ಪೆÇನ್ನಂಪೇಟೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣದ ಒಳಭಾಗಕ್ಕೆ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದರಿಂದ ವಯಸ್ಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ವಸ್ತು ಖರೀದಿಗೆ ತೊಂದರೆಯಾಗಿತ್ತು. ಸುಮಾರು 1 ಕಿ.ಮೀ. ದೂರ ನಡೆದುಕೊಂಡೇ ಬಂದ ಸಾರ್ವಜನಿಕರು ಸಾಮಗ್ರಿಗಳನ್ನು ಖರೀದಿಸಿ ಕಷ್ಟಪಟ್ಟು ಹೊತ್ತುಕೊಂಡು ತಮ್ಮ ವಾಹನದ ಕಡೆ ಹೆಜ್ಜೆ ಹಾಕಿದರು. ಈ ಸಂದರ್ಭ ವಾಹನಗಳ ತಡೆಗೆ ಬ್ಯಾರಿಕೇಡ್ ಹಾಕಿದ್ದ ಸ್ಥಳಗಳಲ್ಲಿ ಪೆÇಲೀಸ್ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್, ಗೋಣಿಕೊಪ್ಪ ವೃತ್ತ ನೀರಿಕ್ಷಕ ಜಯರಾಮ್ ಅವರು ಬಂದೋಬಸ್ತ್ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭ ಸಾರ್ವಜನಿಕರು ಅವರ ಬಳಿ ತೆರಳಿ, ಹೊಸ ನಿಯಮದಿಂದ ಸಾಕಷ್ಟು ತೊಂದರೆಯಾಗುತ್ತಿದೆ. ವಾಹನಗಳಿಗೆ ಪೆಟ್ರೋಲ್ ಹಾಕಿಸಲು ಕೂಡ ಸಾಧ್ಯವಾಗುತ್ತಿಲ್ಲ, ನಾಲ್ಕೈದು ದಿನಕ್ಕಾಗುವಷ್ಟು ದಿನಬಳಕೆ ವಸ್ತುಗಳನ್ನು ತಲೆಮೇಲೆ ಹೊತ್ತು ಸಾಗುವುದಾದರೂ ಹೇಗೆ, ಇದರಿಂದ ವಯಸ್ಕರಿಗೆ, ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಈ ಸಂದರ್ಭ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪಟ್ಟಣದ ಒಳಗೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದರಿಂದ ರಸ್ತೆಗಳು ಖಾಲಿ, ಖಾಲಿಯಾಗಿದ್ದವು. ಜನ ಸಂದಣಿ ಕಡಿಮೆ ಇತ್ತು. ಬೆಳಗ್ಗಿನ ಜಾವ 6 ಗಂಟೆಯಿಂದಲೇ ಗ್ರಾಹಕರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಅಗತ್ಯ ವಸ್ತುಗಳನ್ನು ಖರೀದಿಸಿ ಬೇಗ ಬೇಗ ಮನೆ ಸೇರಿಕೊಂಡಿದ್ದರಿಂದ 10 ಗಂಟೆಗೆ ಬಹುತೇಕ ಅಂಗಡಿಗಳ ಮುಂದೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.
ಜಿಲ್ಲಾಡಳಿತದ ಹೊಸ ನಿಯಮ ವಾಹನ ದಟ್ಟಣೆ ಹಾಗೂ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಸಾರ್ವಜನಿಕರು ಮಾತ್ರ ಈ ನಿಯಮದಿಂದ ಪರದಾಡುವಂತಾಯಿತು.
ಪೆÇನ್ನಂಪೇಟೆ ಪೆÇಲೀಸ್ ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದಲ್ಲಿ ಪೆÇಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.