ಸೋಮವಾರಪೇಟೆ, ಮೇ. ೨: ಪಟ್ಟಣಕ್ಕೆ ಒತ್ತಿಕೊಂಡAತೆ ಇರುವ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೭೨ ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಈವರೆಗೆ ಮೂವರು ಮೃತಪಟ್ಟಿದ್ದು, ಇಡೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಆಲೇಕಟ್ಟೆರಸ್ತೆ, ಕಾನ್ವೆಂಟ್‌ಬಾಣೆ, ಹೌಸಿಂಗ್ ಬೋರ್ಡ್, ಗಾಂಧಿನಗರ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಲಾಗಿದ್ದು, ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ ಹಾಗೂ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ವಾರ್ಡ್ನಲ್ಲಿ ಸಂಚರಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆರಸ್ತೆಯಲ್ಲಿ ೧೨ ಮಂದಿ ಕೊರೊನಾ ಸೋಂಕಿತರಿದ್ದು, ಈರ್ವರು ಮೃತಪಟ್ಟಿದ್ದಾರೆ. ಗಾಂಧಿನಗರದಲ್ಲಿ ೧೫, ಚೌಡ್ಲು ಗ್ರಾಮದಲ್ಲಿ ೧೨, ಕಾನ್ವೆಂಟ್‌ಬಾಣೆ ಮತ್ತು ಹೌಸಿಂಗ್ ಬೋರ್ಡ್ನಲ್ಲಿ ೨೩, ಕಿಬ್ಬೆಟ್ಟ ಗ್ರಾಮದಲ್ಲಿ ೧೨ ಸೋಂಕಿತರಿದ್ದು, ಕಿಬ್ಬೆಟ್ಟದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ.