ಆನ್‍ಲೈನ್ ನೋಂದಣಿ ಕಡ್ಡಾಯ

ಮಡಿಕೇರಿ, ಮೇ 10: 18 ವರ್ಷ ಮೇಲ್ಪಟ್ಟವರಿಗೆ ತಾ.1 ರಂದೇ ಪ್ರಾರಂಭವಾಗಬೇಕಿದ್ದ ಲಸಿಕಾ ಅಭಿಯಾನ ಲಸಿಕಾ ಅಭಾವದಿಂದಾಗಿ ಮುಂದೂಡಲಾಗಿತ್ತು. ತಾ. 10 ರಿಂದ, 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಕುರಿತು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಅವರು ಘೋಷಿಸಿದ ಬೆನ್ನಲ್ಲೇ, ಕೊಡಗು ಜಿಲ್ಲೆಯಲ್ಲಿಯೂ ತಾ. 10 ರಂದು 139 ಫಲಾನುಭವಿಗಳು ಲಸಿಕೆ ಪಡೆದುಕೊಂಡರು. ತಾ. 10 ರ ಮಧ್ಯಾಹ್ನದ ವೇಳೆಗೆ ರಾಜ್ಯ ಸರಕಾರದಿಂದ 3,500 ಕೋವಿಶೀಲ್ಡ್ ಲಸಿಕಾ ಡೋಸ್‍ಗಳು ಜಿಲ್ಲೆಗೆ ಆಗಮಿಸಿದವು. ಈ ಪೈಕಿ 139 ಲಸಿಕಾ ಡೋಸ್‍ಗಳನ್ನು 18 ರಿಂದ 44 ವರ್ಷದವರಿಗೆ ನಗರದ ಸಂತ ಮೈಕಲರ ಶಾಲೆಯ ಲಸಿಕಾ ಕೇಂದ್ರದಲ್ಲಿ ನೀಡಲಾಯಿತು.