ಮಡಿಕೇರಿ, ಮೇ ೨೧ : ಜಿಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿರುವ ವಾರ್ಡ್ಗಳಲ್ಲಿ ಸೋಂಕಿತರ ಸಂಬAಧಿಕರು ಪ್ರವೇಶಿಸುತ್ತಿರುವುದು ಗಮನಕ್ಕೆ ಬಂದಿದ್ದು, ಸೋಂಕಿತರ ಸಂಬAಧಿಕರು, ಸಾರ್ವಜನಿಕರು ಈ ರೀತಿ ಕೋವಿಡ್ ವಾರ್ಡ್ಗೊಳಗೆ ಪ್ರವೇಶಿಸುವುದರಿಂದ ಕೋವಿಡ್ ಹರಡುವಿಕೆಗೆ ಪರೋಕ್ಷವಾಗಿ ಕಾರಣಕರ್ತರಾಗುತ್ತಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಸೋಂಕಿತರ ಸಂಬAಧಿಕರು, ಸಾರ್ವಜನಿಕರು ಕೋವಿಡ್ ವಾರ್ಡ್ನೊಳಗೆ ಅನಾವಶ್ಯಕವಾಗಿ ಪ್ರವೇಶಿಸುವುದನ್ನು ಹಾಗೂ ಇದಕ್ಕೆ ಅವಕಾಶ ಮಾಡಿಕೊಡುವುದನ್ನು ತಕ್ಷಣದಿಂದ ನಿರ್ಬಂಧಿ ಸಲಾಗಿರುತ್ತದೆ. ಈ ಬಗ್ಗೆ ಲೋಪದೋಷಗಳಿಗೆ ಅವಕಾಶ ನೀಡದಂತೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದೆ. ತಪ್ಪಿದಲ್ಲಿ ಸಂಬAಧಪಟ್ಟವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಆದೇಶದ ಉಲ್ಲಂಘನೆಯ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್ ೨೦೦೫ ಕಲಂ ೫೧ ರಿಂದ ೬೦ ದಿ ಕರ್ನಾಟಕ ಎಪಿಡಮಿಕ್ ಡಿಸೀಸಸ್ ಆಕ್ಟ್-೨೦೨೦ ಕಲಂ ೯, ಭಾರತೀಯ ದಂಡ ಸಂಹಿತೆ ೧೮೬೦ ಕಲಂ ೧೮೮ ಇನ್ನಿತರ ಸಂಬAಧಿತ ಕಾಯ್ದೆಗಳಡಿ ದಂಡನೀಯವಾಗಿದೆ.