ಮಡಿಕೇರಿ, ಮೇ ೫ : ಕರ್ನಾಟಕ ಮುಸ್ಲಿಂ ಜಮಾತ್ ಕೊಡಗು ಜಿಲ್ಲಾ ಸಮಿತಿ, ಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಸಹಯೋಗದಲ್ಲಿ ಕೋವಿಡ್ ಸಂದಿಗ್ಧ ಪರಿಸ್ಥಿಯಲ್ಲಿ "ಸಹಾಯ್" ಎಂಬ ತುರ್ತುಸೇವಾ ಘಟಕವನ್ನು ಪ್ರಾರಂಭಿಸಲಾಗಿದೆ. “ಸಹಾಯ್” ಘಟಕಗಳು ಕೊಡಗು ಜಿಲ್ಲೆಯ ೫ ತಾಲೂಕುಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಕೋವಿಡ್ ಸಂದರ್ಭದಲ್ಲಿ ಅಗತ್ಯ ಸೇವೆ ನೀಡಲು ತಂಡ ಸನ್ನದ್ಧವಾಗಿರಲಿದೆ. ಅವಶ್ಯಕತೆ ಇರುವವರು ಆಯಾ ತಾಲೂಕಿನ ಸನ್ನದ್ಧ ತಂಡವನ್ನು ಸಂಪರ್ಕಿಸಬಹುದು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅಗತ್ಯವಿದ್ದಲ್ಲಿ ಕೋವಿಡ್ ಸೆಂಟರ್ ವ್ಯವಸ್ಥೆ ಮಾಡಲು ಕಾನೂನು ರೀತಿಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಂಡದ ಪ್ರಮುಖರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲ್ಲಿ ಲತೀಫ್ ಸುಂಟಿಕೊಪ್ಪ, ಕೊಡಗು ಜಮಾಯತುಲ್ ಉಲೇಮಾ ಕಾರ್ಯದರ್ಶಿ ಅಶ್ರಫ್ ಅಹಸಾನಿ ಉಸ್ತಾದ್, ಕೊಡಗು ಜಿಲ್ಲಾ ಮುಸ್ಲಿಂ ಜಮಾತ್ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಸಂಘಟನಾ ಕಾರ್ಯದರ್ಶಿ ಉಮರ್ ಸಖಾಫಿ ಎಡಪಾಲ, ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಹಮೀದ್ ಹೊದ್ದೂರು, ಮೊದಲಾದವರು ಹಾಜರಿದ್ದರು. “ಸಹಾಯ್” ಸೇವೆಗಾಗಿ ೯೪೪೮೫೦೫೦೧೧, ೮೬೧೮೯೨೫೯೪೫ (ಲತೀಫ್ ಸುಂಟಿಕೊಪ್ಪ), ೯೪೪೮೭೯೪೮೮೨ (ಮೊಹಮ್ಮದ್ ಹಾಜಿ) ೯೬೧೧೯೦೩೩೨೬ (ಹಮೀದ್ ಹೊದ್ದೂರು), ೯೭೪೧೯೦೧೧೮೨ (ಉಮ್ಮರ್ ಸಖಾಫಿ ಎಡಪಾಲ) ಇವÀರನ್ನು ಸಂಪರ್ಕಿಸಬಹುದು.