v ನಿಂಬೆ ಹಣ್ಣಿನ ರಸವನ್ನು ಸೇವಿಸುವದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

v ನಿಂಬೆಯ ಹಣ್ಣಿನ ರಸವನ್ನು ಕಿವಿಗೆ ಹನಿ-ಹನಿಯಾಗಿ ಹಾಕಿದರೆ ಕಿವಿ ಸೋರುವದು ನಿಲ್ಲುವದು.

v ನಿಂಬೆಯ ಹಣ್ಣಿನ ರಸವನ್ನು ಸೇವಿಸುವದರಿಂದ ಬಳಲಿಕೆ ಹಾಗೂ ದಾಹ ನಿವಾರಣೆಯಾಗುವದು.

v ಒಂದು ನಿಂಬೆಯ ಹಣ್ಣಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸುವದರಿಂದ ಉರಿಮೂತ್ರ ನಿವಾರಣೆಯಾಗುವದು.

v ಒಂದು ಟೀ ಚಮಚ ನಿಂಬೆಯ ಹಣ್ಣಿನ ರಸಕ್ಕೆ ಒಂದು ಟೀ ಚಮಚ ಈರುಳ್ಳಿ ರಸ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಲೇರಿಯಾ ರೋಗದವರಿಗೆ ಫಲ ಕಂಡುಬರುವದು.

v ನಿಂಬೆಯ ರಸವನ್ನು, ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಸೇವಿಸುವದರಿಂದ ಎದೆ ನೋವು, ತಲೆನೋವು ನಿವಾರಣೆಯಾಗುವದು.