ಗೋಣಿಕೊಪ್ಪಲು, ಮೇ ೨೪: ಕೋವಿಡ್ ಪಾಸಿಟಿವ್ ದೃಢಪಡುವÀ ವ್ಯಕ್ತಿಗಳು ಮನೆಯಲ್ಲಿಯೇ ಐಸೋಲೇಷನ್ ಆಗಲು ಇನ್ನು ಮುಂದೆ ಅವಕಾಶವಿಲ್ಲ, ಕಡ್ಡಾಯವಾಗಿ ಸಮೀಪದ ಕೋವಿಡ್ ಕೇರ್ ಸೆಂಟರ್‌ಗೆ ಚಿಕಿತ್ಸೆಗೆ ದಾಖಲಾಗಬೇಕೆಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಧಿಕಾರಿಗಳಿಗೆ ಸೂಚಿಸಿದರು.ಗೋಣಿಕೊಪ್ಪಲುವಿನ ಆರ್.ಎಂ.ಸಿ.ಸಭಾAಗಣದಲ್ಲಿ ಆಯೋಜಿಸಿದ ಟಾಸ್ಕ್ಫೋರ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವಹಿನ್ನೆಲೆಯಲ್ಲಿ ಹತೋಟಿಗೆ ತರುವ ಉದ್ದೇಶದಿಂದ ಈ ರೀತಿಯಲ್ಲಿ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದ ಅವರು, ಹೊರ ಊರಿನಿಂದ ಬಂದವರು ಹೋಮ್ ಕ್ವಾರಂಟೈನ್‌ಲ್ಲಿರದೆ ತಿರುಗಾಟ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆ, ಪಂಚಾಯಿತಿ ಸದಸ್ಯರು, ಪೊಲೀಸರು ಸೇರಿ ಅಧಿಕಾರಿಗಳ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸುವುದು ಅನಿವಾರ್ಯವಾಗಿದೆ.

ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆ, ಪಂಚಾಯಿತಿ ಸದಸ್ಯರು, ಪೊಲೀಸರು ಸೇರಿ ಅಧಿಕಾರಿಗಳ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸುವುದು ಅನಿವಾರ್ಯವಾಗಿದೆ.

(ಮೊದಲ ಪುಟದಿಂದ) ತಿಮ್ಮಯ್ಯ ರವರಿಗೆ ಶಾಸಕರು ನಿರ್ದೇಶನ ನೀಡಿದರು.

ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರ್ ರವರೊಂದಿಗೆ ಪೊನ್ನಂಪೇಟೆ, ಕಿರುಗೂರು ಗೋಣಿಕೊಪ್ಪ ಹಾಗೂ ಹಾತೂರು ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ನಡೆಸಿದರು. ಯಾವುದೇ ಕಾರಣಕ್ಕೂ ಇನ್ನೂ ಮುಂದೆ ಪಾಸಿಟಿವ್ ಪ್ರಕರಣಗಳು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ವಾರದ ಮೂರು ದಿನಗಳಲ್ಲಿ ರೈತರು ತಮಗೆ ಬೇಕಾದ ಸಹಕಾರ ಸಂಘಗಳಲ್ಲಿ ರಸಗೊಬ್ಬರ ಖರೀದಿಸಲು ಅವಕಾಶವಿದೆ. ಬೆಳಿಗ್ಗೆ ೬ ರಿಂದ ೧೦ ರವರಿಗೆ ಬಿಲ್ ಮಾಡಿಸಿಕೊಂಡು ಸಂಜೆಯ ಒಳಗೆ ರಸಗೊಬ್ಬರವನ್ನು ತಮ್ಮ ವಾಹನಗಳಲ್ಲಿ ಸಾಗಿಸಲು ಅವಕಾಶ ಮಾಡಿಕೊಡಲಾಗಿದೆ.

ಕಾರ್ಮಿಕರು ಸ್ಥಳಿಯವಾಗಿಯೇ ಬೆಳಿಗ್ಗೆ ೮-೩೦ ಕ್ಕೆ ಕೆಲಸಕ್ಕೆ ತೆರಳಿ ಸಂಜೆಯ ೫ ಗಂಟೆಯ ನಂತರ ಮನೆ ಸೇರಬೇಕು ಅನಗತ್ಯವಾಗಿ ಓಡಾಡುವ ಅವಕಾಶವಿಲ್ಲ. ಮುಂಚೂಟಿ ಕಾರ್ಯ ಕರ್ತರು ವಾಕ್ಸಿನ್ ಹಾಕಿಸಿಕೊಳ್ಳುವಂತೆ ಶಾಸಕ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.

ಪಿಡಿಒ ತಿಮ್ಮಯ್ಯ ನಗರದ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳು ಹಾಗೂ ಕೋವಿಡ್ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಕೆಲವರಿಗೆ ಇನ್ನೂ ಪಡಿತರ ಚೀಟಿ ತಲುಪಿಲ್ಲ .ಅಂತಹ ಕುಟುಂಬಗಳು ಕಷ್ಟ ಎದುರಿಸುತ್ತಿದ್ದಾರೆ. ಅವರುಗಳಿಗೆ ಪಡಿತರ ಸಾಮಾಗ್ರಿ ವ್ಯವಸ್ಥೆ ಮಾಡುವಂತೆ ಪಂಚಾಯಿತಿ ಸದಸ್ಯರಾದ ಕೆ.ಜಿ.ಗೀತಾ ಹಾಗೂ ಹಕೀಂ ಶಾಸಕರ ಗಮನ ಸೆಳೆದರು.

ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಮಾತನಾಡಿ, ಪಡಿತರ ಚೀಟಿ ದೊರಕದವರ ಪಟ್ಟಿ ತಯಾರಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೀಡಿ ಪಡಿತರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಅಂಗಡಿ ಮಳಿಗೆಗಳಲ್ಲಿ ಇರುವ ವರ್ತಕ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಲಿದೆ. ಇದನ್ನು ಉಲ್ಲಂಘನೆ ಮಾಡುವ ಅಂಗಡಿ ಮಾಲೀಕರ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಆರ್.ಎಂ.ಸಿ. ನಿರ್ದೇಶಕ ಗುಮ್ಮಟೀರ ಕಿಲನ್ ಗಣಪತಿ, ಮಾತನಾಡಿದರು. ಪಂಚಾಯತಿ ಸದಸ್ಯರಾದ ರಾಮಕೃಷ್ಣ, ಮುರುಗ,ರತಿ ಅಚ್ಚಪ್ಪ, ಜಿ.ಕೆ.ಗೀತಾ ಮತ್ತಿತರರು ತಮ್ಮ ಅಭಿಪ್ರಾಯ ಮಂಡಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಪೊನ್ನಂಪೇಟೆ ತಹಶಿಲ್ದಾರ್ ಕಾವ್ಯರಾಣಿ, ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ, ಎಸ್.ಐ.ಸುಬ್ಬಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್, ಕಂದಾಯ ನಿರೀಕ್ಷಕ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಪಂಚಾಯಿತಿ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್