ಸುಂಟಿಕೊಪ್ಪ,, ಮೇ ೨: ಕಂಬಿಬಾಣೆ ಮೂಲಕ ಗ್ರಾಮ ಪಂಚಾಯಿತಿಯ ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ತೋಟದ ಕಡೆಯಿಂದ ಕಾಡಿಗೆ ತೆರಳುತ್ತಿದ್ದ ಕಾಡಾನೆಯನ್ನು ಕಂಡು ಗ್ರಾಮಸ್ಥರು ಹೆದರಿ, ಬೊಬ್ಬೆ ಹೊಡೆದು ಕಾಡಿಗೆ ಅÀಟ್ಟುವಲ್ಲಿ ಯಶಸ್ವಿಯಾದರು. ಆನೆಕಾಡು ಅರಣ್ಯ ಸಮೀಪವಿದಲ್ಲಿದ್ದು ಆಹಾರ ಅರಸಿ ನಾಡಿಗೆ ಕಾಡಾನೆ ಲಗ್ಗೆಯಿಡುತ್ತಿದ್ದು, ಕೃಷಿಕರು ಹೆದರಿ ಜೀವನ ನಡೆಸುವಂತಾಗಿದೆ. ಅರಣ್ಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಾದಾಪುರ ಸಮೀಪದ ಹೊಸತೋಟ ಐಗೂರುನಲ್ಲಿ ಆನೆಗಳು ರಾತ್ರಿ ವೇಳೆ ಆಗಮಿಸಿ ಬಾಳೆಗಿಡ ಕಾಫಿ ಗಿಡಗಳನ್ನು ನಾಶ ಪಡಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.