ಮಡಿಕೇರಿ, ಮೇ ೨: ಪಂಚ ರಾಜ್ಯಗಳ ತೀರ್ಪು ಹೊರಬಿದ್ದಿದ್ದು, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ವಿಜಯಯಾತ್ರೆ ಮುಂದುವರೆದಿದ್ದು, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷ, ಪುದುಚೇರಿಯಲ್ಲಿ ಬಿಜೆಪಿ-ಎ.ಐಎನ್‌ಆರ್‌ಸಿ ಮೈತ್ರಿಕೂಟ ಬಹುಮತ ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ದಾಖಲಿಸಿ ಅಧಿಕಾರ ಹಿಡಿಯಲಿವೆ.
ಮಮತಾ ಬ್ಯಾನರ್ಜಿ ಸೋಲು - ಟಿಎಂಸಿ ಅಧಿಕಾರಕ್ಕೆ
ನಂದಿಗ್ರಾಮ ಕ್ಷೇತ್ರದಲ್ಲಿ ದೊಡ್ಡ ತಿರುವು ಎದುರಾಗಿದ್ದು ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಮಡಿಕೇರಿ, ಮೇ ೨: ಪಂಚ ರಾಜ್ಯಗಳ ತೀರ್ಪು ಹೊರಬಿದ್ದಿದ್ದು, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ವಿಜಯಯಾತ್ರೆ ಮುಂದುವರೆದಿದ್ದು, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷ, ಪುದುಚೇರಿಯಲ್ಲಿ ಬಿಜೆಪಿ-ಎ.ಐಎನ್‌ಆರ್‌ಸಿ ಮೈತ್ರಿಕೂಟ ಬಹುಮತ ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ದಾಖಲಿಸಿ ಅಧಿಕಾರ ಹಿಡಿಯಲಿವೆ.
ಮಮತಾ ಬ್ಯಾನರ್ಜಿ ಸೋಲು - ಟಿಎಂಸಿ ಅಧಿಕಾರಕ್ಕೆ
ನಂದಿಗ್ರಾಮ ಕ್ಷೇತ್ರದಲ್ಲಿ ದೊಡ್ಡ ತಿರುವು ಎದುರಾಗಿದ್ದು ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಮಡಿಕೇರಿ, ಮೇ ೨: ಪಂಚ ರಾಜ್ಯಗಳ ತೀರ್ಪು ಹೊರಬಿದ್ದಿದ್ದು, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ವಿಜಯಯಾತ್ರೆ ಮುಂದುವರೆದಿದ್ದು, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷ, ಪುದುಚೇರಿಯಲ್ಲಿ ಬಿಜೆಪಿ-ಎ.ಐಎನ್‌ಆರ್‌ಸಿ ಮೈತ್ರಿಕೂಟ ಬಹುಮತ ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ದಾಖಲಿಸಿ ಅಧಿಕಾರ ಹಿಡಿಯಲಿವೆ.
ಮಮತಾ ಬ್ಯಾನರ್ಜಿ ಸೋಲು - ಟಿಎಂಸಿ ಅಧಿಕಾರಕ್ಕೆ
ನಂದಿಗ್ರಾಮ ಕ್ಷೇತ್ರದಲ್ಲಿ ದೊಡ್ಡ ತಿರುವು ಎದುರಾಗಿದ್ದು ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಎಣಿಕೆ ವೇಳೆ ಟಿಎಂಸಿಗೆ ಭರ್ಜರಿ ಪೈಪೋಟಿಯನ್ನೇ ನೀಡಿತ್ತಾದರೂ ಕ್ರಮೇಣ ತನ್ನ ಮುನ್ನಡೆಯ ಅಂತರವನ್ನು ಕಳೆದುಕೊಳ್ಳಲಾ ರಂಭಿಸಿತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮ್ಯಾಜಿಕ್ ನಂಬರ್ ಸಂಖ್ಯೆಗೆ ಅಗತ್ಯವಿರುವಷ್ಟು ಮುನ್ನಡೆ ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ. ಬಿಜೆಪಿಗೆ ಅಧಿಕಾರ ಹಿಡಿಯುವ ಕನಸು ನನಸಾಗಿಲ್ಲ ವಾದರೂ ಅತಿ ಕಡಿಮೆ ಸ್ಥಾನ ಹೊಂದಿದ್ದ ರಾಜ್ಯದಲ್ಲಿ ಈ ಬಾರಿ ಟಿಎಂಸಿಗೆ ಪ್ರಬಲ ಪೈಪೋಟಿ ನೀಡಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟಿಎಂಸಿ ೨೧೩, ಬಿಜೆಪಿ ೭೭, ಪಕ್ಷೇತರ ೨ ಕ್ಷೇತ್ರದಲ್ಲಿ ಗೆಲುವು ದಾಖಲಿಸಿವೆೆ.
ತಮಿಳುನಾಡಿನಲ್ಲಿ ಡಿಎಂಕೆ
ಅತ್ಯಂತ ಕುತೂಹಲ ಕೆರಳಿಸಿದ ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ತನ್ನ ಹಿಡಿತ ಕಳೆದು ಕೊಂಡಿದೆ. ಎನ್‌ಡಿಎ (ಎಐಡಿಎಂಕೆ-ಬಿಜೆಪಿ ಮೈತ್ರಿಕೂಟ) ವಿರೋಧ ಪಕ್ಷವಾಗಿ ಉಳಿಯಲಿದೆ. ತಮಿಳುನಾಡಿ ನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಆಡಳಿತ ಪ್ರಾರಂಭವಾಗಲಿದೆ. ಒಟ್ಟು ೨೩೪ ಕ್ಷೇತ್ರಗಳ ಪೈಕಿ ಎಐಡಿಎಂಕೆ, ಬಿಜೆಪಿ ಮೈತ್ರಿಕೂಟ ೭೭, ಡಿಎಂಕೆ, ಕಾಂಗ್ರೆಸ್
(ಮೊದಲ ಪುಟದಿಂದ) ಮೈತ್ರಿಕೂಟ ೧೫೩, ಇತರರು ೪ ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕೇರಳದಲ್ಲಿ ಎಲ್‌ಡಿಎಫ್
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಪಾರ್ಟಿ (ಮೈತ್ರಿಕೂಟ) ಆಡಳಿತವನ್ನು ಮತ್ತೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು ೧೪೦ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ೪೧ ಸ್ಥಾನ ಗಳಿಸಿದರೆ, ಎಲ್‌ಡಿಎಫ್ ೯೭ ಕ್ಷೇತ್ರದಲ್ಲಿ ಗೆಲುವಿನ ರುಚಿ ಕಂಡಿದೆ. ಬಿಜೆಪಿ ಶೂನ್ಯ ಸಂಪಾದಿಸಿದೆ. ಇತರರು ಇಬ್ಬರು ಜಯಗಳಿಸಿದ್ದಾರೆ.
ಪುದುಚೇರಿಯಲ್ಲಿ ಎನ್‌ಡಿಎ
೩೦ ಕ್ಷೇತ್ರವಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎ.ಐಎನ್‌ಆರ್‌ಸಿ ಪಕ್ಷದ ರಂಗಸ್ವಾಮಿ ನೇತೃತ್ವದ ಬಿಜೆಪಿ ಎನ್.ಡಿ.ಎ ಮೈತ್ರಿಕೂಟ ೧೬, ಕಾಂಗ್ರೆಸ್ ಮೈತ್ರಿಕೂಟ ೮ ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಇತರರು ೬ ಕಡೆ ಜಯಗಳಿಸಿದ್ದಾರೆ. ಮೂಲಕ ಎನ್ ಡಿಎ ಅಧಿಕಾರ ಪಡೆಯಲಿದೆ.
ಅಸ್ಸಾಂ ಬಿಜೆಪಿ ತೆಕ್ಕೆಗೆ
ಅಸ್ಸಾಂನಲ್ಲಿ ೧೨೬ ಕ್ಷೇತ್ರಗಳ ಪೈಕಿ ಸೋನಾವಲ್ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ೭೬ರಲ್ಲಿ ಮುನ್ನಡೆಯಲ್ಲಿದ್ದರೆ, ಯುಪಿಎ ೪೮ರಲ್ಲಿ ಇತರರು ಇಬ್ಬರು ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ.