ಕೂಡಿಗೆ, ಮೇ ೧೮: ಕಾವೇರಿ - ಹಾರಂಗಿ ನದಿ ಸಂಗಮವಾಗುವ ಸ್ಥಳದಿಂದ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರು ಕೂಡಿಗೆ ಸೇತುವೆ ಹತ್ತಿರ ಹಾರಂಗಿ ನದಿಗೆ ಹಿಂದಕ್ಕೆ ತಳ್ಳಲ್ಪಟ್ಟಿದೆ. ಇದರಿಂದಾಗಿ ಹಾರಂಗಿ ನದಿಯು ತುಂಬಿದ ಮಾದರಿಯಲ್ಲಿ ಕಾಣುತ್ತಿದೆ. -ಕೆ.ಕೆ.ಎನ್. ಶೆಟ್ಟಿ