ಗೋಣಿಕೊಪ್ಪ ವರದಿ, ಮೇ ೨; ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ಗೋಣಿಕೊಪ್ಪ ಪಟ್ಟಣದಲ್ಲಿ ಔಷಧ ಸಿಂಪಡಣೆ ಮಾಡಲಾಯಿತು.

ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಗ್ನಿಶಾಮಕ ದಳವನ್ನು ಬಳಸಿಕೊಂಡು ಮುಖ್ಯರಸ್ತೆ, ಅಂಗಡಿಗಳಿಗೆ ಔಷಧ ಸಿಂಪಡಣೆಯನ್ನು ಶನಿವಾರ ಮಾಡÀಲಾಯಿತು. ಸಾರ್ವಜನಿಕರು ಮನೆಗೆ ಹಿಂತಿರುಗಿದ ನಂತರ ೧೦.೩೦ ಗಂಟೆಯಿAದ ಸಿಂಪಡಣೆ ಮಾಡಲಾಯಿತು.

ಬೆಳಿಗ್ಗೆ ಅಗತ್ಯ ವಸ್ತು ಖರೀದಿಗಿಂತ ಹೆಚ್ಚಾಗಿ ವಾಹನಗಳ ಓಡಾಟ ಕಂಡು ಬಂತು. ಪೊಲೀಸ್ ಇಲಾಖೆ ಸಿಬ್ಬಂದಿ ವಾಹನಗಳನ್ನು ನಿಯಂತ್ರಿಸಿದರು. ನಿಯಮದಂತೆ ವರ್ತಕರು, ಸಾರ್ವಜನಿಕರು ಸಮಯ ಪಾಲನೆ ಮೂಲಕ ಗಮನ ಸೆಳೆದರು