ಮಾನ್ಯರೆ, ಕೊಡಗು ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಗ್ರಾಮಾಂತರ ಪ್ರದೇಶದಲ್ಲಿ ಹಬ್ಬುತ್ತಿರುವ ಹಿನ್ನಲೆ ಜಿಲ್ಲೆಯ ಯುವಕ ಸಂಘ, ಯುವತಿ ಮಂಡಳಿ ಹಾಗೂ ಮಹಿಳಾ ಸಮಾಜದ ಸದಸ್ಯರು ತಮ್ಮ ಗ್ರಾಮದಲ್ಲಿ ಎಚ್ಚರದಲ್ಲಿ ಇರಬೇಕಾಗಿದೆ. ಗ್ರಾಮದಲ್ಲಿ ವಿವಿಧ ಊರುಗಳಿಂದ ಆಗಮಿಸಿದ ಜನರ ಮೇಲೆ ನಿಗಾ, ಮಾಸ್ಕ್, ಸಾನಿಟೈಸರ್, ಸಾಮಾಜಿಕ ಅಂತರ ಕಾಯುವಂತೆ ತಿಳುವಳಿಕೆ ನೀಡಿ ರೋಗ ಹರಡುವಿಕೆಯನ್ನು ತಡೆಗಟ್ಟಲು ಸಹಕಾರ ಮಾಡಿ. ಆದಷ್ಟು ಅಂತರ ಕಾಪಾಡಿಕೊಂಡು ತಮ್ಮ ದಿನನಿತ್ಯ ಕೆಲಸ ಕಾರ್ಯ ಹಾಗೂ ಜೀವನ ನಡೆಸಲು ಜಿಲ್ಲೆಯ ಯುವಕ ಸಂಘ, ಯುವತಿ ಮಂಡಳಿ, ಮಹಿಳಾ ಸಮಾಜದ ಸದಸ್ಯರು ಜಾಗೃತವಾಗಿರುವಂತೆ ಕೋರಿಕೆ.

- ಪಿ.ಪಿ. ಸುಕುಮಾರ್, ಅಧ್ಯಕ್ಷರು, ಕೊಡಗು ಜಿಲ್ಲಾ ಯುವ ಒಕ್ಕೂಟ.