ಮಡಿಕೇರಿ, ಮೇ ೨೪: ಮರ ಕಪಾತು ಮಾಡುವ ಸಂದರ್ಭದಲ್ಲಿ ಮರದಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಚೆಟ್ಟಿಮಾನಿ ಸಮೀಪದ ಬಂಡಿಕಾಡಿನಲ್ಲಿ ನಡೆದಿದೆ.
ಕೇಶವ ಪೂಜಾರಿ (೨೯) ಮರದಿಂದ ಬಿದ್ದು ಕೊನೆಯುಸಿರೆಳೆದ ದುರ್ಧೈವಿ. ಮರ ಕಪಾತು ಕೆಲಸಕ್ಕೆಂದು ಬಂಡಿಕಾಡಿಗೆ ತೆರಳಿದ ಸಂದರ್ಭ ದುರ್ಘಟನೆ ಸಂಭವಿಸಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಂದರ್ಭ ಮಾರ್ಗಮಧ್ಯೆ ನಿಧನ ಹೊಂದಿದ್ದು, ಮೃತ ನಂತರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿ ಸಲಾಯಿತು. ಕೇಶವ ಪೂಜಾರಿ ಹುಟ್ಟಿನಿಂದ ಮಾತು ಬಾರದ ವ್ಯಕ್ತಿಯಾಗಿದ್ದಾನೆ.