ಮಡಿಕೇರಿ, ಮೇ ೨೭: ತಾ. ೨೯ ರಂದು (ನಾಳೆ) ನೆಲಜಿ-ಬಲ್ಲಮಾವಟಿ ಮುಖ್ಯ ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರದ ರೆಂಬೆಗಳನ್ನು ಕಡಿದು ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡುವ ಕಾರ್ಯ ನಡೆಯಲಿದೆ. ಈ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲು ಸೆಸ್ಕಾಂ ಶಾಖೆಯ ಅನುಮತಿಯ ಮೇರೆಗೆ ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಾ. ೨೯ ರಂದು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು ಎಂದು ಬಲ್ಲಮಾವಟಿ ಗ್ರಾ.ಪಂ. ಪ್ರಕಟಣೆ ತಿಳಿಸಿದೆ.

v ಸೋಮವಾರಪೇಟೆ: ಸೋಮವಾರಪೇಟೆ-ಕುಶಾಲನಗರದ ೩೩ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುವ ಹಿನ್ನೆಲೆ ತಾ. ೨೯ ರಂದು ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಇಲಾಖೆಯ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.

ತಾ. ೨೯ ರಂದು ಪೂರ್ವಾಹ್ನ ೧೦ ಗಂಟೆಯಿAದ ಅಪರಾಹ್ನ ೩ ಗಂಟೆಯವರೆಗೆ ಸೋಮವಾರಪೇಟೆ ಪಟ್ಟಣ, ಚೌಡ್ಲು, ಹಾನಗಲ್ಲು, ದೊಡ್ಡಮಳ್ತೆ, ಐಗೂರು, ಅಬ್ಬೂರುಕಟ್ಟೆ, ಶಾಂತಳ್ಳಿ, ಕಿರಗಂದೂರು, ಬೆಟ್ಟದಳ್ಳಿ, ತೋಳೂರು-ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.