ಈಗಾಗಲೇ ಕಟ್ಟಡದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ರೂ. 30 ಲಕ್ಷ ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳಲಿದೆ. ಹಿಂದೆ ಅಳವಡಿಸಲಾಗಿದ್ದ ಹಳೆಯ ಮರ ಹಾಗೂ ಹೆಂಚುಗಳನ್ನು ತೆರವುಗೊಳಿಸಿ ಮೇಲ್ಛಾವಣಿಗೆ ಕಬ್ಬಿಣದ ಸರಳುಗಳೊಂದಿಗೆ ಹೊಸ ಹೆಂಚುಗಳನ್ನು ಅಳವಡಿಸಲಾಗಿದೆ. ಕಿತ್ತುಹೋಗಿದ್ದ ಗೋಡೆಯ ಸಾರಣೆಯನ್ನು ಹೊಸದಾಗಿ ಮಾಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಲಹಾ ಸಮಿತಿಯವರು ಆಗಮಿಸಿ ಪರಿಶೀಲಿಸಿದ ಬಳಿಕ ಲೋಕಾರ್ಪಣೆಗೊಳ್ಳಲಿದೆ.