ಚೆಟ್ಟಳ್ಳಿಯ ಅಂಗಡಿ ಮುಂಗಟ್ಟುಗಳಲ್ಲಿ ಜನರು ನಿತ್ಯವಸ್ತು ಖರೀದಿಸುವಲ್ಲಿ ನಿರತರಾಗಿದ್ದುದು ಕಂಡುಬಂತು. ಪೆÇಲೀಸ್ ಸಿಬ್ಬಂದಿಗಳು ಜನರನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದರು. ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡನ್ನು ಅಳವಡಿಸಿ ಕಾರ್ಯನಿರತ ಸಿಬ್ಬಂದಿಗಳನ್ನು ಮಾತ್ರ ಬಿಡಲಾಗುತ್ತಿತ್ತು. ಅನಗತ್ಯ ತೆರಳುವ ವಾಹನ ಹಾಗೂ ಬೈಕ್ ಸವಾರಿಗೆ ಕೇಸ್ ಹಾಕುವ ಮೂಲಕ ಪೊಲೀಸರು ಎಚ್ಚರಿಕೆ ನೀಡುತ್ತಿದ್ದುದು ಕಂಡು ಬಂತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್ ‘ಶಕ್ತಿ’ಯೊಂದಿಗೆ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ಪಟ್ಟಣದುದ್ದಕ್ಕೂ ಸ್ಯಾನಿಟೇಷನ್ ಮಾಡಲಾಗಿದೆ. ಸಮಯ ಮೀರಿ ವ್ಯಾಪಾರ ವಹಿವಾಟು ನಡೆಸುತಿದ್ದ ದಿನಸಿ ಅಂಗಡಿ ಹಾಗೂ ಕೋಳಿ ಮಳಿಗೆಗೆ ಪಂಚಾಯಿತಿ ಮುಖಾಂತರ ಪೆÇಲೀಸ್ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ ಎಂದರು.