ಸೋಮವಾರಪೇಟೆ, ಮೇ. ೨: ಇಂದು ಮಧ್ಯಾಹ್ನ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸಿಡಿಲು ಗುಡುಗು ಸಹಿತ ಭರ್ಜರಿ ಮಳೆಯಾಯಿತು. ಭಾರೀ ಮಳೆಯಾದ ಹಿನ್ನೆಲೆ ಚರಂಡಿಗಳು ತುಂಬಿ ಹರಿದು ರಸ್ತೆಗಳ ಮೇಲೆ ಕೊಳಚೆ, ಕಲ್ಲುಗಳು ಶೇಖರಣೆಗೊಂಡವು.
ಸಮೀಪದ ಚೌಡ್ಲು ಗ್ರಾ.ಪಂ.ನ ಆಲೇಕಟ್ಟೆ ರಸ್ತೆಯಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಚೌಡ್ಲು ವಿಎಸ್‌ಎಸ್‌ಎನ್ ಮುಂಭಾಗದ ರಸ್ತೆಯ ಚರಂಡಿಯನ್ನು ಮುಚ್ಚಿರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಅಕ್ಕಪಕ್ಕದ ಸೋಮವಾರಪೇಟೆ, ಮೇ. ೨: ಇಂದು ಮಧ್ಯಾಹ್ನ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸಿಡಿಲು ಗುಡುಗು ಸಹಿತ ಭರ್ಜರಿ ಮಳೆಯಾಯಿತು. ಭಾರೀ ಮಳೆಯಾದ ಹಿನ್ನೆಲೆ ಚರಂಡಿಗಳು ತುಂಬಿ ಹರಿದು ರಸ್ತೆಗಳ ಮೇಲೆ ಕೊಳಚೆ, ಕಲ್ಲುಗಳು ಶೇಖರಣೆಗೊಂಡವು.
ಸಮೀಪದ ಚೌಡ್ಲು ಗ್ರಾ.ಪಂ.ನ ಆಲೇಕಟ್ಟೆ ರಸ್ತೆಯಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಚೌಡ್ಲು ವಿಎಸ್‌ಎಸ್‌ಎನ್ ಮುಂಭಾಗದ ರಸ್ತೆಯ ಚರಂಡಿಯನ್ನು ಮುಚ್ಚಿರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಅಕ್ಕಪಕ್ಕದ ನಿರ್ಮಿಸುವಂತೆ ಮನವಿ ಮಾಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷ ಮಹೇಶ್‌ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾ.ಪಂ. ವತಿಯಿಂದ ಚರಂಡಿ ನಿರ್ಮಿಸುವ ಭರವಸೆ ನೀಡಿದ್ದಾರೆ.
ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರದಂದು ಗುಡುಗು ಸಿಡಿಲು ಸಹಿತ ಧಾರಕಾರ ಮಳೆ ಸುರಿಯಿತು. ಇದಲ್ಲದೇ ಕೆಲ ಕಾಲ ಆಲಿಕಲ್ಲು ಮಳೆ ಸುರಿದಿದ್ದು ಗಾಳಿ ಮಳೆಗೆ ಸಿಲುಕಿ ನೆಲ್ಲಿಹುದಿಕೇರಿ ಜ್ಯೋತಿನಗರ ರಸ್ತೆಯಲ್ಲಿ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸುAಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಸಂಜೆ ಗುಡುಗು ಸಿಡಿಲು ಸಹಿತ ಮಳೆಯು ೧ ಗಂಟೆಗಳ ಕಾಲ ಸುರಿಯಿತು. ಕಾಫಿ ತೋಟದ ಕೃಷಿಕರು ಮತ್ತು ಭತ್ತ ಇನ್ನಿತರ ಕೃಷಿ ಕಾರ್ಯಗಳನ್ನು ನಿರ್ವಹಿಸಲು ಈ ಮಳೆಯು ಪೂರಕವಾಗಿದೆ ಎಂದು ಕೃಷಿಕರು ಮೊಗದಲ್ಲಿ ಮಂದಾಹಾಸ ಮೂಡಿಸಿದೆ.
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶನಿವಾರ ಗುಡುಗು- ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿಯಿತು. ಸಂಜೆ ೪.೧೫ರಿಂದ ಆರಂಭವಾಗಿ ೫.೩೦ರವರೆಗೂ ಬಿಡುವು ನೀಡದೆ ಮಳೆ ಸುರಿಯಿತು. ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ಒಂದು ಇಂಚು ಮಳೆಯಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೮೫ ಸೆಂಟ್ ಮಳೆಯಾಗಿದೆ.
ಲಾಕ್‌ಡೌನ್ ಕಾರಣ ಮನೆಯಲ್ಲೇ ಇದ್ದ ಕೃಷಿಕರು ಸಂಜೆ ಸುರಿದ ಮಳೆಯಿಂದ ಸಂತಸ ಗೊಂಡರು. ಕೃಷಿ ಚಟುವಟಿಕೆಗೆ ಮಳೆಯ ಅಗತ್ಯವಿತ್ತು. ಕಾಫಿ ತೋಟದಲ್ಲಿ ಚಿಗುರು ತೆಗೆಯುವ, ಮರಕಸಿ ಮಾಡುವ ಕೆಲಸ ನಡೆದಿದೆ. ಲಾಕ್‌ಡೌನ್ ಉದ್ದಿಮೆದಾರರು, ವ್ಯಾಪಾರಿಗಳಲ್ಲಿ ಆತಂಕ, ಚಿಂತೆ ಮೂಡಿಸಿದೆ. ಆದರೆ, ಬೆಳೆಗಾರರಿಗೆ, ರೈತರಿಗೆ ಕೃಷಿ ಕೆಲಸಕ್ಕೆ ಸುರಿಯುವ ಮಳೆಯೊಂದಿಗೆ ಬಿಡುವನ್ನು ಕಲ್ಪಿಸಿದಂತಾಗಿದೆ ಎನ್ನುತ್ತಾರೆ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್.