ಶಂಕಿತನ ವಿಚಾರಣೆ? ಮಡಿಕೇರಿ, ಮೇ ೨೪: ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿAದ ಮೃತಪಟ್ಟ ಮಹಿಳೆಯ ಮೊಬೈಲ್ ಕಾಣೆಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಆಸ್ಪತ್ರೆಯ ಸಿಬ್ಬಂದಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದುಬಂದಿದೆ.
ತಾ. ೬ ರಂದು ಕೋವಿಡ್ ಸೋಂಕು ದೃಢಪಟ್ಟು ಮಹಿಳೆ ಚಿಕಿತ್ಸೆಗೆಂದು ದಾಖಲಾಗಿದ್ದರು. ತಾ. ೧೬ ರಂದು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಬಳಿಕ ಮೃತರಿಗೆ ಸೇರಿದ ಮೊಬೈಲ್ ಅವಶ್ಯಕತೆ ಇದೆ ಎಂದು ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿಸಿ, ಮೊಬೈಲ್ ನೀಡುವಂತೆ ಮನವಿ ಮಾಡಿದ್ದರು. ಮೊಬೈಲ್ ದೊರಕದ ಹಿನ್ನೆಲೆ ಮೃತಳ ಪುತ್ರಿ ಹೃತಿಕ್ಷಾ ಅಮ್ಮನ ಮೊಬೈಲ್ ಗಾಗಿ ಪತ್ರ ಬರೆದು ಜಿಲ್ಲಾಡಳಿತ ಗಮನ ಸೆಳೆದಿದ್ದಳು.
ಇದೀಗ ಡಿಸಿಐಬಿ ವಿಭಾಗದ ಪೊಲೀಸರು
ಆಸ್ಪತ್ರೆಯಲ್ಲಿ ಮೊಬೈಲ್ ಕಾಣೆ ಪ್ರಕರಣ
ಶಂಕಿತನ ವಿಚಾರಣೆ?
(ಮೊದಲ ಪುಟದಿಂದ) ಶಂಕಿತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಶಂಕಿತ ಕಳೆದ ಕೆಲವು ತಿಂಗಳಿನಿAದ ಡಿ ಗ್ರೂಪ್ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಬಿರುಸುಗೊಳಿಸಿದೆ.