ವಿಮಾನದಲ್ಲಿ ಮದುವೆ - ಕೋವಿಡ್ ನಿಯಮ ಉಲ್ಲಂಘನೆ
ನವದೆಹಲಿ, ಮೇ ೨೪: ಸ್ಪೆöÊಸ್ಜೆಟ್ ಚಾರ್ಟರ್ಡ್ ವಿಮಾನದಲ್ಲಿ ನಡೆದ ಮದುವೆ ವೇಳೆ ಕೋವಿಡ್ ನಿಯಮಗಳ ಉಲ್ಲಂಘನೆ ಆಗಿರುವುದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಟೀಕಿಸಿದ ಬೆನ್ನಲ್ಲೇ ಪ್ರಯಾಣಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆ ಸೋಮವಾರ ತಿಳಿಸಿದೆ. ಸ್ಪೆöÊಸ್ ಜೆಟ್ ಬೋಯಿಂಗ್ ೭೩೭ ಅನ್ನು ಮಧುರೈ ಟ್ರಾವೆಲ್ ಏಜೆಂಟ್ ಒಬ್ಬರು ಮೇ ೨೩, ೨೦೨೧ಕ್ಕೆ ಬುಕ್ ಮಾಡಿದ್ದರು. ನಂತರ ವಿಮಾನದಲ್ಲಿ ನಡೆದ ಮದುವೆ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಪ್ರಯಾಣದ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ವಿವರಿಸಲಾಗಿತ್ತು. ಅಲ್ಲದೆ ಯಾವುದೇ ಚಟುವಟಿಕೆಗೆ ಅನುಮತಿ ನೀಡಿರಲಿಲ್ಲ. ಆದರೂ ವಿಮಾನದಲ್ಲಿ ಮದುವೆ ನಡೆದಿತ್ತು. ವಿಮಾನ ನಿಲ್ದಾಣದಲ್ಲಿ ಮತ್ತು ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಅನುಸರಿಸಬೇಕಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಏಜೆಂಟ್ ಮತ್ತು ಅತಿಥಿ ಪ್ರಯಾಣಿಕರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ವಿವರವಾಗಿ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಈ ಯಾವುದೇ ಆದೇಶಗಳನ್ನು ಅನುಸರಿಸದ ಪ್ರಯಾಣಿಕರ ವಿರುದ್ಧ ವಿಮಾನಯಾನ ನಿಯಮಗಳ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಸ್ಪೆöÊಸ್ ಜೆಟ್ ತಿಳಿಸಿದೆ. ವಿಮಾನದಲ್ಲಿ ಮದುವೆ ನಡೆದ ಘಟನೆ ವರದಿಯಾಗುತ್ತಿದ್ದಂತೆ ವಿಮಾನದ ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗಿಡಲು ಸೂಚಿಸಿದ್ದು ತನಿಖೆಗೆ ಡಿಜಿಸಿಎ ಆದೇಶಿಸಿತ್ತು. ಅಲ್ಲದೆ ಕೋವಿಡ್ ೧೯ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಎಲ್ಲ ಪ್ರಯಾಣಿಕರ ವಿರುದ್ಧ ದೂರು ದಾಖಲಿಸುವಂತೆ ಹೇಳಿತ್ತು. ತಮಿಳುನಾಡಿನ ಮಧುರೈನಿಂದ ಚಾರ್ಟರ್ಡ್ ವಿಮಾನದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಸಂಬAಧಿಕರು ಮತ್ತು ಅತಿಥಿಗಳು ಒಂದೇ ವಿಮಾನದಲ್ಲಿದ್ದರು. ಭಾನುವಾರ ಸ್ಪೆöÊಸ್ ಜೆಟ್ ವಿಮಾನವನ್ನು ಮಧುರೈ ಮೂಲದ ಖಾಸಗಿ ವ್ಯಕ್ತಿಯೊಬ್ಬರು ಸಮಾರಂಭಕ್ಕಾಗಿ ಕಾಯ್ದಿರಿಸಿದ್ದರು. ಆದರೆ ಸಂಸ್ಥೆಗೆ ವಿಮಾನದಲ್ಲಿ ವಿವಾಹ ಮಾಡುವ ಬಗ್ಗೆ ಮಾಹಿತಿ ನೀಡಿರಲಿಲ್ಲ.
ದೇವರ ಕುದುರೆ ಸಾವು
ಬೆಳಗಾವಿ, ಮೇ ೨೪: ಕೊರೊನಾ ತೊಲಗಲೆಂದು ಸಂಚಾರ ಮಾಡಲು ಬಿಟ್ಟಿದ್ದ ಗೋಕಾಕ್ ತಾಲೂಕಿನ ಮರಡಿ ಮಠದ ದೇವರ ಕುದುರೆ ಮೃತಪಟ್ಟಿದ್ದು, ಮೃತಪಟ್ಟಿರುವ ಕುದುರೆಯ ಅಂತ್ಯ ಸಂಸ್ಕಾರದಲ್ಲಿ ನೂರಾರು ಮಂದಿ ಭಾಗವಹಿಸಿದ್ದು ಕೊರೊನಾ ನಡುವೆ ಈಗ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್-೧೯ ನಿಯಮಗಳನ್ನು ಉಲ್ಲಂಘಿಸಿ, ನೂರಾರು ಮಂದಿ ಭಾಗಿಯಾಗಿದ್ದರು. ಪರಿಣಾಮ ಅಧಿಕಾರಿಗಳು ಗ್ರಾಮವನ್ನು ಸೀಲ್ ಮಾಡಿದ್ದು, ೧೫ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮರಡಿಮಠದ ಪವಾಡೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಕುದುರೆ ಕೋವಿಡ್-೧೯ ತೊಲಗಿಸುತ್ತದೆ. ಗ್ರಾಮಸ್ಥರನ್ನು ರಕ್ಷಿಸುತ್ತದೆ ಎಂಬ ನಂಬಿಕೆಯೊAದಿಗೆ ಮಠದ ಕುದುರೆಯನ್ನು ಬುಧವಾರದಂದು ಗ್ರಾಮದಲ್ಲಿ ಅಡ್ಡಾಡಲು ಬಿಟ್ಟಿದ್ದರು. ದಶಕಗಳ ಹಿಂದೆ ಗ್ರಾಮದಲ್ಲಿ ಮಲೇರಿಯಾ ಹಾಗೂ ಕಾಲರ, ಪ್ಲೇಗ್ ಬಂದಿದ್ದಾಗ ಈ ಕುದುರೆ ಹೇಗೆ ಗ್ರಾಮಸ್ಥರನ್ನು ರಕ್ಷಿಸಿತ್ತು ಎಂಬುದರ ಬಗ್ಗೆ ಕಥೆ ಕೇಳಿದ್ದ ಗ್ರಾಮಸ್ಥರು ಈ ಬಾರಿಯೂ ಅಂಥಹದ್ದೇ ಪವಾಡ ನಡೆಯುತ್ತದೆ ಎಂದು ಗ್ರಾಮಸ್ಥರು ನಂಬಿದ್ದರು. ಇದೇ ಕುದುರೆಯನ್ನು ಕೋವಿಡ್-೧೯ ಮೊದಲ ಅಲೆಯಲ್ಲಿಯೂ ಗ್ರಾಮದಲ್ಲಿ ಅಡ್ಡಾಡಲು ಬಿಟ್ಟಿದ್ದರು. ಈಗ ಎರಡನೇ ಅಲೆ ಹೆಚ್ಚಾದಾಗಲೂ ೫ ಸೋಮವಾರಗಳು ಹಾಗೂ ಶುಕ್ರವಾರಗಳು ಕಾಡಸಿದ್ದೇಶ್ವರ ಸ್ವಾಮಿಯನ್ನು ಪ್ರಾರ್ಥಿಸಲು ಧಾರ್ಮಿಕ ಸಂಘಟನೆಗಳು ಗ್ರಾಮಸ್ಥರಿಗೆ ಕರೆ ನೀಡಿದ್ದವು ಭಾನುವಾರದಂದು ಕುದುರೆ ಸಾವನ್ನಪ್ಪಿದ್ದು, ದೈವ ಕುದುರೆಯ ಅಂತ್ಯಸAಸ್ಕಾರದಲ್ಲಿ ನೂರಾರು ಮಂದಿ ಭಾಗಿಯಾಗಿರುವುದು ಈಗ ಮತ್ತೊಂದು ತಲೆಬಿಸಿ ಮೂಡಿಸಿದೆ.
ತಾ. ೨೬ರಂದು ಭಾರತದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರ
ನವದೆಹಲಿ, ಮೇ ೨೪: ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ ೨೬ ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ಸೋಮವಾರ ತಿಳಿಸಿದೆ. ಗ್ರಹಣದ ಭಾಗಶಃ ಹಂತವು ಮಧ್ಯಾಹ್ನ ೩.೧೫ ರ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು ೬.೨೩ರವರೆಗೆ ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ. ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ. ಮುಂದಿನ ಚಂದ್ರಗ್ರಹಣವು ನವೆಂಬರ್ ೧೯ ರಂದು ಭಾರತದಿಂದ ಗೋಚರಿಸುತ್ತದೆ ಮತ್ತು ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಿಂದ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.
ರಾಜ್ಯದಲ್ಲಿ ೩೦೦ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು
ಬೆAಗಳೂರು, ಮೇ ೨೪: ರಾಜ್ಯದಲ್ಲಿ ೩೦೦ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಇರುವ ಬಗ್ಗೆ ಕಪ್ಪು ಶಿಲೀಂಧ್ರ ಸಮಿತಿ ನೀಡಿದ ಪ್ರಾಥಮಿಕ ವರದಿಯಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ತಡೆಗಟ್ಟುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ ಎಂದರು. ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಹಾಗೂ ಕೋವಿಡ್ ನಿಂದ ಗುಣಮುಖರಾದವರಿಗೆ ಇಎನ್ಟಿ ವೈದ್ಯರು ೩, ೭, ೨೧ನೇ ದಿನ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿಯುಸಿ ಪರೀಕ್ಷೆ : ಸರಕಾರಕ್ಕೆ ಜಾರ್ಜ್ ಸಲಹೆ
ಬೆಂಗಳೂರು, ಮೇ ೨೪: ಪದವಿ ಪೂರ್ವ ಶಿಕ್ಷಣ ಇಲಾಖೆ ಈ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಎರಡು ಹಂತದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಸಲು ಸಿದ್ಧವಾಗಿದ್ದು, ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ಸರಕಾರಕ್ಕೆ ಕೆಲವೊಂದು ಸಲಹೆ ನೀಡಿದ್ದಾರೆ. ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟದಾಯಕವಾಗಿದೆ. ಅದಲ್ಲದೆ ಜುಲೈನಲ್ಲಿ ಕೊರೊನಾ ೩ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಕೂಡ ಸರಕಾರಕ್ಕೆ ತಜ್ಞರ ಸಮಿತಿ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ಈ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸಮಂಜಸವಲ್ಲ ಎಂದಿರುವ ಜಾರ್ಜ್ ಅವರು, ವಿಶೇಷ ಕಾರ್ಯಯೋಜನೆ ರೂಪಿಸಿ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಿ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆ ಕಲ್ಪಿಸಿದರೆ ಉತ್ತಮ. ವ್ಯಾಕ್ಸಿನ್ ಪಡೆದವರು ಮಾತ್ರ ಪರೀಕ್ಷೆ ಬರೆಯುವುದು ಕಡ್ಡಾಯಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.