ಮಡಿಕೇರಿ, ಮೇ ೨೪: ಕೊಡಗು ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳ ಮೂಲಕ ರಚನೆಯಾಗಿರುವ ಕೊರೊನಾ ವಾರಿಯರ್ಸ್ ತಂಡ ಸೋಂಕಿತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕೆAದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ನೇರ ಸಂವಾದ ನಡೆಸಿ ಜಿಲ್ಲೆಯ ಆಗುಹೋಗುಗಳ ಬಗ್ಗೆ ಮಂಜುನಾಥ್ ಕುಮಾರ್, ವಿಧಾನ ಪರಿಷತ್ ಸದಸೆÀ್ಯ ಶಾಂತೆಯAಡ ವೀಣಾಅಚ್ಚಯ್ಯ ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರಿಂದ ಮಾಹಿತಿ ಪಡೆದರು. ಸಂವಾದದ ನಂತರ ಮಾತನಾಡಿದ ಮಂಜುನಾಥ್ ಕುಮಾರ್, ಜಿಲ್ಲೆಯ ಕೋವಿಡ್ ಆಸ್ಪತ್ರೆ ಗಳು, ವೈದ್ಯರ ಲಭ್ಯತೆ, ಸೋಂಕಿತರ ಸ್ಥಿತಿಗತಿಯ ಬಗ್ಗೆ ನಾಯಕರು ಮಾಹಿತಿ ಪಡೆದು ಸುಧಾರಣೆ ಹಾಗೂ ನೆರವಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ವೀಣಾಅಚ್ಚಯ್ಯ ಹಾಗೂ ಎ.ಎಸ್.ಪೊನ್ನಣ್ಣ ಅವರು ಕೂಡ ಮಾಹಿತಿ ಹಂಚಿಕೊAಡಿದ್ದು, ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ಕೊರೋನಾ ವಾರಿಯರ್ಸ್ ತಂಡ ಕಾರ್ಯೋನ್ಮುಖವಾಗಲಿದೆ ಎಂದು ಅವರು ಹೇಳಿದರು.ವರ್ತಕರಿಗೆ ಕೋವಿಡ್ ಪರೀಕ್ಷೆ
ಚೆಯ್ಯಂಡಾಣೆ, ಮೇ ೨೩: ಸ್ಥಳೀಯ ಗ್ರಾ.ಪಂ. ಆದೇಶ ದನ್ವಯ ಚೆಯ್ಯಂಡಾಣೆ ಸ.ಪಾ. ಶಾಲೆಯಲ್ಲಿ ವರ್ತಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ವರ್ತಕರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. ಕೋವಿಡ್ ಪರಿಕ್ಷೆಯನ್ನು ಲ್ಯಾಬ್ ಟೆಕ್ನೀಷಿಯನ್ ಲೀಲಾವತಿ ಮಾಡಿದರು. ಅರೋಗ್ಯ ಸಹಾಯಕಿ ರೋಹಿಣಿ, ಭವಾನಿ ಉಪಸ್ಥಿತರಿದ್ದರು.
ಜೀವ ವೈವಿಧ್ಯ ಸಂರಕ್ಷಣೆ ಅತ್ಯಗತ್ಯ
ವಿಶ್ವಜೀವ ವೈವಿಧ್ಯ ದಿನಾಚರಣೆ
ಕುಶಾಲನಗರ, ಮೇ ೨೪: ಕೊರೊನಾ ವೈರಸ್ ಸೋಂಕು ಮಾನವನನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಜೀವ ವೈವಿಧ್ಯ ಸಂರಕ್ಷಣೆಯು ಅತ್ಯಂತ ಪ್ರಸ್ತುತವಾಗಿದ್ದು, ಜೀವ ವೈವಿಧ್ಯತೆಯ ವಿನಾಶಕ್ಕೆ ನಾಂದಿ ಹಾಕುವ ಮೂಲಕ ಜೀವ ವೈವಿಧ್ಯವನ್ನು ಕಾಪಾಡುವ, ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ನಾವು ಬದ್ಧರಾಗಬೇಕಿದೆ ಎಂದು ಕೊಡಗು ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಹೇಳಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಘಟಕ, ಸಾಮಾಜಿಕ ಅರಣ್ಯ ಇಲಾಖೆ, ರಾಷ್ಟಿçÃಯ ಹಸಿರು ಪಡೆಯ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಕೋವಿಡ್-೧೯ರ ಮಾರ್ಗಸೂಚಿಯನ್ವಯ ಏರ್ಪಡಿಸಿದ್ದ ‘ವಿಶ್ವ ಜೀವ ವೈವಿಧ್ಯ ದಿನ’ದ ಅಂಗವಾಗಿ ಜೈವಿಕ ಇಂಧನ ಮೂಲದ ಹೊಂಗೆ ಗಿಡ ನೆಡುವ ಮೂಲಕ ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲಾಯಿತು. ಮನುಷ್ಯನ ಆಸೆಯಿಂದ ಭೂಮಿ ಮತ್ತು ಜೀವತಾಣಗಳ ಮೇಲೆ ಬಲಾಢ್ಯವಾಗಿ ದಾಳಿಯಿಟ್ಟ ಕಾರಣ ಪ್ರಪಂಚದ ಜೀವ ಸಂಕುಲದ ಶ್ರೀಮಂತ ತಾಣಗಳು ಧ್ವಂಸ ಆಗುತ್ತಿವೆ. ಇವುಗಳು ನಾಶವಾಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಬಡಾವಣೆಯ ನಿವಾಸಿಗಳಾದ ಕಮಲ ಜವರಪ್ಪ, ಬಿ.ಜಿ. ವೆಂಕಟೇಶ್ ಗಿಡಗಳನ್ನು ನೆಟ್ಟರು. ಪರಿಸರ ಬಳಗದ ಡಾ ಸಿದ್ದಪ್ರಕಾಶ್, ಪೃಥ್ವಿ, ವರುಣ್ ನಾಯಕ್ ಇದ್ದರು. ಪರಿಸರ ಹಾಗೂ ಜೀವ ವೈವಿಧ್ಯತೆ ಸಂರಕ್ಷಣೆ ಕುರಿತಂತೆ ವಿವಿಧ ಪರಿಸರ ಘೋಷ ವಾಕ್ಯಗಳ ಬಗ್ಗೆ ಪ್ರಚುರಪಡಿಸಲಾಯಿತು.
ಕೊರೊನಾ ವಾರಿಯರ್ಸ್ಗೆ ಲಸಿಕೆ
ಸುಂಟಿಕೊಪ್ಪ, ಮೇ ೨೪: ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಯನ್ನು ನೀಡಲಾಯಿತು. ಆಟೋರಿಕ್ಷಾ, ಕ್ಯಾಬ್‌ಚಾಲಕರು, ಗ್ಯಾಸ್‌ವಿತರಕರು ಪೆಟ್ರೋಲ್ ಬಂಕ್, ಸೆಸ್ಕಾಂ ಸಿಬ್ಬಂದಿಗಳು ಹಾಗೂ ಶಿಕ್ಷಕರು ಸೇರಿದಂತೆ ೧೮ ರಿಂದ ೪೪ ವರ್ಷದ ೬೮ ಮಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಕೋವಿಡ್-೧೯ ಲಸಿಕೆಯನ್ನು ಪಡೆದುಕೊಂಡರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೀವನ್, ಆರೋಗ್ಯ ಹಿರಿಯ ಸಹಾಯಕ ಚಂದ್ರೇಶ್, ಮಹಿಳಾ ಆರೋಗ್ಯ ಸಹಾಯಕಿ ಕೆ.ಪಿ. ಪ್ರಭಾವತಿ ಆಶಾಕಾರ್ಯಕರ್ತೆಯರಾದ ಜ್ಯೋತಿ, ಗೀತಾಂಜಲಿ, ಸೆಸ್ಕಾಂ ಅಭಿಯಂತರ ಜೈದೀಪ್, ಸಿಬ್ಬಂದಿಗಳು, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಸದಸ್ಯರು ಹಾಜರಿದ್ದರು.ಬೀದಿ ಬದಿ ವ್ಯಾಪಾರಿಗಳ ಬವಣೆಕುಶಾಲನಗರ, ಮೇ ೨೪: ಲಾಕ್‌ಡೌನ್ ಕಾರಣ ಜನಜೀವನ ಅಸ್ತವ್ಯಸ್ತ ಗೊಳ್ಳುತ್ತಿರುವ ನಡುವೆ ಕುಶಾಲನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಬವಣೆ ತಾರಕಕ್ಕೇರಿದೆ. ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಹೂ ಮಾರಾಟ ವ್ಯಾಪಾರಿಗಳು ಹೂವುಕೊಳ್ಳುವವರ ಕೊರತೆ ನಡುವೆ ನಷ್ಟಕ್ಕೊಳಗಾಗುತ್ತಿದ್ದರೆ ಇನ್ನೊಂದೆಡೆ ಬೀದಿ ಬದಿಯಲ್ಲಿ ಹಣ್ಣು-ಹಂಪಲು ಮಾರುವ ಬಡ ವ್ಯಾಪಾರಿಗಳು ತಳ್ಳುವ ಗಾಡಿಯನ್ನು ಬಾಡಿಗೆಗೆ ಪಡೆದು ವ್ಯಾಪಾರ ಮಾಡುವ ಪರಿಸ್ಥಿತಿ ಎದುರಾಗಿದೆ
ಕರ್ಫ್ಯೂ, ಲಾಕ್‌ಡೌನ್ ನಡುವೆ ಅಗತ್ಯ ವಸ್ತುಗಳ ಖರೀದಿಗೆ ವಾರದ ಮೂರು ದಿನಗಳಲ್ಲಿ ನಿಗದಿತ ಅವಧಿಯಲ್ಲಿ ಈ ವ್ಯಾಪಾರಿಗಳಿಗೆ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ. ಹೂ ಮಾರಾಟಗಾರರು ನಿತ್ಯ ಗ್ರಾಹಕರ ಕೊರತೆ ಎದುರಿಸುತ್ತಿರುವ ಬಗ್ಗೆ ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮ, ಸಮಾರಂಭ, ಪೂಜಾ ಕಾರ್ಯಕ್ರಮಗಳು ಇಲ್ಲದಿರುವ ಕಾರಣ ಹೂವುಗಳಿಗೆ ಬೇಡಿಕೆಯ ಕೊರತೆಯಾಗಿದೆ ಎನ್ನುವುದು ಅವರ ಪ್ರತಿಕ್ರಿಯೆಯಾಗಿದೆ. ಪ್ರತಿದಿನ ಮೈಸೂರು ಸಂತೆಯಿAದ ಕುಶಾಲನಗರಕ್ಕೆ ಹೂವುಗಳ ಸರಬರಾಜು ಆಗುತ್ತಿದ್ದು, ಇದೀಗ ವಾಹನಗಳ ಕೊರತೆ ಕೂಡ ಎದುರಾಗಿದೆ.
ಮಾರಾಟವಾಗದೇ ಉಳಿದ ಹೂವಿನ ಹಾರಗಳು ಮತ್ತಿತರ ಪುಷ್ಪಗಳು ನಾಶವಾಗುವುದರೊಂದಿಗೆ ನಿತ್ಯ ಸಾವಿರಾರು ರೂಪಾಯಿಗಳ ನಷ್ಟ ಉಂಟಾಗುತ್ತಿದೆ ಎಂಬುದು ಹೂ ಮಾರಾಟ ಮಾಡುವ ಲಕ್ಷಿö್ಮ ಎಂಬುವವರ ಅಳಲಾಗಿದೆ. ಹಣ್ಣು ಹಂಪಲು ಮಾರಾಟ ಮಾಡಲು ಲಾಕ್‌ಡೌನ್ ನಡುವೆ ಕಲ್ಪಿಸಿದ ಸಮಯ ಸಾಕಾಗುವುದಿಲ್ಲ ಎನ್ನುವುದು ತಳ್ಳುವ ಗಾಡಿಯ ಮಹಿಳೆಯೊಬ್ಬರ ಅಭಿಪ್ರಾಯ ವಾಗಿದೆ. ಬಾಡಿಗೆಗೆ ತಳ್ಳುವ ಗಾಡಿ ಪಡೆದು ವ್ಯಾಪಾರ ಮಾಡುವ ಸ್ಥಿತಿ ಎದುರಾಗಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. - ಚಂದ್ರಮೋಹನ್