ಮಡಿಕೇರಿ, ಮೇ ೨೦: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಟೆಮನೆ ಕಾಲೋನಿಯಲ್ಲಿ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿರುವ ಹಿನ್ನೆಲೆ ಪಂಚಾಯಿತಿ ವತಿಯಿಂದ ಸೋಂಕಿತರ ೯ ಮನೆಗಳು ಸೇರಿದಂತೆ ಇನ್ನುಳಿದ ೧೨ ಮನೆಗಳು ಸೇರಿ ೨೧ ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್. ರಮೇಶ್, ಎಸ್.ಬಿ. ಗಣೇಶ್, ಅಭಿವೃದ್ಧಿ ಅಧಿಕಾರಿ ದಿನೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ವಿಜು, ಕರ್ಣ ಇದ್ದರು.