ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗುತ್ತಿರುವುದನ್ನು ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶವೊಂದನ್ನು ಹೊರಡಿಸಿದ್ದು, ವಿವರ ಇಂತಿದೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗುತ್ತ್ತಿದೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಬಹುತೇಕ ಪ್ರಕರಣಗಳು ಇತರ ಜಿಲ್ಲೆಗಳ ಸಂಚಾರದ ಹಿನ್ನೆಲೆ ಪತ್ತೆಯಾಗಿದ್ದು, ಇನ್ನುಳಿದಂತೆ ಇರುವ ಪ್ರಕರಣಗಳು ಇವರುಗಳ ಪ್ರಾಥಮಿಕ ಸಂಪರ್ಕದಿAದಾಗಿದೆ.
ಹೋA ಕ್ವಾರಂಟೈನ್ ಕಡ್ಡಾಯ- ಜಿಲ್ಲಾಧಿಕಾರಿ ಆದೇಶ
(ಮೊದಲ ಪುಟದಿಂದ) ಕೊಡಗು ಜಿಲ್ಲೆಗೆ ಇತರ ಪ್ರದೇಶಗಳಿಂದ ಹಲವು ಮಂದಿ ವಿವಿಧ ಕಾರಣಗಳ ನಿಮಿತ್ತ ಆಗಮಿಸುತ್ತಿರುತ್ತಾರೆ. ಈ ರೀತಿಯಾಗಿ ಆಗಮಿಸುವವರಲ್ಲಿ ಹಲವರು ಕೋವಿಡ್ ಸೋಂಕಿತರಾಗಿರಬಹುದಾದ ಸಾಧ್ಯತೆಗಳಿರುತ್ತದೆ. ಈ ರೀತಿಯಾಗಿ ಆಗಮಿಸಿದವರು ಮುಂಜಾಗೃತಾ ಕ್ರಮವಾಗಿ ಕಡ್ಡಾಯವಾಗಿ ೧೪ ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇದ್ದಲ್ಲಿ ಸೋಂಕು ಹರಡುವಕೆಯನ್ನು ನಿಯಂತ್ರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವವರ ಆಗಮನದ ಉದ್ದೇಶ, ದಾಖಲಾತಿಗಳ ಪರಿಶೀಲನೆ, ವಿವರಗಳನ್ನು ರಿಜಿಸ್ಟರ್ನಲ್ಲಿ ದಾಖಲಿಸುವ ಕಾರ್ಯಕ್ಕಾಗಿ (ಚೆಕ್ಪೋಸ್ಟ್ ಕರ್ತವ್ಯ) ಆರಕ್ಷಕ, ಕಂದಾಯ ಅಬಕಾರಿ, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸಂಬAಧಪಟ್ಟ ಕಾರ್ಯವ್ಯಾಪ್ತಿಯ ಇಲಾಖಾಧಿಕಾರಿಗಳು ಪಾಳಿ ವ್ಯವಸ್ಥೆಯಲ್ಲಿ ೨೪x೭ ಕರ್ತವ್ಯ ನಿರ್ವಹಿಸುವ ಬಗ್ಗೆ ನಿಯೋಜಿಸುವುದು. ಈ ಬಗ್ಗೆ ಸಂಬAಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದು ತಾಲೂಕು ತಹಶೀಲ್ದಾರ್ ತಂಡವನ್ನು ರಚಿಸುವುದು.
ಕೋವಿಡ್ ಸೋಂಕು ಹೆಚ್ಚಿರುವ ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವವರನ್ನು ಜಿಲ್ಲೆಯ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಆಗಮನದ ಉದ್ದೇಶ, ದಾಖಲಾತಿಗಳ ವಿವರವಾದ ಪರಿಶೀಲನೆ ನಡೆಸಿ, ಅವರುಗಳ ಮೊಬೈಲ್ ಸಂಖ್ಯೆ ಪಡೆದು, ತುರ್ತು ಮತ್ತು ವೈದ್ಯಕೀಯ ಹಿನ್ನೆಲೆಯ ಹೊರತಾಗಿದ್ದಲ್ಲಿ ಅವರುಗಳು ತಂಗುವ ಸ್ಥಳದ ವಿಳಾಸ ಇತ್ಯಾದಿ ಪೂರ್ಣ ವಿವರಗಳನ್ನು ಪಡೆದು, ೧೪ ದಿನಗಳ ಕಾಲದ ಗೃಹ ಸಂಪರ್ಕ ತಡೆ ಮೊಹರನ್ನು ಹಾಕಬೇಕು.
ಈ ರೀತಿಯಾಗಿ ಜಿಲ್ಲೆಗೆ ಆಗಮಿಸಿದವರು ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರುವ ಬಗ್ಗೆ ಸಂಬAಧಪಟ್ಟ ಕಾರ್ಯವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳು, ಆರಕ್ಷಕ, ಆರೋಗ್ಯ, ಕಂದಾಯ ಹಾಗೂ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚಿತವಾಗಿರುವ ಟಾಸ್ಕ್ ಫೋರ್ಸ್ ಸಮಿತಿಯು ಕ್ರಮವಹಿಸಬೇಕು ಹಾಗೂ ಇವರುಗಳು ನಿಗದಿತ ದಿನದವರೆಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರುವ ಬಗ್ಗೆ ರ್ಯಾಂಡಮ್ ಆಗಿ ಪರಿಶೀಲಿಸಬೇಕು.
ಕೋವಿಡ್ ಕರ್ತವ್ಯಕ್ಕಾಗಿ ಹೋಬಳಿವಾರು ಮತ್ತು ನಗರ, ಪಟ್ಟಣ ವ್ಯಾಪ್ತಿಗೆ ನಿಯೋಜಿತರಾದ ನೋಡಲ್ ಅಧಿಕಾರಿಯವರು ಅವರ ಕಾರ್ಯವ್ಯಾಪ್ತಿಯಲ್ಲಿ ಆಗಮಿತರಿಗೆ ಮೊಹರು ಹಚ್ಚಿರುವ ಬಗ್ಗೆ ಮತ್ತು ಅವರುಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರುವ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.