ ಸಿಬ್ಬಂದಿಯೋರ್ವರು ಅವಕಾಶ ನಿರಾಕರಿಸಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಮಿತಿಯ ಸದಸ್ಯರಾಗುವ ಮೂಲಕ ರಾಜಕಾರಣ ಆರಂಭಿಸಿದರು. ಧರ್ಮಜ ಉತ್ತಪ್ಪ ಅವರ ಇಡೀ ಕುಟುಂಬಕ್ಕೆ ಕಾಂಗ್ರೆಸ್ ಹಿನ್ನೆಲೆ ಉಳ್ಳ ಕಾರಣದಿಂದಾಗಿ ಸಹಜವಾಗಿಯೇ ಕಾಂಗ್ರೆಸ್ನತ್ತ ಆಕರ್ಷಿತರಾದ ಇವರು ರಾಜೀವ್ ಗಾಂಧಿಯವರಿAದ ಮತ್ತಷ್ಟು ಪ್ರೇರಿತರಾಗಿ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾದರು.
೨೦೦೧ರಿಂದ ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಪಕ್ಷದಲ್ಲಿ ಹುದ್ದೆ ಅಲಂಕರಿಸಿದ ಧರ್ಮಜ ಉತ್ತಪ್ಪ ಅವರು, ಹಂತಹAತವಾಗಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಮಧ್ಯೆ ೨೦೦೧ರಲ್ಲಿ ಹರಿಹರ ಗ್ರಾಮದಿಂದ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಧರ್ಮಜ ಉತ್ತಪ್ಪ ಅವರು ಒಂದು ಅವಧಿಗೆ ಗ್ರಾ. ಪಂ. ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
೨೦೦೧ರಿಂದ ೨೦೦೭ರವರೆಗೆ ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಅವರು, ೨೦೦೭ರಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಗೊಂಡರು.
೨೦೧೫ ರಿಂದ ೨೦೧೯ ರವರೆಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಧರ್ಮಜ ಉತ್ತಪ್ಪ ಅವರು, ರಾಷ್ಟಿçÃಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಈ ಹಿಂದೆ ದೆಹಲಿ, ಹೈದರಾಬಾದ್, ಬೆಂಗಳೂರು, ಕೊಚ್ಚಿನ್ ಮೊದಲಾದೆಡೆ ಆಯೋಜಿಸಲಾಗಿದ್ದ ರಾಷ್ಟಿçÃಯ ಯುವ ಕಾಂಗ್ರೆಸ್ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡವರಾಗಿದ್ದಾರೆ.
ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಕೇಂದ್ರ ಸರಕಾರ ರಚಿಸಿದ ಕಸ್ತೂರಿ ರಂಗನ್ ಅವರ ವರದಿಯಿಂದ ಕೊಡಗು ಜಿಲ್ಲೆಯ ಅಸ್ತಿತ್ವಕ್ಕೆ ಧÀಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಹುಟ್ಟಿಕೊಂಡ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಮುಂಚೂಣಿ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹರಿಹರದಲ್ಲಿ ಇರುವ ಪುರಾತನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ೨೦೧೧ರಿಂದ ಕಾರ್ಯನಿರ್ವಹಿಸುತ್ತಿರುವ ಧರ್ಮಜ ಉತ್ತಪ್ಪ ಅವರು, ಪ್ರಸ್ತುತ ಟಿ. ಶೆಟ್ಟಿಗೇರಿ ವಿಎಸ್ಎಸ್ಎನ್.ನ ನಿರ್ದೇಶಕ ರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗಡಿಯಲ್ಲಿ ಸ್ವಾಗತ
ಗೋಣಿಕೊಪ್ಪ : ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಕಾರ್ಯಧÀ್ಯಕ್ಷರಾಗಿ ನೇಮಕ ಗೊಂಡ ತೀತಿರ ಧರ್ಮಜ ಉತ್ತಪ್ಪರವರನ್ನು ಕೊಡಗಿನ ಗಡಿಭಾಗವಾದ ತಿತಿಮತಿ ಸಮೀಪದ ಆನೆಚೌಕೂರು ಗೇಟ್ ಬಳಿ ಸ್ವಾಗತಿಸಲಾಯಿತು.
ಬೆಂಗಳೂರಿನಿAದ ಆಗಮಿಸಿದ ತೀತಿರ ಧರ್ಮಜ ಉತ್ತಪ್ಪ ರವರನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವ ದಲ್ಲಿ ಪಕ್ಷದ ಮುಖಂಡರು ಹೂ ಗುಚ್ಚ ನೀಡಿ ಆತ್ಮೀಯ ವಾಗಿ ಬರಮಾಡಿ ಕೊಂಡರು.
ಈ ವೇಳೆ ಜಿ.ಪಂ. ಸದಸ್ಯರಾದ ಬಿ.ಎನ್.ಪ್ರಥ್ಯು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ಪ್ರ. ಕಾರ್ಯದರ್ಶಿ ಎ.ಜೆ.ಬಾಬು, ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧÀ್ಯಕ್ಷ ಆಲೀರ ರಶೀದ್, ಸೇರಿದಂತೆ ಇನ್ನಿತರರು ಹಾಜರಿದ್ದರು
-ರಫೀಕ್ ತೂಚಮಕೇರಿ