ಮಾನ್ಯರೆ, ಪೊನ್ನಂಪೇಟೆ ಪಟ್ಟಣವು ಪೊನ್ನಂಪೇಟೆ ತಾಲೂಕು ಕೇಂದ್ರ ಕಾರ್ಯಸ್ಥಾನವಾಗಿದ್ದರೂ ಪೊನ್ನಂಪೇಟೆಯಲ್ಲಿ ಒಂದು ವ್ಯವಸ್ಥಿತ ಖಾಯಂ ಕೊರೊನಾ ಲಸಿಕಾ ಕೇಂದ್ರ ಇರುವುದಿಲ್ಲ. ಇದರಿಂದ ಪೊನ್ನಂಪೇಟೆ ಹೋಬಳಿ ಸುತ್ತಮುತ್ತಲಿರುವ ಹಲವಾರು ಗ್ರಾಮಸ್ಥರು ಮತ್ತು ಕೂಲಿ ಕಾರ್ಮಿಕರಿಗೆ ದೂರದ ಸ್ಥಳಗಳಾದ ಗೋಣಿಕೊಪ್ಪಲು ಇತ್ಯಾದಿ ದೂರದ ಸ್ಥಳಗಳಿಗೆ ಹೋಗಿ ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಗುತ್ತಿರುವುದಿಲ್ಲ. ಅದರಲ್ಲೂ ನಮ್ಮಂತ ಹಿರಿಯ ಮತ್ತು ಅತಿ ಹಿರಿಯನಾಗರಿಕ ವಯೋವೃದ್ಧರು ಮತ್ತು ಹೆಂಗಸರು ಮತ್ತು ಅಂಗವಿಕಲರಿಗೆ ಹತ್ತಿರದ ಪೇಟೆಯಲ್ಲಿ ಕೊರೊನಾ ಲಸಿಕಾ ಕೇಂದ್ರವಿಲ್ಲದೆ ತೊಂದರೆ ಅನುಭವಿಸುತ್ತಿರುತ್ತಾರೆ. ಹಾಗಾಗಿ ಪೊನ್ನಂಪೇಟೆಯಲ್ಲಿ ಕೊರೊನಾ ಲಸಿಕಾ ಕೇಂದ್ರ ಆರಂಭಿಸಬೇಕಾಗಿ ಈ ಮೂಲಕ ಜಿಲ್ಲಾಡಳಿತವನ್ನು ಕೋರುತ್ತೇವೆ.

- ಕಿಗ್ಗಟ್ಟ್‍ನಾಡ್ ಹಿರಿಯ ನಾಗರಿಕ ವೇದಿಕೆ, ಪೊನ್ನಂಪೇಟೆ.