ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆ ಜಂಕ್ಷನ್ ಬಳಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರ ಅಧಿಕವಾಗಿತ್ತು. ವಾಹನ ಹಾಗೂ ಜನರ ದಟ್ಟಣೆ ಅಧಿಕವಾಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಅಪರಾಹ್ನ 12-30ರ ವೇಳೆಗೆ ಗೋಣಿಕೊಪ್ಪ ರಸ್ತೆ ಖಾಲಿ ಖಾಲಿಯಾಗಿತ್ತು.