ಮಾನ್ಯರೆ, ನಾನು ಇತ್ತೀಚೆಗಷ್ಟೇ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದ ವಿವಾಹ ಕಾರ್ಯದಲ್ಲಿ ಭಾಗವಹಿಸಿದ್ದೆ. ಕಾರ್ಯಕ್ರಮ ಮುಗಿಸಿ ಪೊನ್ನಂಪೇಟೆಯ ನನ್ನ ನಿವಾಸಕ್ಕೆ ತೆರಳುತ್ತಿದ್ದಾಗ, ಕೈಬೆರಳಿನಲ್ಲಿದ್ದ ನೂತನ 6 ಗ್ರಾಂ ತೂಕದ ಉಂಗುರ ನಾಪತ್ತೆಯಾಗಿರುವದು ನನಗೆ ಅರಿವಾಯಿತು. ಮರುದಿನವೇ ‘ಶಕ್ತಿ’ಯ ಕಳೆದು ಹೋಗಿದೆ ವಿಭಾಗಕ್ಕೆ ಉಚಿತ ಜಾಹೀರಾತು ನೀಡಿದೆ. ಜಾಹೀರಾತು ಗಮನಿಸಿದ ಮೇಕೇರಿಯ ರಮೇಶ್ ಎಂಬವರು ನನಗೆ ಕರೆ ಮಾಡಿ, ಉಂಗುರು ದೊರೆತಿರುವ ಬಗ್ಗೆ ತಿಳಿಸಿದರು. ಅವರ ಅಳಿಯ ರಾಜೇಶ್ ಅವರಿಗೆ ಅಮ್ಮತ್ತಿಯ ಮದುವೆ ಮನೆಯಲ್ಲಿ ಉಂಗುರ ದೊರೆತಿದ್ದು, ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು ಗಮನಿಸಿ ಉಂಗುರದ ಮಾಲೀಕರಾದ ನನಗೆ ಉಂಗುರವನ್ನು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಪ್ರಮಾಣಿಕತೆಗೆ ಧನ್ಯವಾದಗಳು. ಸಾರ್ವಜನಿಕರು ತಮ್ಮ ವಸ್ತಗಳು ಕಳೆದುಹೋದಲ್ಲಿ ‘ಶಕ್ತಿ’ಯ ಉಚಿತ ಜಾಹೀರಾತು ವಿಭಾಗದಲ್ಲಿ ಪ್ರಕಟಣೆ ನೀಡಬೇಕಾಗಿ ನಾನು ಸಲಹಿಸುತ್ತೇನೆ.

- ಸಿ.ಎ. ಪೂಣಚ್ಚ, ಪೊನ್ನಂಪೇಟೆ