ಮಡಿಕೇರಿ, ಮೇ ೧೮: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ನಿರ್ಮಾಣ ವಿದ್ಯಾ ಹೆಲ್ಪ್ ಲೈನ್‌ನ ಸಹಯೋಗದ ವತಿಯಿಂದ ತಾ. ೧೯ ರಿಂದ (ಇಂದಿನಿAದ) ಮೂರು ದಿನಗಳ ಕಾಲ ೧೦ನೇ ತರಗತಿ ಬೋಧಿಸುವ ಪ್ರೌಢಶಾಲಾ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವೃತ್ತಿ ಸಮಾಲೋಚನೆ ಕುರಿತು ಜೂಮ್ ಮೀಟ್ ಮೂಲಕ ತರಬೇತಿ ಏರ್ಪಡಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವೃತ್ತಿ ಸಮಾಲೋಚನೆ ಕುರಿತು ಮೂರು ದಿನಗಳ ಕಾಲ ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆಯವರೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಈ ತರಬೇತಿಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನ/ ಅನುದಾನರಹಿತ ಪ್ರೌಢಶಾಲೆಗಳ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಭಾಗವಹಿಸಬೇಕು ಎಂದು ಡಿಡಿಪಿಐ ಪೆರಿಗ್ರೀನ್ ಎಸ್.ಮಚ್ಚಾಡೋ ತಿಳಿಸಿದ್ದಾರೆ.

ಜಿಲ್ಲೆಯ ಮೂರು ಶೈಕ್ಷಣಿಕ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಈ ತರಬೇತಿ ನೀಡಲಾಗುವುದು. ತಾ. ೧೯ ರಂದು (ಇಂದು) ಮಡಿಕೇರಿ ತಾಲೂಕು, ೨೦ ರಂದು ಸೋಮವಾರಪೇಟೆ ತಾಲೂಕು ಹಾಗೂ ೨೧ ರಂದು ವೀರಾಜಪೇಟೆ ತಾಲೂಕು ಪ್ರೌಢಶಾಲಾ ಶಿಕ್ಷಕರಿಗೆ ಈ ತರಬೇತಿ ಏರ್ಪಡಿಸಲಾಗಿದೆ. ಜೂಮ್ ಮೂಲಕ ತರಬೇತಿಗೆ ಹಾಜರಾಗುವ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಾಟ್ಸಪ್ ಗ್ರೂಪ್ ಮೂಲಕ ತಾಲೂಕುವಾರು ಐಡಿ ಮತ್ತು ಪಾಸ್ ವರ್ಡ್ ಕಳುಹಿಸಲಾಗಿದೆ.

ತಾ. ೧೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿರುವ ಈ ಜೂಮ್ ಆ್ಯಪ್ ಮೂಲಕ ತರಬೇತಿಯನ್ನು ಡಿಡಿಪಿಐ ಪೆರಿಗ್ರೀನ್ .ಎಸ್.ಮಚ್ಚಾಡೋ ಉದ್ಘಾಟಿಸಲಿದ್ದು, ನಿರ್ಮಾಣ ವಿದ್ಯಾ ಹೆಲ್ಪ್ ಲೈನ್ ನ ಸಿಇಓ ಪಿ.ಚಂದ್ರಶೇಖರ್ ಆಶಯ ನುಡಿಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.