ಸೋಮವಾರಪೇಟೆ, ಮೇ ೫: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದ್ದು, ಈಗಾಗಲೇ ಹಲವಷ್ಟು ಕುಟುಂಬಗಳು ಸೀಲ್‌ಡೌನ್‌ಗೆ ಒಳಗಾಗಿವೆ. ಇದರೊಂದಿಗೆ ೨ ದಿನಗಳು ಬೆಳಿಗ್ಗೆ ೬ ರಿಂದ ೧೨ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತ, ಉಳಿದ ದಿನಗಳಂದು ಸಂಪೂರ್ಣ ಲಾಕ್‌ಡೌನ್‌ಗೆ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಸಂಘ ಸಂಸ್ಥೆಗಳು ಬಡ ಮಂದಿಗೆ ಉಚಿತ ಸೇವೆ ಒದಗಿಸಲು ಮುಂದಾಗಿವೆ.

ಬಿಜೆಪಿಯಿAದ: ಕೋವಿಡ್ ಸೋಂಕಿನಿAದ ಬಳಲುತ್ತಿದ್ದು, ಆಸ್ಪತ್ರೆಗೆ ತೆರಳಲು ವಾಹನದ ಸಮಸ್ಯೆ ಎದುರಿಸುತ್ತಿದ್ದರೆ ಅಂತಹವರಿಗೆ ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ವತಿಯಿಂದ ಉಚಿತ ವಾಹನದ ಸೌಲಭ್ಯ ಕಲ್ಪಿಸಲಾಗಿದೆ.

ಅಗತ್ಯವಿರುವವರು ದಿವಾಕರ್ ಹಳ್ಳದಿಣ್ಣೆ (ಮೊ: ೭೨೫೯೨೭೫೨೧೯) ಮನುಕುಮಾರ್ ರೈ (ಮೊ: ೯೪೮೩೦೨೦೬೫೫) ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ವೈಐಎಫ್‌ಎ: ಕೊರೊನಾ ಸೋಂಕಿಗೆ ಒಳಗಾಗಿ ಮನೆಯನ್ನು ಸೀಲ್‌ಡೌನ್ ಮಾಡಿದ್ದರೆ ಅಂತಹವರಿಗೆ ಅಗತ್ಯವಾಗಿ ಬೇಕಾದ ದಿನಸಿ, ತರಕಾರಿ, ಔಷಧಿಗಳನ್ನು ಮನೆಗಳಿಗೆ ತಲುಪಿಸಲು ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಿದ್ಧವಾಗಿದೆ.

ಸೀಲ್‌ಡೌನ್ ಆಗಿರುವ ಮನೆಗಳ ಮಂದಿ ಹೊರಭಾಗದಲ್ಲಿ ಅಗತ್ಯ ವಸ್ತುಗಳಿಗಾಗಿ ಓಡಾಡಿದರೆ ಇತರರಿಗೂ ಸೋಂಕು ಹರಡುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಐಎಫ್‌ಎ ವತಿಯಿಂದ ಸಾಮಾಗ್ರಿಗಳನ್ನು ಪೂರೈಕೆ ಮಾಡಲು ಹೆಲ್ಪ್ಲೈನ್ ತೆರೆಯಲಾಗಿದ್ದು, ಅವಶ್ಯವಿರುವವರು ಎಲ್. ಶ್ರೀನಿಧಿ (೯೦೦೮೮೬೮೮೪೫) ಮೋಹಿತ್ ತಿಮ್ಮಯ್ಯ (ಮೊ:೯೪೪೮೩೦೫೨೪೫) ಅವರುಗಳನ್ನು ಸಂಪರ್ಕಿಸಬಹುದಾಗಿದೆ.

ಧರ್ಮಸ್ಥಳ ಸಂಘದಿAದ: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಂದಿ ಆಸ್ಪತ್ರೆಗೆ ತೆರಳಲು ಅಸಾಧ್ಯವಾಗಿದ್ದರೆ ಅಂತಹವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ.

ಸೌಲಭ್ಯ ಬೇಕಿದ್ದವರು ಯೋಜನಾಧಿಕಾರಿ ವೈ.ಪ್ರಕಾಶ್ (ಮೊ:೯೪೪೯೩೮೭೧೭೭) ದೀಪಕ್ (೯೦೦೮೬೩೯೬೫೯) ಅವರುಗಳನ್ನು ಸಂಪರ್ಕಿಸಬಹುದಾಗಿದೆ.