ಇವರು ಬಂಧುಗಳಲ್ಲ. ಗೆಳೆಯರೂ ಅಲ್ಲ.. ಅಪ್ಪ ಅಲ್ಲ. ಅಣ್ಣ, ತಮ್ಮ,, ಚಿಕ್ಕಪ್ಪ,.. ದೊಡ್ಡಪ್ಪ... ಮಗ... ಯಾರೂ ಅಲ್ಲವೇ ಅಲ್ಲ....

ಮುಂದೆ ಮೌನವಾಗಿ ಮಲಗಿರುವವರು ಯಾರೆಂದೇ ಇವರಿಗೆ ತಿಳಿದಿಲ್ಲ.

ಹೀಗಿದ್ದರೂ ಈ ಮಹಾನುಭಾವರು ಸೇವಾ ಮನೋಭಾವದಿಂದ ಸಂಪ್ರದಾಯಬದ್ಧವಾಗಿ ಆ ವ್ಯಕ್ತಿಯ ದೇಹಕ್ಕೆ ಅಂತಿಮ ನಮನ ಸಲ್ಲಿಸಿ ಗೌರವಯುತವಾದ ವಿದಾಯವನ್ನು ಈ ಲೋಕದಿಂದ ನೀಡುತ್ತಿದ್ದಾರೆ…

ಈ ಮೂಲಕ ಕೊಡಗಿನಲ್ಲಿ ಜಾತಿ. ಧರ್ಮಗಳನ್ನೂ ಮೀರಿದ ಸೇವಾ ಕಾರ್ಯ ದೇಶಕ್ಕೇ ಮಾದರಿಯಾಗುವಂತೆ ನಡೆಯುತ್ತಿದೆ.

ಹಿಂದೂ, ಮುಸಲ್ಮಾನ್, ಕ್ರೆöÊಸ್ತ ಸಮುದಾಯದವರು ಕೊರೊನಾ ಸೋಂಕಿನಿAದ ಸಾವನ್ನಪ್ಪಿದಾಗ ಸರ್ಕಾರದ ನಿಯಮಗಳ ಪ್ರಕಾರ ಇವರ ಅಂತ್ಯಸAಸ್ಕಾರದಲ್ಲಿ ಪಾಲ್ಗೊಳ್ಳಲು ಕುಟುಂಬ ವರ್ಗಕ್ಕೆ ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಜಿಲ್ಲೆಯ ಸೇವಾ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರ ತಂಡ ಅಂತ್ಯಕ್ರಿಯೆಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಡೆಸುತ್ತಿದೆ.

ಕಳೆದ ೧ ವರ್ಷದಿಂದ ಕಾಡಿರುವ ಕೊರೊನಾಕ್ಕೆ ಕೊಡಗಿನಲ್ಲಿ ಸಾವನ್ನಪ್ಪಿರುವ ೧೨೦ ಮಂದಿಯ ಗೌರವಯುತ ಅಂತ್ಯಸAಸ್ಕಾರ ಕೈಗೊಂಡಿರುವ ಈ ಬಳಗದ ಸದಸ್ಯರು ನಾಗರಿಕ ಸಮಾಜದ ಹೆಮ್ಮೆಯೆ ಹೌದು.

ವಿಶ್ವಹಿಂದೂ ಪರಿಷತ್, ಬಜರಂಗದಳದ ತಂಡ..

ಮಡಿಕೇರಿ ಮತ್ತು ವ್ಯಾಪ್ತಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸೇವಾಕರ್ತರು ನೆರವೇರಿಸುತ್ತಿದ್ದಾರೆ. ೧೨ ತಿಂಗಳಲ್ಲಿ ೬೪ ಮೃತದೇಹಗಳ ಅಂತ್ಯಸAಸ್ಕಾರ ನೆರವೇರಿಸಿದ್ದಾರೆ.

ಪ್ರಾರಂಭಿಕ ಹಂತದಲ್ಲಿ ಜಿಲ್ಲಾಡಳಿತದೊಂದಿಗೆ ಮನವಿ ಸಲ್ಲಿಸಿ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ನೆರವೇರಿಸಲು ೯ ಮಂದಿಯ ತಂಡ ಮುಂದಾಯಿತು. ಈ ತಂಡಕ್ಕೆ ವಿಶ್ವಹಿಂದೂ ಪರಿಷತ್, ಬಜರಂಗದಳದ ಇತರ ೪೦ ಮಂದಿ ಈ ಕಾರ್ಯಕ್ಕೆ ಕೈಜೋಡಿಸಿದರು. ಕೊರೊನಾ ಸಂಕಷ್ಟ ಕಾಲ ಇಷ್ಟೊಂದು ದಿನಗಳಿಗೆ ವಿಸ್ತರಿಸಬಹುದು ಮತ್ತು ಸೋಂಕಿನಿAದ ಇಷ್ಟೊಂದು ಸೋಂಕಿತರು ಸಾವನ್ನಪ್ಪಬಹುದು ಎಂಬ ಯಾವುದೇ ನಿರೀಕ್ಷೆಯೂ ಇಲ್ಲದೇ ಸತ್ತವರಿಗೆ ಸದ್ಗತಿ ಪ್ರಾಪ್ತಿಯಾಗುವ ನಿಟ್ಟಿನಲ್ಲಿ ಸಂಪ್ರದಾಯಬದ್ಧವಾಗಿ ಅಂತ್ಯಸAಸ್ಕಾರಕ್ಕೆ ಈ ತಂಡ ಮುಂದಾಯಿತು. ಇವರ ಕಾರ್ಯ ಇದೀಗ ೧ ವರ್ಷ ಪೂರೈಸಿದೆ.

ಹಿಂದೂ ಸಮುದಾಯದವರು ಕೊರೊನಾ ಸೋಂಕಿನಿAದ ಸಾವನ್ನಪ್ಪಿದಾಗ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಪಡೆದುಕೊಂಡು ಹಿಂದೂ ರುದ್ರಭೂಮಿಗೆ ಕೊಂಡೊಯ್ದು ಹಿಂದೂ ಶಾಸ್ತç ಪದ್ಧತಿಯಂತೆ ಈ ಬಳಗ ಅಂತಿಮ ಸಂಸ್ಕಾರ ನೆರವೇರಿಸುತ್ತಿದೆ.

ಮೃತದೇಹವನ್ನು ಕಬ್ಬಿಣದಿಂದ ತಾವೇ ತಯಾರಿಸಿದ ಚಟ್ಟಕ್ಕೇರಿಸಿ ಊದುಕಡ್ಡಿ ಹೊತ್ತಿಸಿ, ಹೂವುಗಳನ್ನು ಇರಿಸಿ, ಬಿಳಿಬಟ್ಟೆ ಹೊದಿಸಿ ಕರ್ಪೂರ, ತುಪ್ಪ ಹಾಕಿ ತಾವೇ ಅಗ್ನಿಸ್ಪರ್ಷ ಮಾಡುತ್ತಾರೆ. ಬಳಿಕ ಮೂರು ಸುತ್ತು ಹಾಕಿ ಮಡಕೆ ಶಾಸ್ತçವನ್ನೂ ಪೂರೈಸಲಾಗುತ್ತದೆ. ಮರುದಿನ ಮೃತಪಟ್ಟವರ ಕುಟುಂಬಸ್ಥರಿಗೆ ಅಸ್ತಿಯನ್ನೂ ಇದೇ ತಂಡ ನೀಡುತ್ತದೆ. ಅಂತ್ಯಕ್ರಿಯೆಯಲ್ಲಿ ೮-೧೦ ಮಂದಿಯ ತಂಡ ಕಾರ್ಯೋನ್ಮುಖವಾಗುತ್ತದೆ.

ಈ ಎಲ್ಲಾ ಕಾರ್ಯಕ್ಕೆ ಸಾವನ್ನಪ್ಪಿದವರ ಕುಟುಂಬದವರಿAದ ಯಾವುದೇ ಹಣವನ್ನು ಈ ತಂಡ ಪಡೆಯುತ್ತಿಲ್ಲ. ತಾವೇ ಕೈಯಿಂದ ಹಣ ಹಾಕಿಕೊಂಡು ಇಂಥ ಪುಣ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸೌದೆಯ ಅಭಾವ ಕಂಡು ಬಂದಾಗ ತಾವೇ ಹಣ ಹೊಂದಿಸಿ ಸೌದೆ ತಂದದ್ದಿದೆ ಎಂದು ತಂಡದ ಸದಸ್ಯ ವಿನಯ್ ಹೇಳುತ್ತಾರೆ. ದಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಹಣ ಪಡೆದರೆ ಅದು ಅನಗತ್ಯ ಸಮಸ್ಯೆಯಾದೀತು ಎಂಬ ಹಿನ್ನೆಲೆಯಲ್ಲಿ ಇಂಥ ಯಾವುದೇ ಅಪೇಕ್ಷೆಯಿಲ್ಲದೇ ಅಂತಿಮ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದೇವೆ.

ಪಿಪಿಇ ಕಿಟ್‌ಗಳನ್ನು ೨-೩ ಗಂಟೆ ಕಾಲ ಹಾಕಿಕೊಂಡಾಗ ಆಗುವ ಸುಸ್ತು, ವೇದನೆ ಅನುಭವಿಸಿದವರಿಗೇ ಗೊತ್ತು. ಆದರೆ ಈ ಎಲ್ಲಾ ನೋವು ಸಾವನ್ನಪ್ಪಿದವರ ಕುಟುಂಬ ವರ್ಗಕ್ಕೆ ಉಂಟಾಗಿರುವ ನೋವಿಗಿಂತ ಹೆಚ್ಚಲ್ಲ ಎಂಬ ಭಾವನೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇವೆನ್ನುತ್ತಾರೆ ಅವರು. ತಮ್ಮ ತಂಡದ ಸುರೇಶ್ ಮುತ್ತಪ್ಪ ಮತ್ತು ಚೇತನ್ ಶಾಂತಿನಿಕೇತನ ಈವರೆಗೆ ನೆರವೇರಿಸಲಾದ ಎಲ್ಲಾ ೬೪ ಅಂತ್ಯಕ್ರಿಯೆಗಳ ಸಂದರ್ಭವೂ ಹಾಜರಿದ್ದು ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

ಕೊರೊನಾದಿಂದ ಸಾವನ್ನಪ್ಪಿದವರ ಬಂಧುಗಳು ಅಂತ್ಯಕ್ರಿಯೆ ಸಂದರ್ಭ ಬರಲಾಗದೇ, ಮೃತದೇಹ ಮುಟ್ಟಿ ಅಂತಿಮ ನಮನ ಸಲ್ಲಿಸಲಾಗದೇ ದೂರದಲ್ಲಿಯೇ ನಿಂತು ರೋಧಿಸುತ್ತಾರೆ. ಅವರ ಪರವಾಗಿ ನಾವು ಎಲ್ಲಾ ಕ್ರಿಯೆಗಳನ್ನೂ ಚಾಚೂ ತಪ್ಪದೇ ನೆರವೇರಿಸುತ್ತಿದ್ದೇವೆ. ಕೊನೆಗೆ ಆ ಬಂಧುಗಳು ಇಂದಿನ ದುರ್ದಿನಗಳ ಪರಿಸ್ಥಿತಿಗೆ ಮರುಗುತ್ತಾ ಕಣ್ಣೀರಿಡುತ್ತಾ ಧನ್ಯವಾದ ಸಲ್ಲಿಸುವಾಗ ನಮ್ಮ ಕಣ್ಣೂ ತೇವವಾಗುತ್ತದೆ ಎಂದು ಭಾವುಕರಾಗುತ್ತಾರೆ.

ಮೊದಲೆಲ್ಲಾ ವಾರಕ್ಕೆ ೧ ಮೃತದೇಹ ಬರುತ್ತಿತ್ತು,, ಈಗ ದಿನಕ್ಕೇ ೭-೮ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಬೇಕಾಗಿ ಬಂದಿರುವುದು ಕೊರೊನಾ ಎರಡನೇ ಅಲೆಯ ಅಪಾಯ ಸೂಚಿಸುತ್ತದೆ. ಹೀಗಾಗಿ ಯಾರೂ ನಿರ್ಲಕ್ಷö್ಯ ಮಾಡಬೇಡಿ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳದ ಪರವಾಗಿ ವಿನಯ್ ವಿನಮ್ರರಾಗಿ ವಿನಂತಿಸಿದ್ದಾರೆ.

ನಗದು ಹೊರತುಪಡಿಸಿ ಸೌದೆ, ತುಪ್ಪ ಕೊಡಲು ಇಚ್ಚಿಸುವ ದಾನಿಗಳಿಗೆ ಸಂಪರ್ಕ ಸಂಖ್ಯೆ - ಚೇತನ್, ೯೪೪೮೩ ೨೫೧೩೬

ಸೇವಾಭಾರತಿ ಸೇವೆ

ಕುಶಾಲನಗರ ಮತ್ತು ಅಲ್ಲಿನ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿAದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ಸೇವಾಭಾರತಿ ಬಳಗ ನೆರವೇರಿಸುತ್ತಾ ಬಂದಿದೆ. ಈವರೆಗೆ ೩೩ ಅಂತ್ಯಕ್ರಿಯೆಗಳನ್ನು ಈ ತಂಡ ನೆರವೇರಿಸಿದೆ. ಸೇವಾ ಮನೋಭಾವದಿಂದಲೇ ಈ ಕಾರ್ಯವನ್ನು ಈ ತಂಡ ನೆರವೇರಿಸುತ್ತಿದೆ. ಕೊರೊನಾ ಸೋಂಕಿತರ ಅಂತ್ಯಸAಸ್ಕಾರಕ್ಕೆ ಮನೆಯವರೇ ಬರಲಾಗದ ಪರಿಸ್ಥಿತಿಯಲ್ಲಿ ಪಿಪಿಇ ಕಿಟ್ ನೀಡಿದರೂ ಮನೆಯವರು ಹಾಜರಾಗಲು ಹಿಂಜರಿಯುವ ಪರಿಸ್ಥಿತಿಯಲ್ಲಿ ಸೇವಾ ಭಾರತಿ ತಂಡ ಸಾವನ್ನಪ್ಪಿದವರ ಅಂತಿಮ ಸಂಸ್ಕಾರ ಕೈಗೊಂಡಿದೆ. ಕೊನೆಯುಸಿರೆಳೆದವರ ಮುಖ ಕೂಡ ನೋಡಲಾಗದೇ ಮನೆಯವರು ಪರಿತಪಿಸುವಂಥ ಧಾರುಣ ಸ್ಥಿತಿ ನೆನಪಿಸಿಕೊಂಡು ನಮ್ಮ ಮನಸ್ಸಿಗೆ ತೀವ್ರ ನೋವಾಗುತ್ತದೆ. ಇಂಥ ದಿನಗಳು ಮುಗಿದರೆ ಸಾಕು ಎಂದು ಪ್ರತೀ ಸಂಸ್ಕಾರದ ವೇಳೆಯೂ ಪ್ರಾರ್ಥಿಸುತ್ತಿದ್ದೇವೆನ್ನುತ್ತಾರೆ ಸೇವಾಭಾರತಿಯ ಕಾರ್ಯಕರ್ತ ನವನೀತ್.

ಕೆಲವೊಮ್ಮೆ ಅಸ್ತಿ ಪಡೆಯಲೂ ಕುಟುಂಬದವರು ಬಾರದೇ ಇದ್ದಾಗ ನಾವೇ ಕಾವೇರಿ ಹೊಳೆಯಲ್ಲಿ ಸತ್ತವರ ಹೆಸರಲ್ಲಿ ಅಸ್ತಿ ವಿಸರ್ಜಿಸಿದ್ದೇವೆ ಎಂದು ಹೇಳುವ ನವನೀತ್ ಹೇಳಿಕೆಯಲ್ಲಿ ಸಾರ್ಥಕತೆಯಿತ್ತು. ಸೇವಾಭಾರತಿಯ ೧೫ ಮಂದಿಯ ತಂಡದಲ್ಲಿ ಪ್ರತೀ ಅಂತ್ಯಸAಸ್ಕಾರದ ಸಂದರ್ಭ ಸರದಿಯಂತೆ ೬-೭ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ತಮಗೆ ಮೃತದೇಹದ ಅಂತ್ಯಸAಸ್ಕಾರ ನೆರವೇರಿಸಲಾಗದ ಸ್ಥಿತಿಯಲ್ಲಿ ಪಿಪಿಇ ಕಿಟ್‌ಗಳನ್ನು ೩-೪ ಗಂಟೆ ಧರಿಸಿ ಅಂತ್ಯಸAಸ್ಕಾರ ನೆರವೇರಿಸಿದ್ದಕ್ಕೆ ಮೃತರ ಕುಟುಂಬಸ್ಥರು ಈ ಕಾರ್ಯಕರ್ತರ ಕಾಲು ಹಿಡಿದು ಧನ್ಯವಾದ ಹೇಳಿದ ಘಟನೆಯೂ ಇದೆಯಂತೆ. ಕೆಲವರು ಮನೆಯಲ್ಲಿ ನಡೆಸಲಾಗುವ ಶ್ರಾದ್ಧ ಕಾರ್ಯಗಳಿಗೂ ಸೇವಾಭಾರತಿ ತಂಡವನ್ನು ಮನೆಯ ಸದಸ್ಯರಂತೆ ಆಹ್ವಾನಿಸಿದ್ದಾರಂತೆ.

ಈವರೆಗೂ ಕೈಗೊಂಡ ಅಂತ್ಯಸAಸ್ಕಾರಗಳಿಗೆ ಕುಟುಂಬಸ್ಥರಿAದ ಹಣ ಪಡೆದಿಲ್ಲ. ಸೇವಾ ಭಾರತಿಯ ಪ್ರತೀ ಸದಸ್ಯರೂ ಕೈಯಿಂದ ಹಣ ವೆಚ್ಚ ಮಾಡಿ ಅಂತ್ಯಕ್ರಿಯೆ ನಡೆಸಿದ್ದೇವೆ. ಭವಿಷ್ಯದಲ್ಲಿಯೂ ಹಣ ಪಡೆಯದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದರು ನವನೀತ್.

ರಿಲೀಫ್, ಟಾಸ್ಕ್ ಟೀಮ್

ಕೊರೊನಾದಿಂದ ಕೊಡಗು ಜಿಲ್ಲೆಯಲ್ಲಿ ಸಾವನ್ನಪ್ಪಿದ ಪ್ರಥಮ ಪ್ರಕರಣವೇ ಮುಸಲ್ಮಾನ್ ಸಮುದಾಯದವರಾಗಿತ್ತು. ಈ ಸಂದರ್ಭ ಜಿಲ್ಲಾಡಳಿತಕ್ಕೆ ಒತ್ತಡ ಹೇರಿ ನಮ್ಮ ಸಂಪ್ರದಾಯದAತೆ ಅಂತ್ಯಸAಸ್ಕಾರ ನಡೆಸಲು ಮುಂದಾದೆವು. ಪಿಪಿಇ ಕಿಟ್ ಧರಿಸಿ ನಮ್ಮ ಸಂಪ್ರದಾಯದ ಅಂತಿಮ ವಿಧಿವಿಧಾನಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿ ಕೂಡ ಪಡೆದೆವು. ಕಳೆದ ೧ ವರ್ಷದಿಂದ ೨ ಹಿಂದೂ, ೨ ಕಿಶ್ಚಿಯನ್ ಸೇರಿದಂತೆ ೨೯ ಮುಸಲ್ಮಾನರ ಅಂತ್ಯಸAಸ್ಕಾರ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ರಿಲೀಫ್ ಅಂಡ್ ಟಾಸ್ಕ್ ಫೋರ್ಸ್ನ ಕಾರ್ಯಕರ್ತ ಕ್ರಿಯೆಟೀವ್ ಖಲೀಲ್.

ಮಡಿಕೇರಿ, ಕುಶಾಲನಗರ, ಕೊಡ್ಲಿಪೇಟೆ, ನಾಪೋಕ್ಲು, ಸುಂಟಿಕೊಪ್ಪದ ಸ್ಮಶಾನದಲ್ಲಿಯೂ ದಫನ ಕಾರ್ಯ ನೆರವೇರಿಸಿದ್ದೇವೆ. ಕೊರೊನಾದ ಎರಡನೇ ಅಲೆ ನಮ್ಮ ತಂಡದ ನಿರೀಕ್ಷೆಗಿಂತ ಅತೀ ಭೀಕರವಾಗಿದೆ. ಹೆಚ್ಚುತ್ತಿರುವ ಸಾವಿನ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇಂಥ ಪರಿಸ್ಥಿತಿಯಲ್ಲಿಯೂ ಸಾವನ್ನಪ್ಪಿದವರ ಅಂತಿಮ ಸಂಸ್ಕಾರದ ಮೂಲಕ ನಮ್ಮ ಸೇವೆಯನ್ನು ೪ ತಂಡಗಳಾಗಿ ವಿಭಜಿಸಿಕೊಂಡು ಮುಂದುವರೆಸಿದ್ದೇವೆ ಎಂದೂ ಖಲೀಲ್ ಹೇಳಿದರು.

ಕೊರೊನಾ ಸೋಂಕಿನಿAದ ಕೆಲವು ದೇಶಗಳಲ್ಲಿ ಮೃತದೇಹಗಳನ್ನು ಎಸೆಯುವ ದೃಶ್ಯ ಮನಕಲುಕಿತು. ಈ ಸಂದರ್ಭವೇ ನಾವೂ ಕೂಡ ಕೊನೇ ಉಸಿರೆಳೆದವರಿಗೆ ಅಂತಿಮ ಪಯಣವನ್ನು ಕೂಡ ಗೌರವಯುತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಯೋಚಿಸಿ ಈ ಕಾರ್ಯಕ್ಕೆ ಮುಂದಾದೆವು ಎಂದು ಹೇಳಿದ ಖಲೀಲ್, ಜೀವ ಬಿಟ್ಟ ಮೇಲೂ ವ್ಯಕ್ತಿಗೆ ಗೌರವಯುತ ಸಂಸ್ಕಾರ ನಡೆಯಬೇಕೆಂಬುದೇ ನಮ್ಮ ಧ್ಯೇಯ ಎಂದು ತಿಳಿಸಿದರು.

ಕೊರೊನಾದಿಂದ ಸಾವನ್ನಪ್ಪುವ ಮನುಷ್ಯರ ಪರಿಸ್ಥಿತಿ ನೋಡುವಾಗ ಬೇಸರ ಎನಿಸುತ್ತದೆ. ಯಾರದ್ದೇ ಆದರೂ ಕೊನೇ ಕ್ಷಣ ಹೇಗಿರುತ್ತೆ ಎಂಬುದೂ ಊಹಿಸಲೂ ಆಗದು. ಸತ್ತ ಮೇಲೆ ಚಟ್ಟ ಹೊರಲು ನಾಲ್ಕು ಮಂದಿಯನ್ನಾದರೂ ಸಂಪಾದನೆ ಮಾಡಿರಬೇಕು. ಕೊರೊನಾದಿಂದಾಗಿ ಬಂಧುಮಿತ್ರರಿಗೇ ಮೃತಪಟ್ಟವರ ಮುಖವನ್ನೇ ನೋಡಲಾಗದ ದುಸ್ಥಿತಿಯಲ್ಲಿ ನಮ್ಮ ತಂಡ ಕುಟುಂಬದವರAತೆ ಅಂತಿಮ ಕ್ರಿಯೆ ನೆರವೇರಿಸಿ ಗೌರವಯುತ ವಿದಾಯ ಹೇಳುತ್ತಿದ್ದೇವೆ ಎಂದು ಖಲೀಲ್ ಸಮಾಧಾನದ ಮಾತುಗಳನ್ನಾಡಿದರು.

ಸಮಾಜದಲ್ಲಿ ಕೆಲವೊಂದು ಕಾರ್ಯಗಳು ಮೌಲ್ಯ ಕಟ್ಟಲಾಗದೇ ಇರುವಂಥದ್ದು. ಕೆಲವರ ಸೇವೆ ಊಹಿಸಲೂ ಆಗದಂಥದ್ದು. ತಮ್ಮಷ್ಟಕ್ಕೇ ತಾವು ಸೇವಾ ಕಾರ್ಯ ನೆರವೇರಿಸುವ ಇಂಥ ಸೇವಾ ಕಾಯಕ ಯೋಗಿಗಳಿಗೆ...

ಸಮಾಜದ ನಾಗರಿಕರಾಗಿ ನಾವೂ ಕೃತಜ್ಞತೆ, ಧನ್ಯತೆಯ ಅಭಿನಂದನೆ ಸಲ್ಲಿಸಲೇಬೇಕು.

- ಅನಿಲ್ ಎಚ್.ಟಿ.