ಕೋವಿಡ್ ಸೋಂಕಿತರು ತಾವು ಮನೆಯಲ್ಲಿಯೇ ಇರುವದಾಗಿ ಹೇಳಿ ಮನೆU ಆದರೆ, ಕೋವಿಡ್ ಸೋಂಕಿತರು ಇರುವ ಮನೆಯಲ್ಲಿ ಪ್ರತ್ಯೇಕ ಮಲಗುವ ಕೋಣೆ, ಶೌಚಾಲಯ, ಸ್ನಾನಗೃಹ, ಒಡಾಡಲು ಸ್ಥಳಾವಕಾಶ ಇರಬೇಕಾಗುತ್ತದೆ. ಅಲ್ಲದೆ, ಸೋಂಕಿತರು ಇರುವ ಮನೆಯಲ್ಲಿ ಇತರ ಸದಸ್ಯರುಗಳಿದ್ದರೆ ಅವರುಗಳೂ ಕೂಡ 14 ದಿನಗಳ ಕಾಲ ಸೋಂಕಿತರಿಂದ ದೂರ ಇರಬೇಕಾಗುತ್ತದೆ. ಸೋಂಕಿತರಿಗೆ ಊಟೋಪಚಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಲು ಕೂಡ ಯಾರಾದರೂ ಇರಬೇಕಾಗುತ್ತದೆ. ಆದರೆ, ಎಲ್ಲ ಮನೆಗಳಲ್ಲಿ ಈ ಸೌಕರ್ಯ ಇರುವದಿಲ್ಲ, ಹಾಗಾಗಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಾ ಸಾಂಕ್ರಾಮಿಕವಾಗಿ ಹರಡಲಾರಂಭಿಸುತ್ತದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ಆದೇಶದಂತೆ ಜಿಲ್ಲಾಧಿಕಾರಿಗಳ ಸೂಚನೆಗಳ ಮೇರೆಗೆ ಸರಕಾರ ನಿಯಮಾವಳಿ ಪ್ರಕಾರ ಹೋಂ ಐಸೋಲೇಶನ್‍ನಲ್ಲಿರಲು ಬೇಕಾದ ಸವಲತ್ತುಗಳಿದ್ದರೆ ಮಾತ್ರ ಮನೆಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾಳಜಿ ತೋರುತ್ತಿರುವ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿ ಅವರು, ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಪರೀಕ್ಷೆ ಬಳಿಕ ಅಗತ್ಯವಿರುವವರನ್ನು ಕೋವಿಡ್ ಆಸ್ಪತ್ರೆ ಹಾಗೂ ಇತರರನ್ನು ಗಾಳಿಬೀಡು ಬಳಿ ನವೋದಯ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲು ಮಾಡಿಕೊಂಡು ಗುಣಮುಖರಾಗುವವರೆಗೆ ಆರೈಕೆ ಮಾಡಲು ಕ್ರಮ ಕೈಗೊಂಡಿದ್ದಾರೆ.