ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು, ಕೇರಳ ಸರಕಾರದ ಸೂಚನೆಯಂತೆ ಅಲ್ಲಿನ ಆಡಳಿತ ಕೊಡಗು-ಕೇರಳ ಗಡಿಯಲ್ಲಿ ಅಗತ್ಯ ಕ್ರಮ ಕೈಗೊಂಡಿರಬಹುದು. ಆದರೆ, ಕರ್ನಾಟಕ ಸರಕಾರದ ಆದೇಶದಂತೆ ಕೊಡಗು-ಕೇರಳ ಗಡಿಯಲ್ಲಿ ಕೊಡಗು ಜಿಲ್ಲಾಡಳಿತ ಕೊಡಗಿಗೆ ಕೇರಳದಿಂದ ಬರುವವರ ಬಗ್ಗೆ ಈಗಾಗಲೇ ಅನುಸರಿಸುತ್ತಿರುವ ಕ್ರಮಗಳನ್ನು ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.