ಪೊಂಗಲಶೆಡತಿತ್ - ಹೊAಗಲಶ ಪಾತ್ರೆಯನ್ನು ಮಕ್ಕಕ್ ಕೊಡ್‌ಕಣೆ - ಮಕ್ಕಳಿಗೆ ಕೊಡಲಾಗ

ಪೊಂಗಲಶ ಪಾತ್ರತ್ - ಹೊಂಗಲಶ ಪಾತ್ರದಲ್ಲಿ

ಎನ್ನ ಮುಚ್ಚಿ ಬೆಚ್ಚಿತ್ - ನನ್ನನ್ನು ಮುಚ್ಚಿಟ್ಟು

ದೂರ ಬಟ್ಟೆ ಪೋಚಿ’’ಂದ್ - ದೂರ ದಾರಿ ಹಿಡಿದನೆಂದು

ಕಾವರ‍್ಯಮ್ಮೆ ದೇವಿಕ್ - ಕಾವೇರಿಯಮ್ಮ ದೇವಿಗೆ

ಮೈದುಂಬ ಚೊಡಿ ಬಂದ - ಉಗ್ರ ಕೋಪ ಬಂದಿತು

ಅಕ್ಕಣೆಕ್ ಮಮ್ಮಾಯ - ಆಗೊಂದು ಮಹಾಮಾಯ !

ಸತ್ಯ ಫಲಂಗುAಡ್ - ಸತ್ಯದ ಫಲದಿಂದ

ಪಾತ್ರೆಡ್‌ತ್ ಪಾರುವ - ಪಾತ್ರೆ ಹಿಡಿದಿದ್ದ ಹಾರವ

ಮುಟ್ಟ್ ಪಟ್ಟ್ ಬುದ್ದತ್ - ಕಾಲೆಡವಿ ಬಿದ್ದನು

ಅದ್ ಕಂಡ್ ದೇವಿಯೊ - ಅದನ್ನರಿತ ದೇವಿಯು

ಕುಡಿಕೆಕ್ ಪಾರಿತ್ - ಕುಂಡಿಗೆಗೆ ಹಾರುತ್ತ

ಪೊಣ್ಣ್ ರೂಪ ಬುಟ್ಟಿತ್ - ಹೆಣ್ಣು ರೂಪ ತ್ಯಜಿಸುತ್ತ

ನೀರಾಯಿ ಪರಿಂಜತ್ - ನೀರಾಗಿ ಹರಿದಳು

ಅದ್‌ಕಂಡ ಪಟ್ಟಮ - ಅದನ್ನು ಕಂಡ ಬ್ರಾಹ್ಮಣರು

ಬೊತ್ತಿತ್ ಬೊರ್‌ಂಡಿತ್ - ಹೆದರುತ್ತ ಬೆದರುತ್ತ

‘‘ಇದೆನ್ನ ಕದೆ ಮಾಯ’’ ? - ಇದೇನು ವಿಚಿತ್ರ ?

ಎಂದೆಣ್ಣಿ ಪರಂದಿತ್ - ಎAದು ತಾವು ನುಡಿಯುತ್ತಾ

ಒಕ್ಕುವಳ ನೀರ್‌ನ - ಹರಿಯುತ್ತಿರುವ ನೀರನ್ನು

ಮಾರ್‌ಟ್ಟ್ ತಡ್‌ತತ್ - ಅಡ್ಡಗಟ್ಟಿ ತಡೆದರು

ಆ ತಡೆನ ಕೊವ್ವತೆ - ಆ ತಡೆಯನ್ನು ಭೇದಿಸಿ

ಈ ಚೆರ್ ಮನ್‌ಸಂಡ - ಈ ನರ ಮನುಷ್ಯರ

ಕಣ್ಣ್ಕ್ ಮರೆಯಾಚಿ - ಕಣ್ಣಿಂದ ಮರೆಯಾದಳು

ಅದರಿಂಜ ಪಟ್ಟಮ - ಇದನ್ನರಿತ ಬ್ರಾಹ್ಮಣರು

ಓಡಿ ಪಾರಿ ಪೋಯಿತ್ - ಓಡೋಡಿ ಧಾವಿಸಿ

ಅಗಸ್ತö್ಯಂಗರ್‌ಪ್‌ನ - ಅಗಸ್ತö್ಯನಿಗೆ ತಿಳಿಸಿದರು.

ಅದರಿಂಜಗಸ್ತö್ಯನ್ - ಇದನ್ನರಿತ ಅಗಸ್ತö್ಯನು

ಏರ ದುಃಖ ಮಾಡಿತ್ - ದುಃಖಕ್ಕೆ ಈಡಾಗಿ

ಓಡಿ ಪಾರಿ ಬಂದಿತ್ - ಓಡುತ್ತೋಡುತ್ತಾ ಬಂದು

‘‘ತಪ್ಪ್ಕೊಪ್ಪ್ ಮಾಡಂಡು’’ - ತಪ್ಪನ್ನು ಮನ್ನಿಸು

ಎಂದೆಣ್ಣಿ ಪರಂದಿತ್ - ಎAದೆನ್ನುತ್ತಾ

ಕೂಡ ಬಯ್ಯ ಪೋಯಿತ್ - ಹಿಂದೆ ಹಿಂದೆ ಹೋಗಲು

ಚೆಂಡೋಲೆ ಕಡಿಯೋಂಡ - ಚೆAಡಿನAಥ ಕಡಿಯತ್ತು ನಾಡಿನ

ನಾಡ್‌ಡ ನಡುವುಲ್ - ನಾಡಿನ ಮಧ್ಯದಲ್ಲಿ

ಬಟ್ಟೆಕ್ಕಡ್ಡ ನಿಕ್ಕಣೆ - ದಾರಿಗಡ್ಡ ನಿಲ್ಲಲು

ಕಾವರ‍್ಯಮ್ಮೆ ಮಾತಾಯಿ - ಕಾವೇರಿಯಮ್ಮ ದೇವಿಯು

ಬಲಬರಿಕ್ ಸುತ್ತ್ಚಿ - ಬಲಬದಿಗೆ ತಿರುಗಿದಳು

ಆನಂಗುಡ್ ಸಂಙÁದಿ - ಆದುದರಿAದ ಗೆಳೆಯನೇ

ಪೊಮ್ಮಾಲೆ ಬಲಮುರಿ - ಹೊನ್ನ ಮಾಲೆ ಬಲಮುರಿ

ಎಂದೆಣ್ಣಿ ಪೆದ ಪೋನ - ಎನ್ನುವಂಥ ಹೆಸರಾಯ್ತು

ಅಲ್ಲಿಂಜಿ ಪೊರಟಿತ್ - ಅಲ್ಲಿಂದ ಹೊರಡುತ್ತಾ

ಉಕ್ಕಿಡೊಕ್ಕಿ ಪೋಪಕ - ಉಕ್ಕಿ ಹರಿಯುತ್ತಿರುವಾಗ

ಬಯ್ಯ ಬಪ್ಪ ಮುನಿನ - ಹಿಂಬಾಲಿಸುವ ಮುನಿಯನ್ನು

ಕಣ್ಣೋಡನೆ ಕಂಡಿತ್ - ಹಿAತಿರುಗಿ ನೋಡಲು

ಪೋಪಲ್ ಕಾಲ್ ಬರ - ಹೋಗಲು ಕಾಲು ಬಾರದು

ಬಪ್ಪಕ ಮನ ಬರ - ಇರಲು ಮನವು ಒಪ್ಪದು

‘‘ಆನಕಲೂ ನೋಟಂಡು - ಆದರೂ ನೋಡೋಣ

ತಪ್ಪ್ ನೆಪ್ಪರಿಯಂಡು’’ - ಒಪ್ಪು-ತಪ್ಪನರಿಯೋಣ

ಎAದೆಣ್ಣಿ ನೆನತಿತ್ - ಎಂದೆನುತ್ತ ನೆನೆಯುತ್ತ

ಬೊಳ್ಳಿ ಕೊಂಬ್ ಕುಯ್ಯತ್ - ಬೆಳ್ಳಿ ಕೊಬ್ಬಿನಂತ ಗುಹ್ಯದಲ್ಲಿ

ಚಿತ್ತಾಲ್ ಮದುವಡಿ - ಆಲದ ಕಟ್ಟೆಯಡಿಯಲ್ಲಿ

ಅಲ್ಲಿ ಕೂಡಿ ನಿಂದಿತ್ - ಅಲ್ಲಿ ಜೊತೆಯಲ್ಲಿ ನಿಲ್ಲುತ್ತ

ದೇವ ದೇವಿ ದಂಡಾಳು - ದೇವ ದೇವಿಯರಿಬ್ಬರು

ತಕ್‌ಬಾಕ್ ತ್Ãಪಕ್ಕ - ಮಾತುಕತೆ ಮುಗಿಸುತ್ತಿರಲು

ಚಿತ್ತಾಲ್‌ಡ ಕುಂಞÂಯೋ - ಅಲ್ಲಿದ್ದ ಆಲದ ಗಿಡವು

ವಾಯು ಕಾತಡಿಕಣೆ - ಗಾಳಿ ಬೀಸುತ್ತಿರುವಾಗ

ತೊಪ್ಪ್ ತೊಪ್ಪ್ಲೇ ಪೊಜ್ಜ - ಎಲೆ ಎಲೆಗಳು ಶಬ್ದ ಮಾಡಿರಲು

ಅಲೆ ಪೊಜ್ಜ ಸದ್ದ್ಕ್ - ಶಬ್ದದ ಅಲೆಯಿಂದಾಗಿ

Àತಕ್ಕ್ ಬಾಕ್ ಕೇಟ್‌ಲೆ; - ಮಾತುಗಳು ಕೇಳದಾಯ್ತು

ಅಕ್ಕಣೆ ಮುನಿರಾಯ - ಹೀಗಿರುವಾಗ ಮುನಿರಾಯ

ಮೈ ದುಂಬಾ ಚೊಡಿ ಬಂದ್ - ತಾನು ಸಿಡಿಮಿಡಿಗೊಳ್ಳುತ್ತಾ

‘‘ಸದ್ದ್ ! ಸದ್ದ್!’’ಂದೆಣ್ಣ್ನ - ‘‘ಸದ್ದು ಸದ್ದು’’ ಎಂದನು

ಆ ಬಾಕ್‌ನ ಕೇಟಿತ್ - ಆ ಮಾತನ್ನು ಕೇಳುತ್ತಾ

ಚಿತ್ತಾಲ್‌ಡ ಕುಂಞÂಯೊ - ಆಲದ ಆ ಗಿಡ ತಾನು

ಅಂದ್ ತೊಟ್ಟ್ ಇಂದೋಳ - ಅAದಿನಿAದ ಇಂದಿನವರೆಗೂ

ಸದ್ದಡAಗಿ ನಿಂದಿತ್ ! - ಸದ್ದಡಗಿ ನಿಂತಿತು

ಒAದ್ ಕೇಳ್ ಸಂಙÁದಿ - ಒAದು ಕೇಳೋ ಗೆಳೆಯನೇ

ಅಗಸ್ತö್ಯ ಮುನಿರಾಯ - ಅಗಸ್ತö್ಯ ಮುನಿರಾಯನು

ಕಾವರ‍್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಾತಾಯಿ

ಚಿತ್ತಾಲ್ ಮದುವಡಿ - ಆಲದ ಕಟ್ಟೆಯಡಿಯಲ್ಲಿ

ತಕ್ಕ್ ಬಾಕ್ ತ್Ãಪಿಂಜ; - ಮಾತುಕತೆ ನಡೆಸುತ್ತಿರುವಾಗ

ಅದ್ ಕೇಟ ಪಟ್ಟರೊ - ಅದನ್ನಾಲಿಸಿದ ಬ್ರಾಹ್ಮಣರು

ಈ ಬಾಕ್ ಎಣ್ಣ್ಚಿ - ಈ ಮಾತನ್ನು ಹೇಳಿದರು

ಅಗಸ್ತö್ಯನ ನೋಟಿತ್ - ಅಗಸ್ತö್ಯರನ್ನು ನೋಡಿ

ಈ ಬಾಕ್ ಪರಂದತ್ - ಈ ಮಾತು ಹೇಳಿದರು.

‘‘ಅಲ್ಲ ಕೇಳ್ ಮುನಿಯೆ, - ಕೇಳು ನೀನು ಮುನಿರಾಯ

ಮುಚ್ಚಿತ್ ಮರೆ ಮಾಡಿ - ಮುಚ್ಚುತ ಮರೆ ಮಾಡಿ

ಕನಕೆನ ಕೊದಿಚಿಯ’’ - ಕನಕೆಯನ್ನು ಮೋಹಿಸಿದೆ

ಎಂದೆಣ್ಣಿ ಪರೆಯಣೆ - ಎಂದು ತಾವು ನುಡಿಯಲು

ಅಗಸ್ತö್ಯ ಮಹಮುನಿಕ್ - ಅಗಸ್ತö್ಯ ಮಹಾಮುನಿಯು

ಮೈ ದುಂಬ ಚೊಡಿ ಬಂದ್ - ಉಗ್ರ ಕೋಪ ತಾಳುತ್ತಾ

ಪಟ್ಟ ಮರ ನೋಟಿತ್ - ಬ್ರಾಹ್ಮಣರತ್ತ ನೋಡುತ್ತಾ

‘‘ಮತ್ಸö್ಯ ದೇಶ ಪಟ್ಟರೆ - ಮತ್ಸö್ಯದೇಶ ಬ್ರಾಹ್ಮಣರೇ

ಈ ದೇಶ ಜನವೆಲ್ಲ - ಈ ದೇಶದ ಜನರೆಲ್ಲ

ನಿಂಗಕ್ ಮಿನಿಯಡ್ ! - ನಿಮಗೆ ಮುನಿಯಲಿ

ಉಂಬಕ್ಕೂ ಕುಡಿಪಕೂ - ಉಣ್ಣಲು ಕುಡಿಯಲು

ಬಾವಕೂ ಬದ್‌ಕ್‌ವಕೂ - ಬಾಳಲು ಬದುಕಲು

ನಿಂಗಕೆತ್ತತಾಯೋಡ್!’’ - ನಿಮಗೆ ಕೊರತೆಯಾಗಲಿ

ಎಂದೆಣ್ಣಿತ್ ಶಾಪ್‌ಟ್ಟ - ಎನ್ನುತ್ತಾ ಶಾಪವನ್ನಿತ್ತ

ಅದ್ ಕೇಟ ಪಾರುವ - ಇದನ್ನರಿತ ಬ್ರಾಹ್ಮಣರು

ಬೊತ್ತಿತ್ತ್ ಬೊರ್‌ಂಡಿತ್ - ಹೆದರುತ್ತ ಬೆದರುತ್ತ

ಕಾವೆೆರ‍್ಯಮ್ಮೆ ದೇವಿರ - ಕಾವೇರಮ್ಮ ದೇವಿಯ

ಪಾದಕಡ್ಡ ಬುದ್ದಿತ್ - ಪಾದಕಡ್ಡ ಬೀಳುತ್ತಾ

ದುಃಖತ್ ಮೊರಟತ್ - ದುಃಖದಿಂದ ಅತ್ತರು

ಅದ್ ಕಂಡ ಮಾತಾಯಿ - ಇದನ್ನು ನೋಡಿದ ಮಾತಾಯಿ

ಈ ಬಾಕ್ ಪರಂದತ್ - ಈ ಮಾತನ್ನು ಹೇಳಿದಳು

‘‘ಪಟ್ಟಮರೆ ಕೇಳಿರೋ, - ಬ್ರಾಹ್ಮಣರೇ ಕೇಳಿರಿ

ದೇವ ಮುನಿ ನಿಂಗಕ್ - ದೇವ ಮುನಿಯು ನಿಮಗೆ

ಇಟ್ಟ ಶಾಪ ತಟ್ಟುಲ; - ಹಾಕಿದ ಶಾಪ ತಟ್ಟದಿರದು

ಆನಕಲೂ ಪಟ್ಟರೆ - ಆದರೂ ಬ್ರಾಹ್ಮಣರೇ

ಎನ್ನ ನಿಂಗ ನಂಬಿತ್ - ನನ್ನ ನೀವು ನಂಬುತ್ತಾ

ಇAಜಚ್ಚಕ್ ನಾಳೋಳ - ಇರುವಷ್ಟು ದಿನದವರೆಗೆ

ಉಂಬಕೂ ಕುಡಿಪಕೂ - ಉಣ್ಣಲು ಕುಡಿಯಲು

ನಿಂಗಕ್ ಕೊರುವಾಂಡ’’ - ನಿಮಗೆ ಕೊರತೆಯಾಗದು

ಎಂದೆಣ್ಣಿ ಪರಂದತ್ - ಎAದು ತಾನು ಹೇಳಿದಳು

ಅದ್ ಕೇಟ ಪಾರುವ - ಅದನ್ನು ಕೇಳಿದ ಬ್ರಾಹ್ಮಣರು

ಚಂದೋಳ ಪೆರ್‌ಜಾಯಿ - ಸಂತೋಷದಿAದೊಡಗೂಡಿ

ಅಲ್ಲಿ ಕೂಡಿ ನಿಂದತ್ - ಅಲ್ಲಿ ಒಟ್ಟಿಗೆ ನಿಂತರು

ಇಞÆ್ಞ ಕೇಳ್ ಸಂಙÁದಿ - ಇನ್ನಷ್ಟು ಕೇಳೋ ಗೆಳೆಯನೇ

ದೇವ ದೇವಿ ದಂಡಾಳು - ದೇವ ದೇವಿಯರಿಬ್ಬರೂ

ತಕ್ಕ್ ಬಾಕ್ ತ್Ãತೀತ್ - ಮಾತುಕತೆಯನ್ನು ಮುಗಿಸಿದಾಗ

ಕಾವರ‍್ಮಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ

ದಂಡಾಯಿತೊಡAದತ್ - ಎರಡು ರೂಪ ತಾಳಿದಳು

ಅಗಸ್ತö್ಯಂಗ್ ಪೊಣ್ಣೊಬ್ಬ - ಅಗಸ್ತö್ಯನಿಗೆ ಹೆಂಡತಿಯಾಗಿ

ಲೋಪಾಮುದ್ರೆ ದೇವಿಯೋ - ಲೋಪಾಮುದ್ರೆ ತಾನಾಗಿ

ಲೋಕಕ್ ಪೊಳೆಯೊಬ್ಬ - ಲೋಕಕ್ಕೆ ನದಿಯಾಗಿ

ಕಾವರ‍್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ

ಎಂದೆಣ್ಣಿ ಪೆದಪೋಯಿ - ಎಂದೆAಬ ಹೆಸರಾಗಿ

ಬೈಪಿರಿಂಜಿ ಬಂದೋಳೊ, - ಹಿAತಿರುಗಿ ಬಂದಳು

ಬೈಪಿರಿAಜಿ ಬಂದದ್ - ಹಿAತಿರುಗಿ ಬಂದದ್ದನ್ನು

ಕಣ್ಣೊಡನೆ ಕಂಡಿತ್ - ಪ್ರತ್ಯಕ್ಷವಾಗಿ ನೋಡಿದ

ಅಗಸ್ತö್ಯ ಮುನಿರಾಯ - ಅಗಸ್ತö್ಯಮುನಿರಾಯನು

ಈ ಬಾಕ್ ಪರಂದತ್ - ಈ ಮಾತನ್ನು ಅಂದನು

“ಕೇಳೊ ಕೇಳೊ ದೇವಿಯೇ - ಕೇಳು ಕೇಳು ದೇವಿಯೇ

ಲೋಕಕ್ ಪೊಳೆಯಾಯಿ - ಲೋಕಕ್ಕೆ ನದಿಯಾಗಿ

ಪೋಪ ಬಟ್ಟೆ ಎಣ್ಣುವಿ - ಹೋಗುವ ದಾರಿ ತಿಳಿಸುವೆ

ಕುಂಡಿಕೆನ ಬುಟ್ಟಿತ್, - ಕುಂಡಿಕೆಯಿAದ ಹೊರಡುತ್ತಾ

ಮತ್ಸö್ಯ ತೀರ್ಥ ಮುಟ್ಟಿತ್ - ಮತ್ಸö್ಯ ತೀರ್ಥ ತಲುಪುತ್ತ

ಅಲ್ಲಿಂಜಿ ಪೊರಟಿತ್ - ಅಲ್ಲಿಂದ ಹೊರಡುತ್ತ

ಭಗಂಡAಡ ಕ್ಷೇತ್ರತ್ - ಭಗಂಡ ಕ್ಷೇತ್ರಕ್ಕಾಗಿ

ಪೊಮ್ಮಾಲೆ ಕನಕೆನ - ಹೊನ್ನಮಾಲೆಯಂಥ ಕನಕೆಯನ್ನು

ಕೂಟಿಂಗೊAಡ್ ಪೋಯಿತ್ - ಜೊತೆಗೆ ಸೇರಿಸಿಕೊಂಡು

ಸಪ್ತ ಕೋಟೀಶ್ವರಂಡ - ಸಪ್ತ ಕೋಟೇಶ್ವರನ

ಕ್ಷೇತ್ರಕಾಲೆ ಪೋಯಿತ್, - ಕ್ಷೇತ್ರಕ್ಕಾಗಿ ಧಾವಿಸುತ್ತಾ

ಅಲ್ಲಿಂಜಿ ಪೊರಟಿತ್ - ಅಲ್ಲಿಂದಲೂ ಹೊರಡುತ್ತಾ

ಹರಿಶ್ಚಂದ್ರಕಾಯಿತ್ - ಹರಿಶ್ಚAದ್ರ ಕ್ಷೇತ್ರಕ್ಕಾಗಿ

ಬಟ್ಟೊತ್ತ ಬಲಮುರಿ - ಬಟ್ಟಲಿನಂತ ಬಲಮುರಿ

ಅಲ್ಲಿ ಪೋಯಿ ಸುತ್ತಿತ್, - ಅಲ್ಲಿ ಹೋಗಿ ಸುತ್ತುತ್ತಾ

ಅಲ್ಲಿಂಜಿ ಪೊರಟಿತ್ - ಅಲ್ಲಿಂದಲೂ ಹೊರಟು

ಗಜಾಖ್ಯ ಗೋಮುಖಿನ - ಗೋಮುಖಿಯನ್ನು

ಕಂಡಿತ್ ಪೊರಟಿತ್ - ಕಂಡು ಮುಂದೆ ಹೊರಡುತ್ತಾ

ಮಾರ್ಕಂಡೇಯ ಮಹಮುನಿ - ಮಾರ್ಕಂಡೇಯ ಮಹಾಮುನಿ

ಉಳ್ಳಾಲೆ ಕಡಂದಿತ್ - ಇರುವಲ್ಲಿ ದಾಟುತ್ತಾ

ಕಪಿಲ ಋಷಿ ಸ್ಥಾನತ್ - ಕಪಿಲ ಋಷಿಯ ಸ್ಥಾನದಲಿ

ಅಲ್ಲಿ ಪೋಯಿ ನಿಂದಿತ್ - ಅಲ್ಲಿ ತಲುಪಿ ನಿಲ್ಲುತ್ತಾ

ಅಲ್ಲಿಂಜಿ ಪೊರಟಿತ್ - ಅಲ್ಲಿಂದ ಮುಂದೆ ಹೊರಟು

ಚಂದ್ರಪುಷ್ಕರಿಣಿಲ್ - ಚAದ್ರ ಪುಷ್ಕರಿಣಿಯಲ್ಲಿ

ಅಲ್ಲಿ ಪೋಯಿ ಕೂಡಿತ್ - ಅಲ್ಲಿ ಹೋಗಿ ಸೇರುತ್ತಾ

ಅಲ್ಲಿಂಜಿ ಪೊರಟಿತ್ - ಅಲ್ಲಿಂದಲೂ ಮುಂದೆ ಸಾಗಿ

ಪಾಕಾಡ ಸೇರಿಯೋಳೋ; - ಹಾಲ್ಗಡಲನ್ನು ಸೇರಿಕೋ

ನೀನ್ ಪೋನ ಬಟ್ಟೆರ - ನೀನು ಸಾಗುವ ದಾರಿಯ

ದಂಡ್‌ಕರೆ ಭೂಮಿಲೂ - ಇಕ್ಕೆಲಗಳ ಭೂಮಿಯಲ್ಲೂ

ಶಿವಲಿಂಗ ಮಾಡಿತ್ - ಶಿವಲಿಂಗ ಸ್ಥಾಪಿಸಿ

ಶಾಂತಿ ಪೂಜೆ ಕೆಯ್ಯುವಿ’’ - ಶಾಂತಿ ಪೂಜೆ ಮಾಡುವೆನು

ಎಂದೆಣ್ಣಿ ಪರೆಯಣೆ - ಹೀಗೆಂದು ನುಡಿವಾಗ

ಕಾವರ‍್ಯಮ್ಮೆ ಮಾತಾಯಿ-ಕಾವೇರಮ್ಮ ಮಾತಾಯಿ

ಚಂದೋಳ ನಲಿಜಿತ್- ಸಂತಸದಿ ನಲಿಯುತ್ತಾ

ಉಕ್ಕಿ ಒಕ್ಕಿ ಪೋನಳೋ-ಹರಿಯುತ್ತಾ, ಹರಿಯುತ್ತಾ ಸಾಗಿದಳು. (ಮುಂದುವರಿಯುವುದು)

ಕನ್ನಡಾನುವಾದ : - ನಾಗೇಶ್ ಕಾಲೂರು.