ಪೆರಾಜೆ, ಮೇ ೨೪: ಸಂಪಾಜೆ ಹೋಬಳಿಯ ಪೆರಾಜೆ ಗ್ರಾಮದಲ್ಲಿ ಕೊರೊನಾ ಭೀತಿಯ ನಡುವೆ ಈ ವರ್ಷ ಮಳೆ ಪ್ರಾರಂಭವಾಗುತಿದ್ದAತೆ ಡೆಂಗ್ಯೂ ಜ್ವರದ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿಯೇ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿ ಪೆರಾಜೆ, ಮೇ ೨೪: ಸಂಪಾಜೆ ಹೋಬಳಿಯ ಪೆರಾಜೆ ಗ್ರಾಮದಲ್ಲಿ ಕೊರೊನಾ ಭೀತಿಯ ನಡುವೆ ಈ ವರ್ಷ ಮಳೆ ಪ್ರಾರಂಭವಾಗುತಿದ್ದAತೆ ಡೆಂಗ್ಯೂ ಜ್ವರದ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿಯೇ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿ ಸರಿಯಾದ ಮಾಹಿತಿ ದೊರೆತಿಲ್ಲ. ಮಡಿಕೇರಿ ತಾಲೂಕಿನ ಪೆರಾಜೆ, ಕರಿಕೆ, ಚೆಂಬು ಗ್ರಾಮಗಳಲ್ಲಿ ಹೆಚ್ಚಾಗಿ ರಬ್ಬರ್, ಅಡಿಕೆ ಬೆಳೆಗಳನ್ನು ಬೆಳೆಯುತ್ತಾರೆ, ಇಲ್ಲಿ ರಬ್ಬರ್ ತೋಟಗಳಲ್ಲಿ ಮರ ಗಳಿಂದ ಹಾಲು ಸಂಗ್ರಹಿಸಲು ಇರಿಸುವ ಗೆರಟೆಗಳನ್ನು ಮಳೆಗಾಲ ದಲ್ಲಿ ತೆಗೆಯದೆ ಅಲ್ಲೇ ಬಿಡುವುದರ ಪರಿಣಾಮ ಅಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಬಗ್ಗೆ ಕೂಡಲೇ ಆರೋಗ್ಯ ಇಲಾಖೆ, ಅಥವಾ ಸಂಬAಧಪಟ್ಟ ಇಲಾಖೆಯವರು ಜನರಲ್ಲಿ ಸರಿಯಾದ ಅರಿವು ಮೂಡಿಸಿ ಗ್ರಾಮದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಸರಿಯಾದ ಮಾಹಿತಿ ನೀಡಿ ಇದನ್ನು ನಿಯಂತ್ರಿಸುವ ಕಾರ್ಯ ಆದಷ್ಟು ಬೇಗ ಆಗಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ಕಿರಣ್ ಕುಂಬಳಚೇರಿ