18 ರಿಂದ 44 ವರ್ಷ ವಯೋಮಿತಿಯವರು ‘ಕೋವಿನ್’ ವೆಬ್‍ಸೈಟ್ ಮೂಲಕ ನೋಂದಣಿ, ಲಸಿಕಾ ಕೇಂದ್ರ ನಿಗದಿಪಡಿಸುವುದು ಕಡ್ಡಾಯವಾಗಿದೆ. ಇದರ ನಂತರ ಫಲಾನುಭವಿಗಳಿಗೆ 4 ಸಂಖ್ಯೆಯ ‘ಕೋಡ್’ ಬರುತ್ತದೆ. ಇದನ್ನು ಲಸಿಕಾ ಕೇಂದ್ರಗಳಲ್ಲಿ ನೀಡಿ ಲಸಿಕೆ ಪಡೆಯಬಹುದಾಗಿದೆ.

45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರದಿಂದ ವಿತರಣೆಯಾಗಿರುವ ಲಸಿಕೆಯನ್ನು ನೀಡಲಾಗುತ್ತಿದ್ದು, ಇವುಗಳೆಲ್ಲವೂ ಎರಡನೆಯ ‘ಡೋಸ್’ಗಳಾಗಿವೆ. ಲಸಿಕೆ ಕೊರತೆಯಿಂದಾಗಿ 45 ವರ್ಷ ಮೇಲ್ಪಟ್ಟವರಿಗೆಎರಡನೆಯ ‘ಡೋಸ್’ ಮಾತ್ರ ನೀಡಲಾಗುತ್ತಿದೆ. ಫಲಾನುಭವಿಗಳು ಮೊದಲನೆಯ ‘ಡೋಸ್’ ಪಡೆದು ಅವಧಿ ಮೀರುವ ಮುನ್ನ ಎರಡನೆಯ ‘ಡೋಸ್’ ಪಡೆಯಬೇಕು. ಇಲ್ಲವಾದಲ್ಲಿ ಲಸಿಕೆ ಹಾಕಿಸಿಕೊಂಡು ಪ್ರಯೋಜನವಿಲ್ಲ. ಈ ಕಾರಣದಿಂದಾಗಿ ಎರಡನೆಯ ‘ಡೋಸ್’ಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. 18 ರಿಂದ 44 ವರ್ಷದವರಿಗೆ ಮಾತ್ರ ಮೊದಲನೆಯ ‘ಡೋಸ್’ ನೀಡಲಾಗುತ್ತಿರುವುದಾಗಿ ಆರ್.ಸಿ.ಹೆಚ್ ಅಧಿಕಾರಿ ಡಾ.ಗೋಪಿನಾಥ್ ಮಾಹಿತಿ ನೀಡಿದ್ದಾರೆ.