ಕೇಳೊ ಕೇಳೋ ಸಂಙÁದಿ - ಕೇಳೋ ಕೇಳೋ ಗೆಳೆಯನೇ ಕಾವೇರಿ ಪೊಳೆಯಿಲ್ - ಕಾವೇರಿ ನದಿಯಲ್ಲಿ

ಒಕ್ಕುವಳ ನೀರ್‌ಲ್ - ಹರಿಯುವ ಜಲದಲ್ಲಿ

ಮುಂಙÂತ್ ಕುಳಿಚಕ್ಕ - ಮುಳುಗುತ್ತ ಮಿಂದರೆ

ಕೆಜ್ಜ ಪಾಪ ಪೋಪದ್ - ಮಾಡಿದ ಪಾಪ ಪರಿಹಾರ

ಎನ್ನನೆಂದರಿವಿಯ ? - ಹೇಗೆಂದು ಗೊತ್ತೇನು ?

ನಲ್ಲೋರಾಚೆ ನಾಳಾಯಿ - ಒಂದು ಶುಭ ದಿನದಲ್ಲಿ

ಅಗಸ್ತö್ಯ ಮುನಿರಾಯ - ಅಗಸ್ತö್ಯ ಮುನಿರಾಯ

ಪೊಂಗಲಶ ಪಾತ್ರತ್ - ಹೊಂಗಲಶ ಪಾತ್ರದಲ್ಲಿ

ತೀರ್‌ತನ ಬೂಕಿತ್ - ತೀರ್ಥವನ್ನು ಸುರಿದು

ಬ್ರಹ್ಮಗಿರಿ ಮೋಳ್‌ಲ್ - ಬ್ರಹ್ಮಗಿರಿ ಶಿಖರದಲ್ಲಿ

ಬೆಚ್ಚಿತ್ ಪೊರಟಿತ್ - ಇಟ್ಟು ಹೋಗಿರಲಾಗ

ಬೈಪಿರಿಂಜಿ ಬಕ್ಕಣೆ - ಹಿಂದಿರುಗಿ ಬರುವಾಗ

ಪಾಪಿ ಕೆಟ್ಟ ಕಾಕೆಯೊ - ಪಾಪಿ ಕಾಗೆಯೊಂದು

ಪೊAಗಲಶ ಪಾತ್ರತ್ - ಹೊಂಗಲಶ ಪಾತ್ರೆಯ

ತೀರ್‌ತ ಮರಿಚತ್ - ತೀರ್ಥ ಮಗುಚಿ ಹಾಕಿತ್ತು

ಅದ್ ಕಂಡಗಸ್ತö್ಯನ್ - ಅದನ್ನು ಕಂಡ ಅಗಸ್ತö್ಯನು

ಮೈದುಂಬ ಚೊಡಿ ಬಂದ್ - ಕೋಪಗೊಳ್ಳುತ್ತಾ

ನಾಲ್ ದಿಕ್ಕೂ ನೋಟಣೆ - ನಾಲ್ಕು ದಿಕ್ಕನ್ನು ದಿಟ್ಟಿಸಲು

ನಾಲ್ ಮಂಡೆ ಬ್ರಹ್ಮನ್ - ನಾಲ್ಕು ತಲೆಯ ಬ್ರಹ್ಮನು

ಮಮ್ಮಾಯತೆ ಬಂದಿತ್ - ಮಾಯದಿAದ ಬಂದು

ಮುನಿ ಮಿಞ್ಞ ನಿಂದಿತ್ - ಮುನಿಯೆದುರು ನಿಂತು

‘‘ಚೊಡಿ ಬೋಂಡ ಋಷಿಯೇ - “ಸಿಟ್ಟಾಗಬೇಡ ಮುನಿಯೇ

ಬೋಂಡಿಯದ್ ಬೋಡಿಯ’’ - ಬೇಕಾದುದನ್ನು ಕೇಳು”

ಎಂದೆಣ್ಣಿ ಪರಂದಿತ್ - ಎAದು ಹೇಳುತ್ತಾ

ಚೊಡಿನ ತಣಿಚತ್ - ಕೋಪವನ್ನು ತಣಿಸಿದನು

ಆ ಬಾಕ್‌ನ ಕೇಟಿತ್ - ಈ ಮಾತನ್ನು ಕೇಳಿದ

ಅಗಸ್ತö್ಯ ಮುನಿರಾಯ - ಅಗಸ್ತö್ಯ ಮುನಿರಾಯ

ಈ ಬಾಕ್ ಪರಂದತ್ - ತಾನು ಹೀಗೆ ಹೇಳಿದನು

‘‘ಕೇಳೆನ್ನಡ ದೇವೈಯ್ಯ - “ಕೇಳು ಕೇಳು ದೇವನೇ

ಪೊಂಗಲಶ ಪಾತ್ರತ್ - ಹೊಂಗಲಶ ಪಾತ್ರದಲ್ಲಿ

ಇಂಜ ತೀರ್ಥ ಚೆಲ್ಲ್ಚಿ - ಇದ್ದ ತೀರ್ಥವೆÀಲ್ಲ ಚೆಲ್ಲಿತು

ಆನಂಗುAಡ್ ದೇವೈಯ್ಯ - ಆದುದರಿಂದ ದೇವನೇ

ತೀರ್ಥ ಬುದ್ದ ಕುಂಡ್‌ಲ್ - ತೀರ್ಥ ಚೆಲ್ಲಿಂದ ಗುಂಡಿಯಲ್ಲಿ

ಕಾಲೋರಾAಡೆಕೋರಮ್ಮ - ವರ್ಷಕ್ಕೆ ಒಮ್ಮೆ

ತೀರ್ಥ ಪುಟ್ಟುವನ್ನನೆ - ತೀರ್ಥ ಹುಟ್ಟುವಂತೆ

ನಾಕೋರ್ ವರ ತಾರೊ’’ - ನನಗೊಂದು ವರಕೊಡು”

ಎಂದೆಣ್ಣಿತ್ ಬೋಡಣೆ - ಎನ್ನುತ್ತಾ ಬೇಡಿಕೊಳ್ಳಲು

ನಾಲ್ ಮಂಡೆ ದೇವೈಯ್ಯ - ನಾಲ್ಕು ತಲೆಯ ದೇವನು

ಕೇಟದ್ ಕೊಡ್‌ತಿತ್ - ಕೇಳಿದ್ದನ್ನು ಕೊಟ್ಟು

ಕಣ್ಣ್ಕ್ ಮರೆಯಾಚಿ - ಕಣ್ಣಿನಿಂದ ಮರೆಯಾದನು

ಅದರಿಂಜ ಪಾರುವ - ಅದನ್ನರಿತ ಬ್ರಾಹ್ಮಣನು

ಚಂದೋಳ ಪೆರ್‌ಜಾಯಿ - ಸಂತೋಷ ಭರಿತನಾಗಿ

‘‘ಸ್ವರ್ಗ ಮರ್ತ್ಯ ಪಾತಾಳ - “ಸ್ವರ್ಗ ಮರ್ತ್ಯ ಪಾತಾಳ

ಈ ಮೂಂದ್ ಲೋಕತುಳ್ಳ - ಈ ಮೂರು ಲೋಕದಲ್ಲಿರುವ

ತೀರ್‌ತೆಲ್ಲಾ ಬಾರಿ’’ಂದ್ - ತೀರ್ಥಗಳೆಲ್ಲ ಬನ್ನಿ” ರೆಂದು

ಕೈಯೆಡ್‌ತ್ ಕಾಕಣೆ - ಕರವೆತ್ತಿ ಕರೆಯಲು

ತೀರ್‌ತ ಪೊಳೆಯೆಲ್ಲ - ತೀರ್ಥ ನದಿಗಳೆಲ್ಲ

ಅಲ್ಲಿ ಬಂದ್ ನಿಂದಿತ್ - ಅಲ್ಲಿ ಬಂದು ನಿಂತು

ಮುತ್ತಪ್ಪಣೆ ಕೇಟತ್ - “ಏನಪ್ಪಣೆ” ಎಂದವು

ಅದ್ ಕಂದ ಮುನಿಯೊ - ಅದನ್ನು ಕಂಡ ಮುನಿಯು

ಅಪ್ಪಣೆಯೊ ಮಾಡ್‌ಚಿ - ಅಪ್ಪಣೆಯನ್ನು ಕೊಟ್ಟನು

‘‘ಏಳ್ ಕೋಟಿ ತೀರ್‌ತ - “ಏಳು ಕೋಟಿ ತೀರ್ಥಗಳೇ

ಕಾಲೋರಾಂಡೆಕೋರಮ್ಮ - ವರ್ಷಕ್ಕೆ ಒಂದಾವರ್ತಿ

ನೇರ ಇಚ್ಚಕಾಪಕ್ಕ - ಇದೇ ವೇಳೆಗೆ ಸರಿಯಾಗಿ

ಶಂಭು ಶಿವ ದೇವಂಡ - ಶAಭು ಶಿವ ದೇವನ

ನೆತ್ತಿ ಕಣ್ಣ್ ಸೂರಿಯ - ನೆತ್ತಿ ಕಣ್ಣಿನ ಸೂರ್ಯನು

ತುಲಾ ರಾಶಿ ಕೆತ್ವಕ - ತುಲಾ ರಾಶಿ ಪ್ರವೇಶಿಸುವಾಗ

ನಿಂಗೆಲ್ಲಾರು ಬಂದಿತ್ - ನೀವೆಲ್ಲರೂ ಬಂದು

ಈ ಕುಂಡಿಕೆಲಿAಜಿತ್ - ಈ ಕುಂಡಿಕೆಯಲ್ಲಿದ್ದು

ಕುAಡಿಕೆರೊಳ್‌ಲಿAಜಿ - ಕುAಡಿಕೆಯೊಳಗಿನಿAದ

ಉಕ್ಕಿ ಉಕ್ಕಿ ಒಕ್ಕೊಂಡು - ಉಕ್ಕುತುಕ್ಕುತ್ತಾ ಹರಿಯಬೇಕು

ಅಂದಿಯ ದಿನತ್‌ಲ್ - ಅಂದಿನ ದಿನದಲ್ಲಿ

ಆರ್ ಇಲ್ಲಿ ಬಂದಿತ್ - ಯಾರು ಇಲ್ಲಿಗೆ ಬಂದು

ಮುAಙÂÂÂತ್ ಕುಳಿಪನೊ - ಮುಳುಗಿ ಜಳಕ ಮಾಡುವರೋ

ಆ ಚೆರ್ ಮನ್‌ಸನ್ - ಆ ನರ ಮನುಷ್ಯರ

ಏಳೇಳ್ ಜನ್‌ಮತ್ - ಏಳೇಳು ಜನುಮಗಳ

ಕೆಜ್ಜ ಪಾಪ ಪೋಂಡುಲ - ಮಾಡಿದ ಕರ್ಮ ನಾಶವಾಗಬೇಕು

ಮೇಲೆ ಪಾಪ ಪೊದ್ದಲ - ಮತ್ತೆ ಪಾಪ ಬಾಧಿಸಬಾರದು

ಪೊದ್ದ್ನ ಶನಿಯೆಲ್ಲ - ಹಿಡಿದ ಶನಿ ಗ್ರಹಚಾರವೆಲ್ಲ

ದೂರ ನೀಂಗಿ ನಿಕ್ಕಂಡು - ದೂರವಾಗಿ ನಿಲ್ಲಬೇಕು

ಮಕ್ಕಿಲ್ಲತ ಮಾಲೋಂಗ್ - ಮಕ್ಕಳಿಲ್ಲದ ಮಾನವರಿಗೆ

ಮಕ್ಕ ಫಲ ಕ್‌ಟ್ಟಂಡು; - ಸAತಾನ ಭಾಗ್ಯ ಸಿಗಬೇಕು

ಕಣ್ಣಿಲತ ಮಾಲೋಂಗ್ - ಕಣ್ಣಿಲ್ಲದ ಮಾನವರಿಗೆ

ಕಂಬಲ ಕೊಡ್‌ಕಂಡು; - ದೃಷ್ಟಿ ಭಾಗ್ಯ ಸಿಗಬೇಕು

ಪೊಣ್ಣಿಲ್ಲತ ಬಾಲಂಗ್ - ಅವಿವಾಹಿತ ಯುವಕರಿಗೆ

ಕನ್ನಿ ಬಟ್ಟ್ ಕ್‌ಟ್ಟಂಡು - ಕನ್ಯಾ ಭಾಗ್ಯ ಸಿಗಬೇಕು

ಕಾಲಿಲ್ಲತ ಕುಂಟAಗ್ - ಕಾಲಿಲ್ಲದ ಕುಂಟನಿಗೆ

ಕಾಲ್ ಫಲ ಕ್‌ಟ್ಟಂಡು; - ಕಾಲು ಫಲ ಸಿಗಬೇಕು

ಕೈಯಿಲ್ಲತ ಮೋಟಂಗ್ - ಕೈ ಇಲ್ಲದ ಮೋಟನಿಗೆ

ಕೈಯಿ ಫಲ ಕ್‌ಟ್ಟಂಡು; - ಕೈ ಫಲ ಸಿಗಬೇಕು

ಮನತ್ ನೆನತದ್ - ಮನಸಿನಲ್ಲಿ ನೆನೆದದ್ದು

ಅಕ್ಕ ಅಲ್ಲಿ ಕ್‌ಟ್ಟಂಡು; - ಆಗ ಅಲ್ಲಿ ಕಾಣಬೇಕು

ಅನ್ನತ ನೆಲೆಯಾಂಡು’’ - ಅAಥ ಕ್ಷೇತ್ರ ಇದಾಗಬೇಕು

ಎಂದಪ್ಪಣೆ ಮಾಡ್‌ನ - ಎಂದು ಅಪ್ಪಣೆ ಮಾಡಿದನು

ಅದ್ ಕೇಟ ತೀರ್‌ತ - ಅದನ್ನು ಆಲಿಸಿದ ತೀರ್ಥಗಳು

ತೀರ್‌ತ ಪೊಳೆಯೆಲ್ಲಾ - ತೀರ್ಥ ನದಿಗಳು

ಬಪ್ಪಕೊವ್ವಂದೆಣಿತ್ - ಬAದು ಇರುತ್ತೇವೆನ್ನುತ್ತಾ

ಅಪ್ಪಣೆ ಪಡಂದಿತ್ - ಅಪ್ಪಣೆಯನ್ನು ಪಡೆದು

ಕಣ್ಣ್ಕ್ ಮರೆಯಾಚಿ - ಕಣ್ಣಿನಿಂದ ಮರೆಯಾದವು

ಕೇಳೋ ಕೇಳೊ ಬೆಂದುವೆ, - ಕೇಳೋ, ಕೇಳು ನೆಂಟನೇ

ಆ ಕುಂಡಿಕೆರೊಳ್‌ಕ್ - ಆ ಕುಂಡಿಕೆಯೊಳಗೆ

ಕಾವೆೆರ‍್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ

ಪಾರುವಂಜಿ ಬುದ್ದಿತ್ - ಹಾರುತ್ತಾ ಬಿದ್ದು

ಪೊಣ್ಣ್ ರೂಪ ಬುಟ್ಟಿತ್ - ಸ್ತಿçà ರೂಪ ತ್ಯಜಿಸಿ

ನೀರಾಯಿ ಪರಿಂಜದೊ; - ನೀರಾಗಿ ಹರಿದಳು

ಆನ್‌ಗುಂಡ್ ಸಂಙÁದಿ - ಆದುದರಿAದ ಗೆಳೆಯನೇ

ಕಾವೆÉರ‍್ಯಮ್ಮೆ ದೇವಿರ - ಕಾವೇರಿಯಮ್ಮ ದೇವಿಯ

ತೀರ್‌ತ ಕುಳಿಚಕ್ಕ - ತೀರ್ಥಸ್ನಾನ ಮಾಡಿದರೆ

ಮನತ್ ನೆನತದ್ - ಮನದ ಇಷ್ಟಾರ್ಥಗಳು

ಅಕ್ಕ ಅಲ್ಲಿ ಕ್‌ಟ್ಟುವ - ಆಗ ಅಲ್ಲಿ ಸಿಗುತ್ತವೆ.

ಪಿಞÆ್ಞ ಕೇಳ್ ಸಂಙÁದಿ - ಇನ್ನಷ್ಟು ಕೇಳು ಗೆಳೆಯನೇ

ಸಂಙÁದಿ ಮನವೇಂಗಿ - ಸತಿ-ಪತಿಯರು ಮನವರಿತು

ಭಗಂಡAಡ ಕ್ಷೇತ್ರತ್ - ಭಗಂಡ ಕ್ಷೇತ್ರದಲ್ಲಿ

ಸಂಗಮತ್ ನೀರ್‌ಲ್ - ಸಂಗಮದ ನೀರಲ್ಲಿ

ಮುಂಞÂತ್ ಕುಳಿಚಕ್ಕ - ಮುಳುಗಿ ಸ್ನಾನ ಮಾಡಿದರೆ

ಕೆಜ್ಜ ಪಾಪ ಪೋಪದ್ - ಮಾಡಿದ ಪಾಪ ನಾಶವಾಗುವುದು

ಎನ್ನನೆಂದರಿವಿಯ ? - ಹೇಗೆಂದು ಅರಿತಿರುವೆಯಾ?

ಅಲ್ಲತೊಂದ್ ಅಲ್ಲಲ, - ಬೇರೆ ಏನೂ ತಾನಲ್ಲ

ಪೊಮ್ಮಾಲೆ ಕನಕೆಯು - ಹೊನ್ನ ಮಾಲೆಯಂಥ ಕನಕೆಯು

ದೇವ ಕನ್ನಿ ಸುಜ್ಯೋತಿ - ದೇವಕನ್ಯೆ ಸುಜ್ಯೋತಿಯು

ಆರೆಣ್ಣಿತರಿವಿಯ ? - ಯಾರೆಂದು ತಿಳಿಯುತ್ತೀಯಾ?

ಅಲ್ಲತಾರು ಅಲ್ಲಲ - ಬೇರೆ ಯಾರೂ ತಾವಲ್ಲ

ಪಾಡಿ ನೋಟಿಕೊಂಡಲ್ಲಿ-ಹಾಡಿ ತಿಳಿದುಕೊಂಡಾಗ

ಪೊಮ್ಮಾಲೆ ಕನಕೆಯು-ಹೊನ್ನಮಾಲೆ ಕನಕೆಯು

(ಮುಂದುವರಿಯುವುದು)

ಕನ್ನಡಾನುವಾದ : - ನಾಗೇಶ್ ಕಾಲೂರು.