ಇದೀಗ ಹೊಸ ಕಟ್ಟಡವಿರುವ ಜಾಗದಲ್ಲಿ ಒಂದು ಬದಿಯಲ್ಲಿ ಹಳೆಯದಾದ ಇಲಾಖೆಯ ಹಿರಿಯ ಅಧಿಕಾರಿಗಳ ವಸತಿಗೃಹವೊಂದಿತ್ತು. ಬಹಳ ಹಳೆಯದಾಗಿದ್ದು, ಬಹುಷಃ ಬ್ರಿಟಿಷರ ಕಾಲದಲ್ಲಿಯೇ ನಿರ್ಮಾಣವಾಗಿದ್ದಿರಬಹುದೆಂದು ಕಟ್ಟಡದ ವಿನ್ಯಾಸ ನೋಡಿದರೆ ಅರಿವಾಗುತ್ತಿತ್ತು. ಬಹಳಷ್ಟು ಹಿರಿಯ ಅಧಿÀಕಾರಿಗಳು, ಅಭಿಯಂತರರು ವಾಸವಿದ್ದ ಈ ಬಂಗಲೆ ಬರಬರುತ್ತಾ ಯಾರೂ ವಾಸ ಮಾಡದ್ದರಿಂದ ಪಾಳು ಬಿದ್ದಿತು. ಕಾಡಿನಿಂದಾವೃತವಾದ ಈ ಕಟ್ಟಡದ ಒಂದೊಂದೇ ಭಾಗ ಕುಸಿಯಲಾರಂಭಿಸಿತು. ಕಟ್ಟಡ ಇನ್ನಿತರ ಚಟುವಟಿಕೆಗಳಿಗೆ ದುರುಪಯೋಗವಾಗತೊಡಗಿದಾಗ ಸಾರ್ವಜನಿಕರಿಂದ ಆಕ್ಷೇಪಣೆಗಳೂ ಕೇಳಿಬಂದವು. ಕಟ್ಟಡವನ್ನು ಕೆಡವುವಂತೆಯೂ ಒತ್ತಾಯಗಳು ಕೇಳಿಬಂದವು. ನಂತರದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡ ಬಳಿಕ ಈ ಕಟ್ಟಡ ಕಾಮಗಾರಿಗೆ ಅಗತ್ಯವಾದ ಸಾವiಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಗೋದಾಮು ಆಗಿ ಬಳಕೆಗೆ ಬಂದಿತು. ಇದೀಗ ಈ ಕಟ್ಟಡಕ್ಕೆ ಹೊಸ ರೂಪ ಕೊಡಲಾಗುತ್ತಿದ್ದು, ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನವಾಗುತ್ತಿದೆ.