ಮಡಿಕೇರಿ, ಮೇ ೮: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಿರುವುದರಿಂದ ಕೇರಳ ಸರಕಾರ ಎಚ್ಚೆತ್ತುಕೊಂಡಿದ್ದು, ಕೊಡಗು ಕೇರಳ ಗಡಿಯಲ್ಲಿ ಬಿಗಿ ಕ್ರಮ ಕೈಗೊಂಡಿದೆ. ಕೋವಿಡ್ ನೆಗೆÀಟಿವ್ ವರದಿ ಇಲ್ಲದೆ ಕೇರಳಕ್ಕೆ ತೆರಳಲು ನಿರ್ಬಂಧ ವಿಧಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೋವಿಡ್-೧೯ ಸೋಂಕಿನ ಎರಡನೇ ಅಲೆ ಭಾರತಕ್ಕೆ ಕಾಲಿಟ್ಟಾಗ ಕೊಡಗಿನ ನೆರೆಯ ರಾಜ್ಯವಾದ ಕೇರಳದಲ್ಲಿ ಕೋವಿಡ್ ಎರಡನೇ ಅಲೆಯು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಲಾರಂಭಿಸಿತು. ಈ ಹರಡುವಿಕೆ ಕರ್ನಾಟಕವನ್ನು ಬಾಧಿಸದಿರಲಿ ಎಂದು ಕರ್ನಾಟಕ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ರಚಿಸಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರು ಕಡ್ಡಾಯವಾಗಿ ನೆಗೆಟಿವ್ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶದಂತೆ ಕೊಡಗು ಜಿಲ್ಲಾಡಳಿತ ಕೊಡಗು-ಕೇರಳ ಚೆಕ್ ಪೋಸ್ಟ್ಗಳಲ್ಲಿ ಅನೇಕ ಮುಂಜಾಗ್ರತ ವ್ಯವಸ್ಥೆ ಕೈಗೊಂಡಿತ್ತು. ಆದರೆ, ಇದೀಗ ಕರ್ನಾಟÀಕದಲ್ಲಿ ಪ್ರತಿನಿತ್ಯ ಸುಮಾರು ೪೦-೪೫ ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರಕಾರ ಕರ್ನಾಟಕದ ಗಡಿಯಿಂದ ಕೇರಳಕ್ಕೆ ಬರುವ ಪ್ರಯಾಣಿಕರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ.
ಕರಿಕೆ, ಪಾಣತ್ತೂರು, ಮಾಕುಟ್ಟ, ಕುಟ್ಟ, ಗಡಿಗಳನ್ನು ಕೇರಳ ಸರಕಾರ ಬಿಗಿ ಭದ್ರತೆಯೊಂದಿಗೆ ಸೀಲ್ ಮಾಡಿದೆೆ. ಕರಿಕೆ-ಪಾಣತ್ತೂರು ಗಡಿಯಲ್ಲಿ ಮಡಿಕೇರಿ, ಮೇ ೮: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಿರುವುದರಿಂದ ಕೇರಳ ಸರಕಾರ ಎಚ್ಚೆತ್ತುಕೊಂಡಿದ್ದು, ಕೊಡಗು ಕೇರಳ ಗಡಿಯಲ್ಲಿ ಬಿಗಿ ಕ್ರಮ ಕೈಗೊಂಡಿದೆ. ಕೋವಿಡ್ ನೆಗೆÀಟಿವ್ ವರದಿ ಇಲ್ಲದೆ ಕೇರಳಕ್ಕೆ ತೆರಳಲು ನಿರ್ಬಂಧ ವಿಧಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೋವಿಡ್-೧೯ ಸೋಂಕಿನ ಎರಡನೇ ಅಲೆ ಭಾರತಕ್ಕೆ ಕಾಲಿಟ್ಟಾಗ ಕೊಡಗಿನ ನೆರೆಯ ರಾಜ್ಯವಾದ ಕೇರಳದಲ್ಲಿ ಕೋವಿಡ್ ಎರಡನೇ ಅಲೆಯು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಲಾರಂಭಿಸಿತು. ಈ ಹರಡುವಿಕೆ ಕರ್ನಾಟಕವನ್ನು ಬಾಧಿಸದಿರಲಿ ಎಂದು ಕರ್ನಾಟಕ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ರಚಿಸಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರು ಕಡ್ಡಾಯವಾಗಿ ನೆಗೆಟಿವ್ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶದಂತೆ ಕೊಡಗು ಜಿಲ್ಲಾಡಳಿತ ಕೊಡಗು-ಕೇರಳ ಚೆಕ್ ಪೋಸ್ಟ್ಗಳಲ್ಲಿ ಅನೇಕ ಮುಂಜಾಗ್ರತ ವ್ಯವಸ್ಥೆ ಕೈಗೊಂಡಿತ್ತು. ಆದರೆ, ಇದೀಗ ಕರ್ನಾಟÀಕದಲ್ಲಿ ಪ್ರತಿನಿತ್ಯ ಸುಮಾರು ೪೦-೪೫ ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರಕಾರ ಕರ್ನಾಟಕದ ಗಡಿಯಿಂದ ಕೇರಳಕ್ಕೆ ಬರುವ ಪ್ರಯಾಣಿಕರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ.
ಕರಿಕೆ, ಪಾಣತ್ತೂರು, ಮಾಕುಟ್ಟ, ಕುಟ್ಟ, ಗಡಿಗಳನ್ನು ಕೇರಳ ಸರಕಾರ ಬಿಗಿ ಭದ್ರತೆಯೊಂದಿಗೆ ಸೀಲ್ ಮಾಡಿದೆÉ. ಕರಿಕೆ-ಪಾಣತ್ತೂರು ಗಡಿಯಲ್ಲಿ ನಿವಾಸಿ ಮಧು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಮಡಿಕೇರಿ ನಿವಾಸಿಯಾದ ಮೊಹಮ್ಮದ್ ಎಂಬವರು ಕೇರಳ ರಾಜ್ಯಕ್ಕೆ ಕೆಲಸದ ನಿಮಿತ್ತ ತೆರಳುತ್ತಿದ್ದರಾದರೂ, ಇದೀಗ ಕೇರಳ ರಾಜ್ಯದ ವೆಬ್ಸೈಟ್ನಲ್ಲಿ ಹೆಸರು ನೊಂದಾಯಿಸಿ, ನೆಗೆಟಿವ್ ಆರ್.ಟಿ.ಪಿ.ಸಿ.ಆರ್. ರಿಪೋರ್ಟ್ನ ಪ್ರತಿ ಲಗತ್ತಿಸಿದರೆ ಮಾತ್ರ ಕೇರಳ ರಾಜ್ಯಕ್ಕೆ ತೆರಳಲು ಪಾಸ್ ದೊರೆಯುತ್ತದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.
ಕುಟ್ಟ-ಮಾಕುಟ್ಟದಲ್ಲೂ ಕ್ರಮ:
ಕೇರಳ ರಾಜ್ಯದ ಆರೋಗ್ಯ ಇಲಾಖೆ ಕೊಡಗು ಕೇರಳ ಗಡಿ ಭಾಗವಾದ ಮಾಕುಟ್ಟ ಹಾಗೂ ಕುಟ್ಟ ಗೇಟ್ ತಲಪುವ ಮೊದಲೇ
(ಮೊದಲ ಪುಟದಿಂದ) ಕೇರಳದ ಗಡಿ ಗೇಟ್ಗಳನ್ನು ನಿರ್ಮಿಸಿ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸುತ್ತಿದ್ದು ೭೨ ಗಂಟೆ ಅವಧಿಯೊಳಗಿನ ಕೊರೊನಾ ನೆಗೆಟಿವ್ ದೃಢೀಕರಣ ಪತ್ರ ಹೊಂದಿರದವರನ್ನು ಗೇಟ್ನಲ್ಲಿರುವ ಕೇರಳದ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳು ಹಿಂದಕ್ಕೆ ಕಳುಹಿಸುತ್ತಿದ್ದಾರೆ.
ಈ ಹಿಂದೆ ಕರ್ನಾಟಕದಿಂದ ಕೇರಳಕ್ಕೆ ಹೋಗಿ ಬರುವ ವಾಹನಗಳನ್ನು ಕೊಡಗು ಕೇರಳ ಗಡಿಭಾಗವಾದ ಮಾಕುಟ್ಟ ಹಾಗೂ ಕುಟ್ಟ ಚೆಕ್ಪೋಸ್ಟ್ಗಳಲ್ಲಿ ಕೊಡಗಿನ ಆರೋಗ್ಯ ಇಲಾಖೆ ಇತರ ಇಲಾಖೆಗಳ ಸಿಬ್ಬಂದಿಗಳು ತೀವ್ರ ತಪಾಸಣೆಗೊಳಪಡಿಸುತ್ತಿದ್ದರು. ಆದರೆ ಈಗ ತಪಾಸಣೆ ಕೇರಳ ಸರಕಾರದಿಂದ ತೀವ್ರಗೊಂಡಿದೆ. ಕೇರಳದಲ್ಲಿ ಇಂದಿನಿAದ ಪೂರ್ಣ ಲಾಕ್ಡೌನ್ ಘೋಷಿಸಿದ್ದರಿಂದ ಕೊರೊನಾ ಸೋಂಕು ತಡೆಗೆ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ. ಕೇರಳ ರಾಜ್ಯವು ಅಂತರ ರಾಜ್ಯ ಗಡಿಗಳಲ್ಲಿ ವಾಹನಗಳ ಚಾಲಕರ ತಪಾಸಣೆ ತೀವ್ರಗೊಳಿಸಿದ್ದರಿಂದ ಸರಕು ಸಾಗಾಣಿಕೆಯ ಸಂಚಾರಕ್ಕೂ ಧಕ್ಕೆ ಉಂಟಾಗಿದೆ.
ಕೊಡಗಿನ ಮಾಕುಟ್ಟ ಚೆಕ್ಪೋಸ್ಟ್ನ ಮೂಲಕ ಇಂದು ಬೆಳಿಗ್ಗೆ ಕೇರಳಕ್ಕೆ ತೆರಳಿದ ಲಾರಿ ಹಾಗೂ ಮಿನಿಲಾರಿ ಸೇರಿದಂತೆ ೭೬ ಸರಕು ವಾಹನಗಳು ಅಪರಾಹ್ನ ೨ ಗಂಟೆಯ ವೇಳೆಗೆ ಕೊಡಗನ್ನು ಪ್ರವೇಶಿಸಲು ಮಾಕುಟ್ಟ ಗೇಟ್ಗೆ ಬಂದಿವೆ. ಇದೇ ರೀತಿಯಲ್ಲಿ ಕುಟ್ಟ ಚೆಕ್ಪೋಸ್ಟ್ಗೂ ಕೇರಳದಿಂದ ಹಿಂದಿರುಗಿದ ಸುಮಾರು ೪೮ ಸರಕು ವಾಹನಗಳು ಕೊಡಗನ್ನು ಅಪರಾಹ್ನ ೩ ಗಂಟೆ ವೇಳೆಗೆ ಪ್ರವೇಶಿಸಿವೆ. ಕೊಡಗು ಕೇರಳ ಎರಡು ಭಾಗದ ಚೆಕ್ಪೋಸ್ಟ್ಗಳಲ್ಲಿ ಕೊರೊನಾ ಸೋಂಕಿನ ತಪಾಸಣೆ ತೀವ್ರಗೊಂಡಿರುವುದರಿAದ ಸರಕು ವಾಹನಗಳ ಸಂಖ್ಯೆಯೂ ಇಂದಿನಿAದ ಕಡಿಮೆಯಾಗಿದೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಚೆಕ್ಪೋಸ್ಟ್ಗಳಲ್ಲಿಯೂ ತಪಾಸಣೆ ತೀವ್ರಗೊಳಿಸಿರುವುದಾಗಿ ತಾಲೂಕು ತಹಶೀಲ್ದಾರ್ ಯೋಗಾನಂದ್ ತಿಳಿಸಿದ್ದಾರೆ.
ಕೊಡಗು ಕೇರಳ ಅಂತರರಾಜ್ಯ ಗಡಿ ಮಾರ್ಗದಲ್ಲಿ ನಿನ್ನೆಯ ತನಕ ಮಾಕುಟ್ಟ ಹಾಗೂ ಕುಟ್ಟ ಗಡಿಭಾಗದಲ್ಲಿ ಸುಮಾರು ೧೮೦ ರಿಂದ ೨೨೦ ರ ತನಕ ಸರಕು ವಾಹನಗಳು ಕೇರಳ ರಾಜ್ಯವನ್ನು ಪ್ರವೇಶಿಸಿ ಸರಕನ್ನು ಇಳಿಸಿ ಹಿಂತಿರುಗುತ್ತಿದ್ದವು. ಕೋವಿಡ್ ನೆಗೆಟಿವ್ ದೃಢೀಕರಣ ಪತ್ರದ ಆಧಾರದ ಮೇಲೆ ಎಲ್ಲಾ ವಾಹನಗಳಿಗೂ ಕೊಡಗನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತಿತ್ತು. ಈ ತಪಾಸಣೆ ಇದೇ ರೀತಿ ಮುಂದುವರೆಯುವುದಾಗಿ ಮಾಕುಟ್ಟ ಚೆಕ್ಪೋಸ್ಟ್ಗೆ ಭೇಟಿ ನೀಡಿ ತಪಾಸಣೆ ನಡೆಸಿದ ತಹಶೀಲ್ದಾರ್ ಯೋಗಾನಂದ್ ತಿಳಿಸಿದರು.
ಮಾಕುಟ್ಟ ಚೆಕ್ಪೋಸ್ಟ್ ತಪಾಸಣೆ ಘಟಕದಲ್ಲಿ ಕಂದಾಯ, ಆರೋಗ್ಯ, ಪೊಲೀಸ್, ಹಾಗೂ ಅರಣ್ಯ ಇಲಾಖೆ ಸೇರಿದಂತೆ ಸುಮಾರು ೧೨ ಮಂದಿ ಪ್ರತಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕುಟ್ಟ ಚೆಕ್ಪೋಸ್ಟ್ನಲ್ಲಿ ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳ ಸಿಬ್ಬಂದಿಗಳು ಮಾತ್ರ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಚೆಕ್ಪೋಸ್ಟ್ಗಳಲ್ಲಿಯೂ ಸಿ.ಸಿ.ಕ್ಯಾಮೆರಾವನ್ನು ಅಳವಡಿಸಿರುವುದರಿಂದ ತಪಾಸಣೆಗೆ ಸಹಕಾರಿಯಾಗಿದೆ ಎಂದು ಯೋಗಾನಂದ ತಿಳಿಸಿದ್ದಾರೆ.
ವರದಿ : ಸುಧೀರ್, ಡಿ.ಎಂ. ರಾಜ್ಕುಮಾರ್