ಸೋಮವಾರಪೇಟೆ, ಏ. ೨೯: ಮನೆಯ ಶೌಚಾಲಯದಲ್ಲಿ ಜಾರಿಬಿದ್ದು ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಪಟ್ಟಣದ ಬೇಳೂರು ರಸ್ತೆಯಲ್ಲಿ ಸಂಭವಿಸಿದೆ.
ಬೇಳೂರು ರಸ್ತೆಯ ನಿವಾಸಿ ಬೀತ್ರಮ್ಮ ನಾಣಯ್ಯ ಅವರ ಪುತ್ರ, ಪಟ್ಟಣದ ಮಲ್ನಾಡ್ ಕಂಪ್ಯೂಟರ್ ಟ್ರೆöÊನಿಂಗ್ ಸೆಂಟರ್ನಲ್ಲಿ ಕಂಪ್ಯೂಟರ್ ಟ್ರೆöÊನಿಂಗ್ ನೀಡುತ್ತಿದ್ದ ರಮೇಶ್ (೩೨) ಎಂಬವರೇ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾದವರು.
ನಿನ್ನೆ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಮನೆಯ ಶೌಚಾಲಯಕ್ಕೆ ತೆರಳಿದ ರಮೇಶ್, ಆಕಸ್ಮಿಕವಾಗಿ ಕಾಲು ಜಾರಿ ಕೆಳ ಬಿದ್ದಿದ್ದು, ಪ್ರಜ್ಞಾಹೀನರಾಗಿದ್ದಾರೆ. ತಕ್ಷಣ ಸ್ಥಳೀಯರು ರಮೇಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಸಿಟಿ ಸ್ಕಾö್ಯನಿಂಗ್ ನಡೆಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್, ವೆನ್ಲಾಕ್ ಹಾಗೂ ಸುರತ್ಕಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ೪ ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಕಾಲು ಜಾರಿ ಕೆಳ ಬಿದ್ದ ಸಂದರ್ಭ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವಿವಾಹಿತರಾಗಿದ್ದ ರಮೇಶ್ ಅವರು ತಾಯಿ ಸೇರಿದಂತೆ ಈರ್ವರು ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.