ಮಡಿಕೇರಿ, ಮೇ ೩: ಭಾರತ ಸರಕಾರದ ಯೋಜನೆಯಾದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ಇಖSS) ೧೧೨ ರಾಜ್ಯಾದ್ಯಂತ ಚಾಲನೆಗೊಂಡಿದ್ದು, ೫ನೇ ಮತ್ತು ಕೊನೆಯ ಹಂತವಾಗಿ ಕೊಡಗು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತಾ. ೪ ರಂದು (ಇಂದು) ಮಧ್ಯಾಹ್ನ ೧ ಗಂಟೆಗೆ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಉಪಸ್ಥಿತಿಯಲ್ಲಿ ೭ ಹೊಸ ಇಖಗಿ (ತುರ್ತು ಸ್ಪಂದನ ವಾಹನ)ಗಳನ್ನು ಸಾರ್ವಜನಿಕ ಸೇವೆಗೆ ನಿಯುಕ್ತಿಗೊಳಿಸಲಾಗುವುದಾಗಿ ಪ್ರಕಟಣೆ ತಿಳಿಸಿದೆ.