ನಾಪೋಕ್ಲು, ಮೇ ೨: ಹಲವೆಡೆ ಕಾಡಾನೆಗಳು ಹಲವು ಬೆಳೆಗಾರರ ತೋಟಗಳಿಗೆ ದಾಳಿಯಿಟ್ಟು ಬೆಳೆ ನಾಶ ಮಾಡಿದ್ದರೆ ಇಲ್ಲಿ ರೈತರೊಬ್ಬರು ತೋಟಗಳಿಗೆ ದಾಳಿಯಿಟ್ಟು ಬೆಳೆ ನಾಶ ಮಾಡಿದ್ದರೆ ಇಲ್ಲಿ ರೈತರೊಬ್ಬರು ತೋಟದಲ್ಲಿನ ಗಿಡಗಳಿಗೆ ಹಾಕಲು ತಂದಿಟ್ಟ ಗೊಬ್ಬರದ ಚೀಲಗಳನ್ನು ಕಾಡಾನೆಗಳು ಹಾಳು ಮಾಡಿವೆ. ಮರಂದೋಡ ಗ್ರಾಮದ ಬೆಳೆಗಾರ ಅನ್ನಾಡಿಯಂಡ ಮುದ್ದಯ್ಯ ೩೦ ಗೊಬ್ಬರ ಚೀಲಗಳನ್ನು ತೋಟದಲ್ಲಿ ದಾಸ್ತಾನು ಇರಿಸಿದ್ದರು. ಶನಿವಾರ ರಾತ್ರಿ ಆನೆಗಳು ಗೊಬ್ಬರ ಚೀಲಗಳನ್ನು ಎಲ್ಲೆಂದರಲ್ಲಿ ಎಸೆದು ನಷ್ಟ ಉಂಟಾಗಿದೆ ಎಂದು ಮುದ್ದಯ್ಯ ಅಳಲು ತೋಡಿಕೊಂಡಿದ್ದಾರೆ.