ಮಡಿಕೇರಿ, ಮೇ ೩: ಜೋಡುಪಾಲ, ದೇವರಕೊಲ್ಲಿ ಮತ್ತು ಸಂಪಾಜೆ ಹತ್ತಿರವಿರುವ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ರಬ್ಬರ್ ತೋಟಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಭೇಟಿ ನೀಡಿ ಕೋವಿಡ್-೧೯ರ ೨ನೇ ಅಲೆಯ ಕುರಿತು ತಿಳುವಳಿಕೆ ನೀಡಲಾಯಿತು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಕೆಲಸ ಮಾಡಿಸಲು ಆಡಳಿತ ಮಂಡಳಿಯವರಿಗೆ ತಿಳಿಸಲಾಯಿತು.

ವಲಸೆ ಕಾರ್ಮಿಕರ ಮಾಹಿತಿ ಯನ್ನು ನಮೂನೆ-ಬಿ ಯಲ್ಲಿ ತಯಾರಿಸಿ ಸಲ್ಲಿಸಲು ತಿಳಿಸಲಾಯಿತು. ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಹೊರಡಿಸುವ ಕೋವಿಡ್-೧೯ಕ್ಕೆ ಸಂಬAಧಿಸಿದ ಆದೇಶ, ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಲಾಯಿತು. ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿ ಗ್ರಾಮ ಪಂಚಾಯತ್, ಮದೆ, ಸಂಪಾಜೆ, ಚೆಂಬು ಮತ್ತು ಪೆರಾಜೆಗಳಿಗೆ ಭೇಟಿ ನೀಡಿ ತೋಟಗಳಲ್ಲಿ ಹಾಗೂ ಕಟ್ಟಡ ಹಾಗೂ ಇತರ ನಿರ್ಮಾಣ ಕೆಲಸದಲ್ಲಿ ತೊಡಗಿರುವ ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ಪಡೆದು ಒದಗಿಸುವಂತೆ ಕೋರಲಾಯಿತು. ವಲಸೆ ಕಾರ್ಮಿಕರು ಬಂದು ಹೋಗುವಾಗ ಮಾಹಿತಿಯನ್ನು ಕಳುಹಿಸುವಂತೆ ಕೋರಲಾಯಿತು.ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಹೊರಡಿಸುವ ಕೋವಿಡ್-೧೯ಕ್ಕೆ ಸಂಬAಧಿಸಿದ ಆದೇಶ, ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಲಾಯಿತು. ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿ ಗ್ರಾಮ ಪಂಚಾಯತ್, ಮದೆ, ಸಂಪಾಜೆ, ಚೆಂಬು ಮತ್ತು ಪೆರಾಜೆಗಳಿಗೆ ಭೇಟಿ ನೀಡಿ ತೋಟಗಳಲ್ಲಿ ಹಾಗೂ ಕಟ್ಟಡ ಹಾಗೂ ಇತರ ನಿರ್ಮಾಣ ಕೆಲಸದಲ್ಲಿ ತೊಡಗಿರುವ ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ಪಡೆದು ಒದಗಿಸುವಂತೆ ಕೋರಲಾಯಿತು. ವಲಸೆ ಕಾರ್ಮಿಕರು ಬಂದು ಹೋಗುವಾಗ ಮಾಹಿತಿಯನ್ನು ಕಳುಹಿಸುವಂತೆ ಕೋರಲಾಯಿತು.