ಸೋಮವಾರಪೇಟೆ, ಮೇ. ೨: ಇಲ್ಲಿನ ಪಟ್ಟಣ ಪಂಚಾಯಿತಿಯ ಮಾರುಕಟ್ಟೆ ಆವರಣದಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಮೃತದೇಹದಲ್ಲಿ ಕೊರೊನಾ ಸೋಂಕು ಕಂಡುಬAದ ಹಿನ್ನೆಲೆ ಪ.ಪಂ. ಸಹಕಾರದೊಂದಿಗೆ ಸೇವಾ ಭಾರತಿಯ ಸದಸ್ಯರು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಅನಾಥ ಶವಕ್ಕೆ ಮುಕ್ತಿ ನೀಡಿದರು.
ಮಾರುಕಟ್ಟೆಯಲ್ಲಿ ಅಂದಾಜು ೬೦ರ ಪ್ರಾಯದ ಅನಾಥ ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಮೃತದೇಹದ ಪರೀಕ್ಷೆ ಸಂದರ್ಭ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತು. ಪೊಲೀಸರ ಮಹಜರಿನ ನಂತರ ಸೇವಾ ಭಾರತಿಯ ಸದಸ್ಯರು ಕರ್ಕಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಸೇವಾ ಭಾರತಿಯ ಉಮೇಶ್, ಮಹೇಶ್ ತಿಮ್ಮಯ್ಯ, ಮನುರೈ, ಶ್ರೀನಿಧಿ ಲಿಂಗಪ್ಪ, ಸಂತೋಷ್, ದರ್ಶನ್ ಜೋಯಪ್ಪ, ತೋಳೂರು ರಜಿತ್, ಸಂತೋಷ್ ರೈ ಅವರುಗಳು ಅಂತ್ಯಸAಸ್ಕಾರ ನಡೆಸಿದರು.