ಮಡಿಕೇರಿ, ಮೇ ೩: ವ್ಯಾಪಾರೋದ್ಯಮಿಗಳು ಪಾವತಿಸ ಬೇಕಾಗಿರುವ ಜಿಎಸ್‌ಟಿ ತೆರಿಗೆ ಪಾವತಿಗೆ ಸರಕಾರ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಕೋವಿಡ್ ೧೯ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿರುವದರಿಂದ ಜಿಎಸ್‌ಟಿ ಪಾವತಿಗೆ ಕಾಲಾವಕಾಶ ದೊಂದಿಗೆ ವಿಳಂಬ ಪಾವತಿಗೆ ಬಡ್ಡಿ ಹಾಗೂ ದಂಡ ಪಾವತಿಯಲ್ಲಿ ವಿನಾಯಿತಿ ನೀಡಿದೆ.

ಜಿಎಸ್‌ಟಿ ಪಾವತಿ ಮಾಡಲು ಏಪ್ರಿಲ್ ೨೨ ಕೊನೆಯ ದಿನಾಂಕ ವಾಗಿತ್ತು. ಆದರೆ, ಈ ಸಂದರ್ಭದಲ್ಲಿ ಕೋವಿಡ್ ಜನತಾ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಪಾವತಿ ಮಾಡಲು ಅವಧಿ ವಿಸ್ತರಣೆ ಮಾಡಲಾಗಿದೆ. ರೂ.೫ಕೋಟಿವರೆಗೆ ವಹಿವಾಟು ಮಾಡುವವರಿಗೆ ಪಾವತಿಯ ಕೊನೆಯ ದಿನಾಂಕ ದಿಂದ ೩೦ದಿನಗಳವರೆಗೆ ಕಾಲಾವ ಕಾಶ ವಿಸ್ತರಣೆ ಮಾಡಲಾಗಿದೆ. ೫ಕೋಟಿಗಿಂತ ಅಧಿಕ ವಹಿವಾಟು ದಾರರಿಗೆ ಕೊನೆಯ ದಿನಾಂಕದಿAದ ೧೫ದಿನಗಳವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಇದರೊಂದಿಗೆ ಸರಕಾರ ಒಂದಷ್ಟು ವಿನಾಯಿತಿ ಕೂಡ ನೀಡಿದೆ. ನಿಗದಿತ ಅವಧಿಯೊಳಗಡೆ ಪಾವತಿ ಮಾಡದವರಿಗೆ ಹಾಗೂ ಪಾವತಿ ಮಾಡಲು ವಿಳಂಬವಾ ದವರಿಗೆ ಬಡ್ಡಿ ಹಾಗೂ ದಂಡದಿAದ ವಿನಾಯಿತಿ ನೀಡಲಾಗಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖಾಧಿಕಾರಿ ರಾಜಶೇಖರ್ ಮಾಹಿತಿ ನೀಡಿದ್ದಾರೆ.