(ವಿಶೇಷ ವರದಿ, ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ ೧೮: ಕೊರೊನಾ ವಾರಿಯರ್‌ಗಳಾಗಿ ಮಳೆ, ಗಾಳಿ ಎನ್ನದೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಗೋಣಿಕೊಪ್ಪ ಚೆಸ್ಕಾಂನ ಹಲವು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿAದ ವಿದ್ಯುತ್ ಪೂರೈಕೆಯಲ್ಲಿ ಬಾರಿ ತೊಂದರೆ ಎದುರಾಗಿದೆ.

ಲಭ್ಯವಿರುವ ಕೆಲವೇ ಕೆಲವು ಸಿಬ್ಬಂದಿಗಳು ಪ್ರತಿಯೊಂದು ಸ್ಥಳಕ್ಕೆ ತೆರಳಿ ವಿದ್ಯುತ್ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಎರಡನೇ ಅಲೆಯ ನಂತರದಲ್ಲಿ ದೂರದ ಪಟ್ಟಣ ಪ್ರದೇಶಗಳಲ್ಲಿ ಕೆಲಸದಲ್ಲಿ ಇದ್ದಂತಹ ಅನೇಕ ಮಂದಿ ಈ ಭಾಗಕ್ಕೆ ಆಗಮಿಸಿ ಮನೆಯಲ್ಲಿಯೇ ತಮ್ಮ ಕಂಪ್ಯೂಟರ್ ಮೂಲಕ ‘ವರ್ಕ್ ಫ್ರಮ್ ಹೋಂ’ ಮಾಡುತ್ತಿದ್ದಾರೆ. ಬಹುತೇಕ ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವುದರಿಂದ ಸಹಜವಾಗಿಯೇ ಇವರಿಗೆ ವಿದ್ಯುತ್ ಅವಶ್ಯಕತೆ ಹೆಚ್ಚಿದೆ.

ಆದರೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿದ್ದಲ್ಲಿ ಇವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇವರ ಮಾಸಿಕ ವೇತನದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಇದು ಒಂದೆಡೆಯಾದರೆ ಮನೆಯಲ್ಲಿ ಇರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿವೆ. ಇವರಿಗೂ ಕೂಡ ವಿದ್ಯುತ್ ಅವಶ್ಯಕತೆ ಹೆಚ್ಚಿದೆ.

ಹಲವಾರು ಪ್ರದೇಶದಲ್ಲಿ ಮೊಬೈಲ್ ಟವರ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಇವುಗಳ ನಿರ್ವಹಣೆಗೆ ವಿದ್ಯುತ್ ನಿಲುಗಡೆ ಆದ ವೇಳೆ ಜನರೇಟರ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇದೀಗ ಮೊಬೈಲ್ ಟವರ್‌ಗಳಿಗೆ ಜನರೇಟರ್ ವ್ಯವಸ್ಥೆ ಇಲ್ಲದಿರುವುದರಿಂದ ಅನಿವಾರ್ಯವಾಗಿ ಚೆಸ್ಕಾಂ ನೀಡುವ ವಿದ್ಯುತ್ ಪೂರೈಕೆಯನ್ನೇ ಅವಲಂಬಿಸಬೇಕಾಗಿದೆ.

ಇದರಿAದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ಮೊಬೈಲ್ ಫೋನ್ ಟವರ್‌ಗಳು ಸಂಪರ್ಕ ಕಡಿತಗೊಂಡು ಮೊಬೈಲ್‌ಗಳಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಇದರಿಂದಾಗಿ ವರ್ಕ್ ಫ್ರಮ್ ಹೊಮ್ ಹಾಗೂ ಆನ್‌ಲೈನ್ ಕ್ಲಾಸ್‌ಗೆ ತುಂಬಾ ಸಮಸ್ಯೆ ಎದುರಾಗಿದೆ.

ಕೆಲವು ಭಾಗಗಳಲ್ಲಿ ಮಳೆ, ಗಾಳಿಯಿಂದ ದಿನಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದರಿಂದ ಇಲ್ಲಿನ ಸಮಸ್ಯೆ ಹೇಳತೀರಾದ್ದಗಿದೆ. ಕೆಲವು ಅನುಕೂಲವುಳ್ಳವರು ತಮ್ಮ ಮನೆಯ ಮಕ್ಕಳ ಕೆಲಸಕ್ಕೆ ತೊಂದರೆ ಎದುರಾಗದಿರಲಿ ಎಂದು ಜನರೇಟರ್ ಹಾಗೂ ಯುಪಿಎಸ್ ಅಳವಡಿಸಿದ್ದಾರೆ. ಆದರೆ ಬಹುತೇಕ ಮಂದಿಗೆ ಇದನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಂದೊಡ್ಡಿದೆ.

ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ

ಚೆಸ್ಕಾಂ ಇಲಾಖೆಯ ಹಲವಾರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿAದ ಇವರಿಗೆ ರಜೆ ನೀಡಿ ಹೋಮ್ ಕ್ಯಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ದಿಢೀರ್ ಬರುವ ಮಳೆ, ಗಾಳಿ ಹಾಗೂ ಸಿಡಿಲು ಮಿಂಚಿನಿAದಾಗಿ ನಿರೀಕ್ಷೆ ಮಾಡಲಾಗದ ರೀತಿಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್ ಪಾರ್ಮರ್‌ಗಳು ಹಾನಿಯಾಗುತ್ತಿವೆ. ಇರುವ ಸಿಬ್ಬಂದಿಗಳಿAದ ಹೆಚ್ಚಿನ ಕೆಲಸ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಿಬ್ಬಂದಿಗಳ ಮನವೊಲಿಸಿ ಆದಷ್ಟು ಬೇಗನೆ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವ ತನಕ ಗ್ರಾಹಕರು ಚೆಸ್ಕಾಂನೊAದಿಗೆ ಸಹಕರಿಸಬೇಕು.

-ಕೃಷ್ಣಕುಮಾರ್, ಚೆಸ್ಕಾಂ ಜೆಇ ಗೋಣಿಕೊಪ್ಪ

ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆ ಉಲ್ಬಣ

ವಿದ್ಯುತ್ ಅನ್ನೇ ನಂಬಿಕೊAಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮೊಬೈಲ್ ಮೂಲಕ ಶಿಕ್ಷಕರು ನೀಡುವ ಪಾಠ ಪ್ರವಚನಗಳನ್ನು ಆಲಿಸಬೇಕಾಗಿದೆ.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿ ‘ವರ್ಕ್ ಫ್ರಮ್ ಹೋಮ್’ ಮಾಡುತ್ತಿರುವ ಉದ್ಯೋಗಿಗಳಿಗೆ ತೊಂದರೆ ಎದುರಾಗಿದೆ.

-ಆಲೆಮಾಡ ಮಂಜುನಾಥ್, ರೈತ ಮುಖಂಡರು, ಕಿರುಗೂರು