ಕರ್ನಾಟಕ ಕಪ್ರ್ಯೂನ ಹಿನೆÀ್ನಲೆಯಲ್ಲಿ ಕೊಡಗಿನಲ್ಲಿ ಸೋಮವಾರ ನಿತ್ಯೋಪಯೋಗಿ ಸಾಮಾಗ್ರಿ ಖರೀದಿಸಲು ಜಿಲ್ಲಾಡಳಿತ ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ಜನರಿಗೆ ಸಮಯ ನಿಗದಿಗೊಳಿಸಿತ್ತು.
ತರಕಾರಿ ದಿನಸಿ ವ್ಯಾಪಾರಕ್ಕೆ ಮಂಗಳವಾರಕ್ಕೆ ನಿಗದಿಗೊಳಿಸಿದ ದಿನವನ್ನು ಜಿಲ್ಲಾಡಳಿತವು ತುರ್ತು ಆಗಿ ಭಾನುವಾರ ಸಂಜೆ ಆದೇಶ ಹೊರಡಿಸಿ ಸೋಮವಾರ ತರಕಾರಿ ದಿನಸಿ ನಡೆಸುವಂತೆ ಆದೇಶ ಬಂದ ಹಿನೆÀ್ನಲೆ ಮಾರುಕಟ್ಟೆಯ ಸ್ಥಳಾಂತರಕ್ಕೆ ಕಷ್ಟ ಸಾಧ್ಯವಾಗಿದೆ. ದಿನಸಿ, ತರಕಾರಿ ಅಂಗಡಿ ಕೋಳಿ, ಮೀನು ಕುರಿ ಆಡು ಹಂದಿ ಮಾಂಸದ ಅಂಗಡಿಗಳಲ್ಲಿ ಬಿರುಸಿನ ವ್ಯಾಪಾರ ನಡೆಯಿತು. ಮದ್ಯದಂಗಡಿಗಳಲ್ಲೂ ಪಾರ್ಸೆಲ್ಗಾಗಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು.
ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನಗಳಲ್ಲಿ ವ್ಯಾಪಾರ ವಹಿವಾಟಿಗೆ ಆಗಮಿಸಿದ್ದ ದ್ವಿಚಕ್ರ, ಆಟೋರಿಕ್ಷಾ, ಕಾರುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಿದರು. ಆಟೋ ರಿಕ್ಷಾ ಚಾಲನೆಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪೊಲೀಸರು ನಿರ್ಬಂಧಿಸಿದರೂ ಅನಂತರ ಗ್ರಾಮ ಪಂಚಾಯಿತಿ ಪೊಲೀಸರೊಂದಿಗೆ ಆಟೋ ಚಾಲಕರು ಮಾತುಕತೆ ನಡೆಸಿದ ಹಿನ್ನೆಲೆÉ ಬೆಳಿಗ್ಗೆ 10 ಗಂಟೆಯ ನಂತರ ಆಟೋ ಚಾಲಿಸಲು ಅನುಮತಿ ದೊರೆಯಿತು.
ಅಷ್ಟರಲ್ಲಾಗಲೇ ದಿನಸಿ, ತರಕಾರಿ ಮಾಂಸ ಖರೀದಿಗೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿ ಖರೀದಿಸಿದ ಜನತೆ ಅವುಗಳನ್ನು ಸಾಗಿಸಲು ಬಾಡಿಗೆ ವಾಹನಗಳು ಇಲ್ಲದೆ, ತಲೆಯ ಮೇಲೆ ಹೊತ್ತು ನಡೆದು ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.