ಜಾತಿ, ಧರ್ಮ, ವರ್ಣ, ಭಾಷೆಗೂ ಮೀರಿ ಸದಾ ಜನರೊಂದಿಗೆ ಒಡನಾಡಿಕೊಂಡು, ನಾಡಿನ ಉದ್ದಗಲಕ್ಕೂ ನಡೆಯುತ್ತಿದ್ದ ಜನಪರ ಚಳುವಳಿ ಗಳಿಗೆ ಸ್ಫೂರ್ತಿಯಾಗಿದ್ದ ಎಚ್.ಎಸ್. ದೊರೆಸ್ವಾಮಿ ಅವರು ಇನ್ನು ನೆನಪು ಮಾತ್ರ. ಇಳಿ ವಯಸ್ಸಿನಲ್ಲಿಯೂ ಹೋರಾಟಗಳನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಇವರು, ತಮ್ಮ ವಿರುದ್ಧ ವಿಕೃತವಾಗಿ ಮಾಡುತ್ತಿದ್ದ ಟೀಕೆ, ಅವಮಾನ, ವ್ಯಂಗ್ಯ, ತೇಜೋವಧೆ ಮೊದಲಾದವುಗಳನ್ನು ‘ಗಾಂಧಿವಾದ'ದ ಮೂಲಕವೇ ಎದುರಿಸುತ್ತಿದ್ದ ಅಪ್ಪಟ ಗಾಂಧಿವಾದಿಯೂ ಆಗಿದ್ದರು. ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಎಂಬ ಪೂರ್ಣ ಹೆಸರಿನ ಹಿರಿಯಜ್ಜ, ತಮ್ಮ ತಾತ್ವಿಕ ವಿರೋಧಿಗಳಿಗೂ ಮತ್ತು ಟೀಕಾಕಾರರಿಗೂ ಒಳಿತನ್ನೇ ಬಯಸುತ್ತಿದ್ದ ಮೇರು ವ್ಯಕ್ತಿತ್ವದವರು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ದೊರೆಸ್ವಾಮಿಯವರ ಕ್ರಿಯಾಶೀಲ ವ್ಯಕ್ತಿತ್ವದ ಕುರಿತಾಗಿ ಅವರನ್ನು " ಕರ್ನಾಟಕದ ಆತ್ಮಸಾಕ್ಷಿ" ಎಂದು ಬಣ್ಣಿಸಿದ್ದಾರೆ.
ಜನನ ಮತ್ತು ಶಿಕ್ಷಣ: ದೊರೆಸ್ವಾಮಿ ಅವರು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಹಾರೋಹಳ್ಳಿ ಎಂಬ ಗ್ರಾಮದಲ್ಲಿ (ಹಾರೋಹಳ್ಳಿ ಈಗಿನ ರಾಮನಗರ ಜಿಲ್ಲೆಯಲ್ಲಿದೆ ಇದು ಹೇಳಲಾಗುತ್ತಿದೆ) ೧೯೧೮ರ ಏಪ್ರಿಲ್ ೧೦ ರಂದು ಶ್ರೀನಿವಾಸಯ್ಯ ದಂಪತಿಯ ಪುತ್ರರಾಗಿ ಜನಿಸಿದರು. ೫ ವರ್ಷ ಪ್ರಾಯವಾಗಿದ್ದಾಗಲೇ ಪೋಷಕರನ್ನು ಕಳೆದುಕೊಂಡ ಇವರು, ನಂತರ ಗ್ರಾಮದ ಶಾನುಭೋಗರಾಗಿದ್ದ ತಮ್ಮ ಅಜ್ಜ ಶಾಮಣ್ಣ ಅವರ ಆಶ್ರಯದಲ್ಲಿ ಬೆಳೆದರು.
ದೊರೆಸ್ವಾಮಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದರು. ಮುಂದಿನ ಶಿಕ್ಷಣಕಾಗಿ ಬೆಂಗಳೂರಿಗೆ ತೆರಳಿದ ಇವರು ಪ್ರೌಢ ಶಿಕ್ಷಣವನ್ನು ಅಲ್ಲಿ ಪೂರೈಸಿದರು. ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರ್ಪಡೆಗೊಂಡು ಅಲ್ಲಿಂದ ೧೯೪೨ರಲ್ಲಿ ಬಿಎಸ್ಸಿ ಪದವೀಧರರಾಗಿ ಹೊರಬಂದರು. ಪದವಿ ಪಡೆದ ಬಳಿಕ ಬೆಂಗಳೂರಿನ ಪ್ರೌಢ ಶಾಲೆಯೊಂದರಲ್ಲಿ ಗಣಿತ ಮತ್ತು ಭೌತಶಾಸ್ತçದ ಅಧ್ಯಾಪಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು.
ಹೋರಾಟವನ್ನೇ ಬದುಕಾಗಿಸಿಕೊಂಡ ನಿಸ್ವಾರ್ಥಿ: ಅದಾಗಲೇ ದೇಶದಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹೆಚ್ಚುತ್ತಿದ್ದ ಕಾಲವದು. ಆರಂಭದಿAದಲೇ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ವಿರೋಧಿ ಧೋರಣೆ ತಳೆದಿದ್ದ ದೊರೆಸ್ವಾಮಿಯವರನ್ನು ಸ್ವಾತಂತ್ರ್ಯ ಚಳುವಳಿ ಆಕರ್ಷಿಸಿತು. ಇದರಿಂದಾಗಿ ಅಧ್ಯಾಪಕ ವೃತ್ತಿಗೆ ತಿಲಾಂಜಲಿ ಹೇಳಿ ೨೫ನೇ ವಯಸ್ಸಿನಲ್ಲಿ ಸ್ವತಂತ್ರ ಹೋರಾಟಕ್ಕೆ ಧುಮುಕಿ ಬಿಟ್ಟರು. 'ಕ್ವಿಟ್ ಇಂಡಿಯಾ' ಚಳುವಳಿ ಪ್ರಾರಂಭವಾದಾಗ ಬ್ರಿಟಿಷರ ಕಾರ್ಯ ಕಲಾಪಕ್ಕೆ ಅಡ್ಡಿಪಡಿಸಲು ಒಂದು ವಿಧಾನವಾಗಿ ಬ್ರಿಟಿಷರ ಅಧಿಕೃತ ದಾಖಲೆ ಪತ್ರಗಳಿಗೆ ಬೆಂಕಿ ಹಚ್ಚುವ ಮತ್ತು ರೆಕಾರ್ಡ್ ಕೋಣೆಗಳಲ್ಲಿ ಸಣ್ಣ ಪ್ರಮಾಣದ ಬಾಂಬುಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಹಿರಿಯರಿಂದ ಬೇಷ್ ಎನಿಸಿಕೊಂಡರು.
ಸ್ವಾತAತ್ರ್ಯ ಚಳುವಳಿ ತೀವ್ರಗತಿಯಲ್ಲಿ ನಡೆಯುತ್ತಿದ್ದಂತೆ ಬಾಂಬ್ ಸರಬರಾಜು ಮಾಡುತ್ತಿದ್ದ, ಹೋರಾಟಗಾರ ರಾಮಚಂದ್ರ ಎಂಬುವವರನ್ನು ಪೊಲೀಸರು ಬಂಧಿಸಿ ಮತ್ತಷ್ಟು ವಿಚಾರಿಸಿದಾಗ ದೊರೆಸ್ವಾಮಿ ಅವರ ಹೆಸರು ಹೇಳಬೇಕಾಯಿತು. ಈ ಕಾರಣದಿಂದ ದೊರೆಸ್ವಾಮಿ ಅವರನ್ನು ಬಂಧಿಸಿದ ಪೊಲೀಸರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನಿರ್ದಿಷ್ಟವಾಗಿ ಬಂಧನದಲ್ಲಿಡಲಾಯಿತು. ಸ್ವಾತಂತ್ರö್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಸಹೋದರ ಎಚ್.ಎಸ್. ಸೀತಾರಾಮ್ ಅವರು ಕೂಡ ಇದೇ ಕಾರಾಗೃಹದಲ್ಲಿ ಬಂಧಿಯಾಗಿದ್ದರು.
ಜೈಲಿನಲ್ಲಿಯೂ ಸಮಯ ವ್ಯರ್ಥ ಮಾಡದ ದೊರೆಸ್ವಾಮಿಯವರು ಸಹಖೈದಿಗಳಿಗೆ ಸ್ವಾತಂತ್ರö್ಯ ಹೋರಾಟದ ಕುರಿತ ಸ್ಪೂರ್ತಿ ಕಥೆಗಳನ್ನು ಹೇಳುತ್ತಾ ‘ಕ್ಲಾಸ್' ತೆಗೆದುಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ದೊರೆಸ್ವಾಮಿ ಅವರು ಹಿಂದಿ ಮತ್ತು ತಮಿಳು ಭಾಷೆಯನ್ನು ಮಾತನಾಡಲು ಕಲಿತರು. ಬಿಡುವಿನ ಸಂದರ್ಭದಲ್ಲಿ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದರು.
೧೯೪೪ ಜನವರಿ ೨೬ ರಂದು ದೊರೆಸ್ವಾಮಿ ಸೇರಿದಂತೆ ಜೈಲಿನ ಕೈದಿಗಳನ್ನು ಬ್ರಿಟಿಷ್ ಅಧಿಕಾರಿಗಳ ನಿರ್ದೇಶನದಂತೆ ಅಲ್ಲಿನ ಕಾವಲುಗಾರರು ಮಾರಣಾಂತಿಕವಾಗಿ ಥಳಿಸಿದರು. ದೊರೆಸ್ವಾಮಿಯವರು ಅದಕ್ಕೂ ಜಗ್ಗದಿದ್ದಾಗ ಪ್ರತ್ಯೇಕ ಕೋಣೆಯಲ್ಲಿರಿಸಿ ಶಿಕ್ಷೆ ನೀಡಲಾಗುತ್ತಿತ್ತು. ಅದಾಗಲೇ ‘ಪೂರ್ಣ ಸ್ವರಾಜ್' ಎಂಬ ಘೋಷಣೆಯೊಂದಿಗೆ ಜೈಲಿನ ಕೋಣೆಯಿಂದಲೇ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಜೈಲು ಅಧಿಕಾರಿಗಳು ಆಹಾರವನ್ನು ನಿರಾಕರಿಸಿದರು. ಹೀಗೆ ಜೈಲಿನಲ್ಲಿ ನಿರಂತರ ಹಿಂಸೆ ಅನುಭವಿಸಿದ ದೊರೆಸ್ವಾಮಿಯವರು ೧೪ ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡರು.
ಜೈಲಿನಿಂದ ಬಿಡುಗಡೆಯಾದ ನಂತರ, ದೊರೆಸ್ವಾಮಿ ಅವರು ಬೆಂಗಳೂರಿನಲ್ಲಿ ‘ಸಾಹಿತ್ಯ ಮಂದಿರ' ಎಂಬ ಹೆಸರಿನಿಂದ ಪ್ರಕಾಶನ ಮನೆ ಮತ್ತು ಪುಸ್ತಕ ಮಳಿಗೆಯನ್ನು ಸ್ಥಾಪಿಸಿದರು. ಆ ಸಮಯದಲ್ಲಿ ನಷ್ಟದಲ್ಲಿದ್ದ ವೃತ್ತಪತ್ರಿಕೆ ‘ಪೌರವಾಣಿ'ಯ ಪ್ರಕಟಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಸ್ನೇಹಿತರೊಬ್ಬರ ಮನವಿಗೆ ಸ್ಪಂದಿಸಿದ ದೊರೆಸ್ವಾಮಿಯವರು ಮತ್ತೆ ಮೈಸೂರಿಗೆ ತೆರಳಿ ಪೂರ್ಣಪ್ರಮಾಣದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸತೊಡಗಿದರು. ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಿದ್ದ ಅಂದಿನ ಸಮಯದಲ್ಲಿ ದೊರೆಸ್ವಾಮಿಯವರು ತಮ್ಮ ಪತ್ರಿಕೆಯನ್ನು ಬಹಿರಂಗಪಡಿಸದ ಸ್ಥಳಗಳಿಂದ ಪ್ರಕಟಿಸುವುದನ್ನು ಮುಂದುವರೆಸಿ ದಿಟ್ಟತನ ಮೆರೆಯುತ್ತಿದ್ದರು.
೧೯೫೦ ರ ದಶಕದಲ್ಲಿ ದೊರೆಸ್ವಾಮಿಯವರು 'ಭೂದಾನ' ಚಳವಳಿಯಲ್ಲಿ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಆಂದೋಲನದಲ್ಲಿಯೂ ಭಾಗವಹಿಸಿದ್ದಾರೆ. ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಇಂದಿರಾಗಾAಧಿಯವರು ಹೇರಿದ ಸಂದರ್ಭದಲ್ಲಿ "ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಇಂದಿರಾ" ಎಂದು ಇಂದಿರಾಗಾAಧಿ ಯವರಿಗೆ ಪತ್ರ ಬರೆದು ತುರ್ತು ಪರಿಸ್ಥಿತಿ ವಿರುದ್ಧ ಜನಾಂದೋಲನ ನಡೆಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕಾಗಿ ೧೯೭೫ ರಲ್ಲಿ ದೊರೆಸ್ವಾಮಿ ಅವರನ್ನು ೪ ತಿಂಗಳು ಜೈಲಿಗೆ ಹಾಕಲಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ಅಂದು ರೂಪುಗೊಂಡಿದ್ದ ಜೆಪಿ ಚಳವಳಿಯತ್ತ ಆಕರ್ಷಿತ ರಾದ ದೊರೆಸ್ವಾಮಿಯವರು ಜೆಪಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದರು.
೧೯೮೦ರ ಈಚೆಗೆ ರೈತರು ಮತ್ತು ವಸತಿ ಮತ್ತು ಭೂರಹಿತ ಸಮುದಾಯಗಳ ಹಕ್ಕುಗಳಿಗಾಗಿ ವಿವಿಧ ಚಳುವಳಿಗಳಲ್ಲಿ ತಮ್ಮನ್ನು ನಿರಂತರ ವಾಗಿ ತೊಡಗಿಸಿಕೊಂಡರು. ಇದಲ್ಲದೆ ಭ್ರಷ್ಟಾಚಾರದ ಕಡು ವಿರೋಧಿಯಾಗಿದ್ದ ದೊರೆಸ್ವಾಮಿಯವರು ನಾಡಿನ ಉದ್ದಗಲಕ್ಕೂ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ೨೦೦೧ರ ನಂತರ ತಮ್ಮ ಸಾರ್ವಜನಿಕ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಿದ ದೊರೆಸ್ವಾಮಿ ಯವರು, ಭ್ರಷ್ಟಾಚಾರಕ್ಕಿಂತ ಕೋಮುವಾದ ಅಪಾಯ ಎಂದು ಮನಗಂಡು ಕೋಮುವಾದದ ವಿರುದ್ಧವೂ ತಮ್ಮ ಗಾಂಧಿವಾದದ ಅಸ್ತçದ ಮೂಲಕ ಧ್ವನಿಯೆತ್ತಿ ಗಮನಸೆಳೆದರು.
ಬೆಂಗಳೂರು ನಗರದ ಮತ್ತು ಹೊರವಲಯದ ವಿವಿಧಡೆ ಜಲಮೂಲದ
ಹಿಂಸೆ ಅನುಭವಿಸಿದ ದೊರೆಸ್ವಾಮಿಯವರು ೧೪ ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡರು.

ಬೆಂಗಳೂರು ನಗರದ ಮತ್ತು ಹೊರವಲಯದ ವಿವಿಧಡೆ ಜಲಮೂಲದ ಪ್ರದೇಶಗಳು ಅತಿಕ್ರಮಣವಾದ ಅನ್ಯಾಯದ ಕುರಿತು ಬಹುದೊಡ್ಡ ಸಮರವನ್ನೇ ದೊರೆಸ್ವಾಮಿಯವರು ಸಾರಿದರು. ಅಲ್ಲದೆ, ಬೆಂಗಳೂರು ನಗರದ ವಿವಿಧ ಪ್ರದೇಶಗಳ ಅಲ್ಲಲ್ಲಿ ಕಸವನ್ನು ಎಸೆಯುವುದರ ವಿರುದ್ದ ಭುಗಿಲೆದ್ದ ಹಲವಾರು ಸಾರ್ವಜನಿಕ ಹೋರಾಟಗಳಿಗೆ ದೊರೆಸ್ವಾಮಿ ಅವರೇ ಸ್ಫೂರ್ತಿಯಾಗಿದ್ದರು.
ಇವರ ಹೋರಾಟದ ಫಲವಾಗಿ ಬೆಂಗಳೂರು ನಗರದಲ್ಲಿ ಆರು ಹೊಸ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣವಾದವು. ಇದರ ಸಂಪೂರ್ಣ ಶ್ರೇಯಸ್ಸು ದೊರೆಸ್ವಾಮಿ ಅವರಿಗೆ ಸಲ್ಲಬೇಕು. ೨೦೧೪ರ ಅಕ್ಟೋಬರ್ನಲ್ಲಿ ವಿವಿಧ ಸಂಘಟನೆಗಳ ಬೆಂಬಲದೊAದಿಗೆ ಎ. ಟಿ. ರಾಮಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆಸಿದ ಭೂಅಕ್ರಮಣ ವಿರೋಧಿ ಪ್ರತಿಭಟನೆಗಳಿಗೂ ದೊರೆಸ್ವಾಮಿಯವರು ಸಮರ್ಥವಾದ ನೇತೃತ್ವ ನೀಡಿದರು. ರಾಜ್ಯ ಸರ್ಕಾರ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ದೊರೆಸ್ವಾಮಿಯವರು ಗಟ್ಟಿದನಿಯಲ್ಲಿ ಸರಕಾರವನ್ನು ಒತ್ತಾಯಿಸಿದರು. ೩೮ ದಿನಗಳ ತಮ್ಮ ನಿರಂತರ ಹೋರಾಟದ ನಂತರ ಸರ್ಕಾರವು ದೊರೆಸ್ವಾಮಿಯವರ ಬೇಡಿಕೆಗಳಿಗೆ ಮಣಿಯಬೇಕಾಯಿತು.
೨೦೧೬ ರಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ದೊರೆಸ್ವಾಮಿಯವರು ಅದರ ಹೊರಗೆ ರಾಜ್ಯದ ಭೂಮಿ ಮತ್ತು ವಸತಿಹೀನರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂಬ ಒತ್ತಾಯದೊಂದಿಗೆ ಚಳುವಳಿ ಪ್ರಾರಂಭಿಸಿದರು. ಇದರಿಂದ ಮುಜುಗರಕ್ಕೊಳಗಾದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊರೆಸ್ವಾಮಿ ಅವರ ಬಳಿ ಬಂದು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರಲ್ಲದೆ ಚಳುವಳಿಯನ್ನು ಕೊನೆಗೊಳಿಸಬೇಕೆಂದು ಮನವಿ ಮಾಡಿದರು. ಕಳೆದ ಕೆಲ ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ನಡೆದ ದಿಡ್ಡಳ್ಳಿ ಆದಿವಾಸಿ ಹೋರಾಟದಲ್ಲೂ ತಮ್ಮ ಹೋರಾಟದ ಸಂಗಾತಿಯಾಗಿದ್ದ ಎ. ಕೆ. ಸುಬ್ಬಯ್ಯ ಅವರ ಕರೆಯ ಮೇರೆಗೆ ಭಾಗಿಯಾಗಿದ್ದರು.
ಮುಡಿಗೇರಿದ ಪ್ರಶಸ್ತಿ-ಪುರಸ್ಕಾರಗಳು: ಸಮಾಜದ ಬಡ ವರ್ಗದವರ ಸಾಮಾಜಿಕ ಏಳಿಗೆಗಾಗಿ ತಮ್ಮ ಬದುಕನ್ನು ಮುಡಿಪಿಟ್ಟ ಅತ್ಯುತ್ತಮ ಸೇವಾ ಕಾರ್ಯಕ್ಕಾಗಿ ೨೦೦೭ರಲ್ಲಿ ದೊರೆಸ್ವಾಮಿ ಅವರಿಗೆ ‘ಗಾಂಧಿ ಸೇವಾ' ಪ್ರಶಸ್ತಿಯನ್ನು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಪ್ರದಾನ ಮಾಡಿದರು. ಪ್ರತಿಷ್ಠಿತ ‘ರಾಷ್ಟಿçÃಯ ಬಸವ ಪ್ರಶಸ್ತಿ'ಯನ್ನು ೨೦೧೮ರಲ್ಲಿ ಇವರಿಗೆ ನೀಡಿ ಆದರಿಸಲಾಗಿದೆ. ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಯಾದ 'ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್' ಪ್ರಶಸ್ತಿ ೨೦೧೯ರಲ್ಲಿ ಇವರಿಗೆ ಸಂದಿದೆ. ದುರ್ಬಲ ಸಮುದಾಯದ ಗಟ್ಟಿ ಧ್ವನಿಯಾಗಿದ್ದ ‘ಕರ್ನಾಟಕ ರತ್ನ' ಎಚ್. ಎಸ್. ದೊರೆಸ್ವಾಮಿ ಅವರು, ದಟ್ಟ ಮನುಷ್ಯ ಪ್ರೀತಿಯ ದಿಟ್ಟ ನಡೆ ನುಡಿಯ ಪ್ರಖರ ಹೋರಾಟಗಾರರಾಗಿ ಸಮಾನತೆಯ ಸಮಾಜಕ್ಕೆ ಅಂತಃಕರಣದ ಕಿವಿಗೊಟ್ಟು ಸಾರ್ಥಕ ಬದುಕು ಸಾಗಿಸಿ, ಅಸಂಖ್ಯಾತ ಮಾನವ ಪ್ರೇಮಿಗಳ ಕಂಬನಿಯೊAದಿಗೆ ಇಂದು ಜನರಿಂದ ದೂರವಾಗಿದ್ದಾರೆ.
-ರಫೀಕ್ತೂಚಮಕೇರಿ