ನಾಪೋಕ್ಲು, ಮೇ ೨: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಪೋಕ್ಲು-ವೀರಾಜಪೇಟೆ ಮುಖ್ಯರಸ್ತೆಯ ಕೊಳಕೇರಿಯಲ್ಲಿ ಮೋರಿ ಮಣ್ಣಿನಿಂದ ತುಂಬಿದ ಪರಿಣಾಮ ಮಳೆನೀರು ರಸ್ತೆಯಲ್ಲಿ ಸಂಗ್ರಹಗೊAಡು ವಾಹನ ಮತ್ತು ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಕೆ.ವೈ. ಸ್ಥಳೀಯರೊಂದಿಗೆ ಸೇರಿ ಮೋರಿ ದುರಸ್ತಿಗೊಳಿಸುವದರ ಮೂಲಕ ಶ್ರಮದಾನ ನಡೆಸಿದರು.