ಕೂಡಿಗೆ, ಮೇ ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಪ್ಪಲು ಗ್ರಾಮದಲ್ಲಿರುವ ಚೋಳನ ಕೆರೆಯ ಹೂಳು ತೆಗೆದ ಪರಿಣಾಮ ನೀರಿನ ಸಂಗ್ರಹಣೆಗೆ ಅನುಕೂಲವಾಗಿದೆ.

ಕಳೆದ ವರ್ಷ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. ೨ ಲಕ್ಷ ವೆಚ್ಚದಲ್ಲಿ ಗ್ರಾಮದ ರೈತರ ಬೇಡಿಕೆಯ ಮೇರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಈ ಕೆರೆಯ ಹೂಳನ್ನು ತೆಗೆಸಿದ ಪರಿಣಾಮವಾಗಿ ಮಳೆಯ ನೀರು ಬಹಳಷ್ಟು ಸಂಗ್ರಹವಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚುತ್ತಿದೆ. ಅಲ್ಲದೆ ಈ ಭಾಗದ ರೈತರ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುತ್ತಿದೆ.