ಅವ್ಯವಸ್ಥೆಗೊಳಗಾದ ಶಿಕ್ಷಣ ವ್ಯವಸ್ಥೆ ಸರಿಪಡಿಸುವುದು ಸುಲಭವಲ್ಲ

...

ನಿಜಕ್ಕೂ ಶಿಕ್ಷಣ ವ್ಯವಸ್ಥೆಗೆ ಬಾರಿ ಒಡೆತ ಬಿದ್ದಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯನ್ನು ಮನಗಂಡು ಶಿಕ್ಷಣ ವ್ಯವಸ್ಥೆ ರೂಪುಗೊಂಡಿದೆ.

ನಾವು ಎಷ್ಟೇ ಬುದ್ಧಿವಂತ ಅಥವಾ ಪ್ರತಿಭಾಶೀಲರಿರಬಹುದು, ಆದರೆ ಅದನ್ನು ಬೆಳೆಸಲು ಚೌಕಟ್ಟಿನ ಒಳಗಿನ ಸೂತ್ರಬದ್ಧ ಅಧ್ಯಯನ ಅವಶ್ಯ. ಉದಾಹರಣೆ ಒಬ್ಬನಿಗೆ ಒಳ್ಳೆಯ ಹಾಡಿನ ರಾಗ ಇರಬಹುದು ಆದರೆ, ಅದನ್ನು ತಿದ್ದಿ, ತೀಡಿ ಉತ್ತಮ ಪಡಿಸಲು ಸಂಗೀತದ ಶಿಕ್ಷಣ ಬೇಕು.

ಆಗ ಮಾತ್ರ ಆ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಅದರಂತೆ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಲು ಒಂದು ಚೌಕಟ್ಟಿನಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಬೇಕು. ಅದರ ಕೊಂಡಿಗಳು ಬೆಳವಣಿಗೆಗೆ ಸಹಕಾರಿ. ಈ ಕೊಂಡಿಗಳು ಕಳಚಿದರೆ ವ್ಯವಸ್ಥೆ ತನ್ನ ಅಡಿಪಾಯ ಕಳಚಿಕೊಂಡು ಸಂಪೂರ್ಣ ವ್ಯಕ್ತಿಯಾಗಿ ವಿದ್ಯಾರ್ಥಿ ಯನ್ನು ರೂಪಿಸಲು ಸಾಧ್ಯವಾಗದೆ, ವ್ಯವಸ್ಥೆಗೆ ಅಡಚಣೆಯಾಗುತ್ತದೆ. ಒಮ್ಮೆ ಅವ್ಯವಸ್ಥೆಯಾದರೆ ಮತ್ತೆ ಅದನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ.

ಮಕ್ಕಳ ಮನಸ್ಸು ಚಂಚಲ, ಆಮಿಷಗಳಿಗೆ ಬಲಿಯಾಗುವುದು ಸುಲಭ ಇಂಥಹ ಮನಸ್ಸಿನ ಮಕ್ಕಳನ್ನು ಮತ್ತೆ ವ್ಯವಸ್ಥೆಯೊಳಗೆ ತರುವುದು ಶೈಕ್ಷಣಿಕ ಸವಾಲುಗಳಲ್ಲಿ ಪ್ರಮುಖ ವಾದುದು. ಲಾಕ್‌ಡೌನ್‌ನಿಂದ ಸ್ವಚ್ಛಂದವಾಗಿ ತಿರುಗಾಡುತ್ತಿರುವ ಮಕ್ಕಳನ್ನು ಶಾಲೆ ಆರಂಭವಾದಾಗ ಗೈರು ಹಾಜರಾಗದಂತೆ ತಡೆಯು ವುದು ಸವಾಲಾಗಿದೆ. ಈಗಾಗಲೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ನಾವು ಅನುಭವಿಸಿದ್ದೇವೆ.

ಇನ್ನೂ ಕೆಲವು ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗಿ ಹಣದ ರುಚಿ ಕಂಡು ಮುಂದಿನ ಭವಿಷ್ಯದ ಚಿಂತೆ ಇಲ್ಲದೆ ಶಿಕ್ಷಣ ವ್ಯವಸ್ಥೆಯ ಹೊರಗೆ ಉಳಿಯುತ್ತಾರೆ. ಅವರನ್ನು ವ್ಯವಸ್ಥೆಗೆ ತರುವುದು ಸವಾಲಾಗಿದೆ.

ಶಿಕ್ಷಣದ ಮೆಟ್ಟಿಲು ಹಿಂದಿನ ವರ್ಷದ ಕಲಿಕೆ ಆದರಿಸಿ ಮುಂದಿನ ವರ್ಷದ ಪಠ್ಯ ನಿರ್ಧಾರವಾಗುತ್ತದೆ. ಇದನ್ನು ಈ ಕೊರೊನಾ ಸಂದರ್ಭದಲ್ಲಿ ಸರಿಪಡಿಸುವುದು ಸವಾಲಾಗಿದೆ.

ದೇಶದ ಎಲ್ಲಾ ವ್ಯವಸ್ಥೆಗಳು ಕೊರೊನಾದ ನಡುವೆ ಕಾರ್ಯಾರಂಭ ಮಾಡಿದರೆ ಶಾಲೆಗಳು ಮಾತ್ರ ಮಕ್ಕಳ ಗುಂಪುಗೂಡುವಿಕೆಯ ಸಮಸ್ಯೆಯಿಂದ ಆರಂಭವಾಗದೆ ಇಲಾಖೆಗೆ, ಶಿಕ್ಷಣ ತಜ್ಞರಿಗೆ ಪರಿಹರಿಸಲಾಗದ ಸಮಸ್ಯೆಯಾಗಿ ನಿಂತಿದೆ.

ಆನ್‌ಲೈನ್ ಶಿಕ್ಷಣ ಎಷ್ಟು ಪರಿಣಾಮಕಾರಿ?

ಆನ್‌ಲೈನ್ ಶಿಕ್ಷಣ ಸಂಪೂರ್ಣ ಪರಿಣಾಮಕಾರಿ ಎನ್ನಲಾಗದು. ಇದೊಂದು ತಾತ್ಕಾಲಿಕ ವ್ಯವಸ್ಥೆಯಷ್ಟೆ. ನಮ್ಮ ದೇಶದ ವ್ಯವಸ್ಥೆಯೊಳಗೆ ಅದು ನಿರ್ಣಾಯಕವೂ ಅಲ್ಲ. ಎಂಥಹ ಮುಂದುವರಿದ ದೇಶವೂ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದರೂ ಶಾಲೆ ಎಂಬ ನಾಲ್ಕು ಗೋಡೆಯ ಮಧ್ಯೆ ಕಲಿಕೆ ನಡೆಯುತ್ತದೆ.

ಇನ್ನೂ ನಮ್ಮಂಥ ದೇಶದಲ್ಲಿ ಮೂಲಭೂತವಾಗಿ ಆ ವ್ಯವಸ್ಥೆಯಲ್ಲಿ ಬೆಳೆಯದೆ ಕೊರೊನಾ ಸಮಯದಲ್ಲಿ ಈ ವ್ಯವಸ್ಥೆ ಅಳವಡಿಸಿದರೆ ಅದು ಫಲಪ್ರದವಾಗದು. ಮತ್ತೊಂದು ಈ ಸಂದರ್ಭದಲ್ಲಿ ಹೇಳಬೇಕೆಂದರೆ ಮಕ್ಕಳು ಎಷ್ಟು ಬುದ್ಧಿವಂತರಾಗಿ ವರ್ತಿಸುತ್ತಾರೆಂದರೆ, ತಂದೆ ತಾಯಿಯರಿಗೆ ಮೊಬೈಲ್ ಜ್ಞಾನವಿಲ್ಲದೆ ನನ್ನ ಒಬ್ಬ ವಿದ್ಯಾರ್ಥಿ ಶಿಕ್ಷಕರ ಎಲ್ಲಾ ನಂಬರ್ ಬ್ಲಾಕ್ ಮಾಡಿ ಶಾಲೆಯಿಂದ ಯಾವುದೇ ಚಟುವಟಿಕೆ ಬರದಂತೆ ಮಾಡಿ ಪೋಷಕರಿಗೆ ಶಾಲೆಯಿಂದ ಏನೂ ಕಳುಹಿಸುತ್ತಿಲ್ಲ ಎನ್ನುತ್ತಿದ್ದ ತರಗತಿ ಗಳು ನಡೆದರೆ ಮಾತ್ರ ಪರಿಣಾಮಕಾರಿ ಬೋಧನೆ ಸಾಧ್ಯ. ಅಲ್ಲದೆ ಆನ್‌ಲೈನ್ ಶಿಕ್ಷಣ ಮಕ್ಕಳ ಸ್ಪಷ್ಟ ಓದು ಮತ್ತು ಬರಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಏನೆ ಆನ್‌ಲೈನ್ ಕಾರ್ಯಕ್ರಮ ವಿದ್ದರೂ ಮಕ್ಕಳು, ಪೋಷಕರು ಶಾಲಾ ಆವರಣಕ್ಕೆ ಸಮಯವಿದ್ದಾಗ ಬಂದು ಶಿಕ್ಷಕರೊಡನೆ ಸಂಪರ್ಕದಲ್ಲಿದ್ದರೆ ಮಾತ್ರ ಕಲಿಕೆ ಸುಲಲಿತ ಆದರೆ ಕೊರೊನಾ ದಿಂದ ಇದು ಅಸಾಧ್ಯ. ಅಲ್ಲದೆ ಇಲ್ಲಿ ನೆಟ್‌ವರ್ಕ್ ಸಮಸ್ಸೆ ಇದ್ದು ಮಕ್ಕಳಿಗೆ ತಲುಪದೆ ಸಮಸ್ಸೆ ಎದುರಿಸುತ್ತಿದ್ದಾರೆ, ಮೊಬೈಲ್ ಇದ್ದರೂ ನೆಟ್ ಇಲ್ಲ ಇದಕ್ಕೆ ಪರಿಹಾರ ಏನು. ಆದ್ದರಿಂದ ಇದೊಂದು ಸಂಪೂರ್ಣ ಪರಿಣಾಮ ಕಾರಿಯಲ್ಲ ಇದೊಂದು ತಾತ್ಕಾಲಿಕ ವ್ಯವಸ್ಥೆಯಷ್ಟೆ.

ಕೊರೊನಾದಿಂದ ಎರಡು ವರ್ಷ ಪರೀಕ್ಷೆ ಇಲ್ಲದೆ ಪಾಸ್ ಮಾಡಿರುವುದು ಅವರ ಶೈಕ್ಷಣಿಕ ಭವಿಷ್ಯಕ್ಕೆ ಮಾರಕ, ಏಕೆಂದರೆ ಮೂಲಭೂತ ಪರಿಕಲ್ಪನೆಗಳಿಲ್ಲದೆ ಮುಂದಿನ ಅವರ ಶೈಕ್ಷಣಿಕ ಚಟುವಟಿಕೆ ಫಲಪ್ರದವಾಗದು. ಅವರ ಕಲಿಕೆ ಅಪೂರ್ಣವಾಗುತ್ತದೆ. ಕಲಿಕೆಯಲ್ಲಿನ ಏಕಾಗ್ರತೆ ಕಳೆದುಕೊಂಡು ಶೈಕ್ಷಣಿಕ ಅಭಿರುಚಿ ಕಳೆದುಕೊಳ್ಳುತ್ತಾರೆ.

ಹಳ್ಳಿಗಾಡಿನಲ್ಲಿ ಬಾಲ್ಯವಿವಾಹ ನಡೆದು ಶೈಕ್ಷಣಿಕ ಹಿನ್ನಡೆ ಅನುಭವಿಸುತ್ತಾರೆ. ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ವೈಜ್ಞಾನಿಕ, ವೈಚಾರಿಕ ಚಿಂತನೆಗೆ ಅವರು ಮನಸ್ಸು ಮಾಡದೆ ಸಾಮಾಜಿಕ ಸಮಸ್ಯೆಗೆ ಒಳಗಾಗಿ ಭವಿಷ್ಯದಲ್ಲಿ ಮೂಡನಂಬಿಕೆಗೆ ಒಳಗಾಗಿ ಸ್ವಂತಿಕೆ ಕಳೆದುಕೊಳ್ಳುವ ಅಪಾಯವಿದೆ.

ಶಾಲೆ ಎನ್ನುವುದು ಬರಿ ಕಟ್ಟಡವಲ್ಲ, ಮಕ್ಕಳು ಅಲ್ಲಿ ಎಲ್ಲಾ ಜಾತಿಯ ಮಕ್ಕಳೊಂದಿಗೆ ಬೆರೆತು ಸಮಾನತೆಯನ್ನು ಕಲಿಯಲು ವೇದಿಕೆಯಾಗಿದೆ. ಬಡವ ಶ್ರೀಮಂತರೆನ್ನದೆ. ಒಂದಾಗಿ ಬಾಳಲು ಕಲಿಯಲು ಸಾಧ್ಯವಾಗುತ್ತದೆ, ಇದು ಆನ್‌ಲೈನ್ ಶಿಕ್ಷಣದಿಂದ ಸಾಧ್ಯವಿಲ್ಲ ಈ ಸಮಾನತೆ ಅರಿತರೆ ಶೈಕ್ಷಣಿಕ ಭವಿಷ್ಯ ಉತ್ತಮವಾಗಿ ರೂಪಿಸಲು ಸಾಧ್ಯ.

ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಸರಿಪಡಿಸಬಹುದು? ಪ್ರಸ್ತುತ ಸಂದರ್ಭದಲ್ಲಿ ಇದು ಸವಾಲಿನ ಪ್ರಶ್ನೆ.

ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಮಾಸ್ಕ್ ಧರಿಸುವುದು, ಪೋಷಕರಿಗೆ ಅರಿವು ಮೂಡಿಸುವುದು, ಮಕ್ಕಳ ಸಂಖ್ಯೆಯ ಒತ್ತಡವಾಗದೆ ಕಲಿಕೆಯಲ್ಲಿ ತೊಡಗುವಂತೆ ಮಾಡಿ, ಈ ಪರಿಸ್ಥಿತಿಯಲ್ಲಿ ಪೋಷಕರ ಪಾತ್ರ ಬಹಳ ಈ ಅರಿವು ಅವರಿಗೆ ಮೂಡಿಸಿ, ಶಿಕ್ಷಣ ಇಲಾಖೆ ಯೊಂದಿಗೆ ಉತ್ತಮ ಬಾಂಧವ್ಯ ಹೊಂದುವAತೆ ಮಾಡಿ ಕೊರೊನಾ ಸಮಯದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಶ್ರಮಿಸಬೇಕು.

- ವಿಲ್ಫೆçಡ್ ಕ್ರಾಸ್ತಾ, ಸಹ ಅಧ್ಯಾಪಕರು,

ಸಂತ ಮೈಕಲರ, ಪ್ರೌಢಶಾಲೆ, ಮಡಿಕೇರಿ